1. Home
  2. Accident
  3. News
  4. ಮಂಗಳೂರು : ಕಲ್ಲಾಪು ಬಳಿ ಲಾರಿ – ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಾಯ

ಮಂಗಳೂರು : ಕಲ್ಲಾಪು ಬಳಿ ಲಾರಿ – ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಾಯ

ಮಂಗಳೂರು : ಕಲ್ಲಾಪು ಬಳಿ ಲಾರಿ – ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಾಯ
0

ನ್ಯೂಸ್‌ ಆ್ಯರೋ : ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಪಂಪ್‌ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಜಪ್ಪಿನಮೊಗರು ನಿವಾಸಿ ಗಂಗಾಧರ (45), ಮಂಗಳೂರು ಪಜೀರು ನಿವಾಸಿ ನೇತ್ರಾವತಿ (48) ಮೃತರು.

ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಎದುರು ಸ್ಕೂಟರ್‌ ಮತ್ತು ಲಾರಿಯ ನಡುವೆ ಅಪಘಾತ ಸಂಭವಿಸಿದೆ. ಗಂಗಾಧರ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ನೇತ್ರಾವತಿ, ಅವರ ಮಗಳು ಮೋಕ್ಷ (4) ಮತ್ತು ಅವರ ಅಕ್ಕನ ಮಗ ಜ್ಞಾನೇಶ್‌ (6) ಇದ್ದರು.

ಲಾರಿಯನ್ನು ಚಾಲಕ ಹನೀಫ್‌ ಎಂಬಾತ ಚಲಾಯಿಸುತ್ತಿದ್ದು, ಆತನ ದುಡುಕುತನ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ನಾಲ್ವರು ರಸ್ತೆಗೆ ಬಿದ್ದಿದ್ದಾರೆ. ಈ ಪೈಕಿ ಗಂಗಾಧರ್ ಹಾಗೂ ನೇತ್ರಾವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಜ್ಞಾನೇಶ್ ಹಾಗೂ ಮೋಕ್ಷಾ ಅವರು ಗಾಯಗೊಂಡಿದ್ದು, ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..