ನ್ಯೂಸ್ ಆ್ಯರೋ : ನ್ಯಾಶನಲ್ ಕ್ರಶ್ ಅಂತಲೇ ರಾಷ್ಟ್ರಮಟ್ಟದಲ್ಲಿ ಫೇಮಸ್ ಆಗಿರೋ ನಟಿ ರಶ್ಮಿಕಾ ಮಂದಣ್ಣ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈ ಬೆಡಗಿ ಆಮೇಲೆ ಸೌತ್‌ ಇಂಡಿಯನ್‌ ಇಂಡಸ್ಟ್ರಿಯಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹುಡುಗಿ ಬಗ್ಗೆ ಆರಂಭದಿಂದಲೂ ಕನ್ನಡಿಗರಿಗೆ ಅಸಮಾಧಾನ ಇದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದ್ಯಕ್ಕೀಗ ಈ ನಟಿಯನ್ನು ಕನ್ನಡ ಇಂಡಸ್ಟ್ರಿಯಲ್ಲಿ ಬ್ಯಾನ್ ಮಾಡಲಾಗಿದೆ ಅನ್ನೋ ಮಾತುಗಳಿವೆ. ಆದರೆ ಒಬ್ಬ ನಟಿಯನ್ನು ಬ್ಯಾನ್ ಮಾಡೋದು ಎಷ್ಟು ಸರಿ? […]
ನ್ಯೂಸ್ ಆ್ಯರೋ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಸಭೆ ಎಸ್‌ಡಿಎಂ ಕಲಾಭವನ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದಿದ್ದು, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೇರೆ ಬೇರೆ ಪಕ್ಷಗಳಿಂದ ಹಲವು ನಾಯಕರುಗಳು ಬಿಜೆಪಿಗೆ ಸೇರ್ಪಡೆಗೊಂಡರು. ಸೇರ್ಪಡೆಗೊಂಡ ಹಲವರಲ್ಲಿ ಹೆಚ್ಚಿನವರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡವರಾಗಿದ್ದು, ಬೆಳ್ತಂಗಡಿ ತಾಲೂಕಿನ ಕಾಂಗ್ರೆಸ್ ಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿಯಾಗಿದೆ. ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡರಾಗಿದ್ದ ಚಂದನ್ ಪ್ರಸಾದ್ ಕಾಮತ್, […]
ನ್ಯೂಸ್ ಆ್ಯರೋ : ದೈವವನ್ನು ನಂಬಿದವರನ್ನು ಮಾಡಿದವರನ್ನು ಕರಾವಳಿಯ ನಂಬುಗೆಯ ಶಕ್ತಿಗಳಾದ ದೈವಗಳು ಕೈಬಿಟ್ಟ ಪ್ರಸಂಗಗಳೇ ಇಲ್ಲ. ಭಕ್ತಿಯಿಂದ ಪೂಜೆ ಸಲ್ಲಿಸಿ, ಸಂಕಷ್ಟಗಳನ್ನು ಹೇಳಿಕೊಂಡರೆ ಅವರೆ ನಮ್ಮನ್ನು ಕಾಪಾಡುತ್ತಾರೆ ಎನ್ನುವ ನಂಬಿಕೆ ಕರಾವಳಿ ಜನರಲ್ಲಿದೆ. ಈಚೆಗೆ ದೈವಗಳ ಕಾರ್ಣಿಕಗಳು ಪವಾಡಗಳಂತೆ ನಡೆಯುತ್ತಿದ್ದು, ಕೆಲವೊಂದು ಘಟನೆಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವುದುಂಟು. ‌ ಇದೀಗ ಉಡುಪಿಯಲ್ಲಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಪವಾಡ ಅಚ್ಚರಿ ಉಂಟು ಮಾಡಿದೆ. ‘ಮಮ್ಮಾಯಿದೂತೆ, ಊರುಗುದಾತೆ, ನಂಬಿನಾಯಗ್‌ ವೈದ್ಯನಾತೆ’ ಎಂಬ ಕೀರ್ತಿಯೊಂದಿಗೆ ತುಳುನಾಡಿನಾದ್ಯಂತ ಪ್ರಸಿದ್ದವಾಗಿರುವುದು ಶ್ರೀ ಬಬ್ಬುಸ್ವಾಮಿ. […]
ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು ಅದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ಸಮಯ ಅದನ್ನು ಕಂಡ ಮನೆಯವರು ಪ್ರಮಾಣೀಕೃತ ಉರಗಮಿತ್ರ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ತಕ್ಷಣ ಅದನ್ನು ರಕ್ಷಿಸಿದ್ದಾರೆ. ಫೋರೆಸ್ಟನ್ಸ್ ಬೆಕ್ಕು ಹಾವು (ಸಾರಿಬಳ) ಹೆಚ್ಚಾಗಿ […]
ನ್ಯೂಸ್ ಆ್ಯರೋ‌ : ಅನಧಿಕೃತವಾಗಿ ಮತದಾರನ ಗುರುತಿನ ಚೀಟಿಯನ್ನು ವಿತರಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕಚೇರಿಯ ರಸ್ತೆಯ ಜನಸೇವಾ ಕೇಂದ್ರವೊಂದರ ಮೇಲೆ ಎಸಿ, ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಂಗಡಿಗೆ ಬೀಗ ಜಡಿದು ಮುಟ್ಟುಗೋಲು ಹಾಕಿರುವ ಘಟನೆ ಇಂದು ಸಂಜೆ ನಡೆದಿದೆ. ಮಂಜಲ್ಪಡ್ಪುವಿನ ನಿವಾಸಿಯೊಬ್ಬರ ಮಗನ ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿ ಓಟರ್ ಐಡಿ ಮತ್ತೆ ಪಡೆಯುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ […]
ನ್ಯೂಸ್ ಆ್ಯರೋ‌ : ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾರ್ಮಿಕರ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತುಂಬಿಸಿ ಹೋಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಟರ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ದಿಬೋ ಶಂಕರ್ ನಾಯಕ್ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗೊಂಡಿದ್ದು, ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು […]