1. Home
  2. Team News Arrow

Team News Arrow

1ನೇ ತರಗತಿಗೆ ಸೇರಿಸಲು ಮಕ್ಕಳಿಗೆ ಆರು ವರ್ಷ ಮೀರೋದು ಕಡ್ಡಾಯ – ವಯೋಮಿತಿ ನಿಗದಿಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ನ್ಯೂಸ್ ಆ್ಯರೋ : ರಾಜ್ಯದಲ್ಲಿ ಇನ್ಮುಂದೆ 1 ನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ಆರು ವರ್ಷ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು 2025-26 ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1 ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ ತರಗತಿಗೆ […]

ಕೋಟ್ಯಾಂತರ ಕ್ರೀಡಾಪ್ರೇಮಿಗಳ ಹೃದಯಗೆದ್ದ ಎಂಬಾಪೆಗೆ ಜನ್ಮದಿನದ ಸಂಭ್ರಮ – ಡಕಾಯಿತರ ಜಾಗದಲ್ಲಿ ಹುಟ್ಟಿ ಬೆಳೆದ ಹೂ ಇಡೀ ಜಗತ್ತಲ್ಲೇ ಕಂಪು ಬೀರಿದ್ದು ಹೇಗೆ?

ನ್ಯೂಸ್‌ ಆ್ಯರೋ : ಫಿಫಾ ಫುಟ್‌ಬಾಲ್‌ ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ ಸೋತರೂ ಏಕಾಂಗಿಯಾಗಿ ವೀರೋಚಿತ ಹೋರಾಟ ನಡೆಸಿ, ಜಗತ್ತಿನ ಕೋಟ್ಯಂತರ ಕ್ರೀಡಾಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿರುವ ಕಿಲಿಯನ್‌ ಎಂಬಾಪೆಗೆ ಇಂದು ಜನ್ಮದಿನದ ಸಂಭ್ರಮ. ಕತಾರ್​ನಲ್ಲಿ ಜರುಗಿದ ಫಿಫಾ ವಿಶ್ವಕಪ್ ಟೂರ್ನಿಗೆ ಭಾನುವಾರ ತೆರೆಬಿದ್ದಾಗಿದೆ. ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್‌ ಮೂಲಕ ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟೀನ ತಂಡ ಪ್ರಶಸ್ತಿ ಗೆದ್ದಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಸ್ಟಾರ್ ಆಟಗಾರರಾದ ಮೆಸ್ಸಿ, ರೊನಾಲ್ಡೊ ಜೊತೆಗೆ ಕೇಳಿಬಂದ ಮತ್ತೊಂದು ಹೆಸರು […]

ಅವತಾರ್‌ 2ಗೆ ಪ್ರೇರಣೆಯಾಗಿರುವುದು ಹಿಂದೂ ಪುರಾಣ – ಅಚ್ಚರಿ ಸಂಗತಿ ಬಿಚ್ಚಿಟ್ಟ ಜಗಮೆಚ್ಚಿದ ನಿರ್ದೇಶಕ ಕ್ಯಾಮರೂನ್‌

ನ್ಯೂಸ್ ಆ್ಯರೋ : ಟೈಟಾನಿಕ್ ಎಂಬ ದುರಂತ ಪ್ರೇಮ ಕಥನವನ್ನು ಮಹಾದೃಶ್ಯ ಕಾವ್ಯವನ್ನಾಗಿ ಮಾಡಿ ತೋರಿಸಿ ಇತಿಹಾಸ ನಿರ್ಮಿಸಿದ್ದು ಹಾಲಿವುಡ್​ನ ಖ್ಯಾತ ನಿರ್ದೇಶಕ ಜೇಮ್ಸ್​ ಕ್ಯಾಮರೂನ್. ಇವರು 2009ರಲ್ಲಿ ನಿರ್ದೇಶಿಸಿದ್ದ ಅವತಾರ್ ಒನ್​ ಚಿತ್ರ ಮತ್ತೊಮ್ಮೆ ದಾಖಲೆಯ ಪುಟವನ್ನು ಸೇರಿತ್ತು. ಇದೀಗ ‘ಅವತಾರ್‌: ದಿ ವೇ ಆಫ್‌ ವಾಟರ್‌’ ಚಿತ್ರದ ಮೂಲಕ ಮತ್ತೊಮ್ಮೆ ವಿಶ್ವವನ್ನು ಗೆದ್ದಿದ್ದಾರೆ. ಹೊಸ ವರ್ಷದ ಬರುವಿಕೆಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಇದೀಗ ಜಗತ್ತಿನಾದ್ಯಂತ ಸದ್ಯ ಅವತಾರ್​ ದಿ ವೇ ಆಫ್​ […]

ವಾಟ್ಸಾಪ್ ನಲ್ಲಿ ಬರೋ ‘Hi mum’ ಸಂದೇಶ ದೋಚಿದ್ದು ಬರೋಬ್ಬರಿ 57 ಕೋಟಿ : ನಿಮಗೇ ಗೊತ್ತೇ ಆಗದಂತೆ ವಾಟ್ಸಾಪ್ ನಲ್ಲೇ ವಂಚಕರು ಮಾಡ್ತಾರೆ ವಂಚನೆ ; ವರದಿ ಇಲ್ಲಿದೆ..

ನ್ಯೂಸ್ ಆ್ಯರೋ : ವಾಟ್ಸ್‌ ಆ್ಯಪ್ ಮೂಲಕ ಇದೀಗ ವಂಚನೆಯ ಜಾಲ ತೆರೆದುಕೊಂಡಿದ್ದು, ಕುಟುಂಬ ಸದಸ್ಯರ ಹೆಸರನ್ನು ಹೇಳಿಕೊಂಡು ಜನರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ.’ದಿ ಇಂಡಿಪೆಂಡೆಂಟ್’ ನಲ್ಲಿ ಪ್ರಕಟವಾದ ವರದಿ ಪ್ರಕಾರ, ‘Hi Mum’ ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಂ ಕಾರಣ ಆಸ್ಟ್ರೇಲಿಯಾದ ಸಾವಿರಾರು ಜನರು 2022ರಲ್ಲಿ $7 ಮಿಲಿಯನ್ ಅಂದರೆ, 57 ಕೋಟಿ ರೂ.ಗಳಿಗೂ ಅಧಿಕ ನಷ್ಟವನ್ನು ಅನುಭವಿಸಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಗ್ರಾಹಕ ಮತ್ತು ಪ್ರತಿಸ್ಪರ್ಧೆ ಆಯೋಗದ ಪ್ರಕಾರ, ಕಳೆದ 3 ತಿಂಗಳಿನಲ್ಲಿ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ನ್ಯೂಸ್‌ ಆ್ಯರೋ : ಹೊಸ ವರ್ಷದಲ್ಲಿ ಪ್ರಮುಖ ಕಾರು ಕಂಪನಿಗಳ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ₹10 ಲಕ್ಷದಿಂದ ₹ 20 ಲಕ್ಷ‌ದ ಕಾರುಗಳಿಗೆ ಹೆಚ್ಚಿನ ಬೇಡಿಕೆಯಲ್ಲಿದೆ. ನೀವೇನಾದರೂ ಕಾರು ಖರೀದಿಸುವ ಫ್ಲಾನ್‌ನಲ್ಲಿದ್ದರೆ ಈ ಲೇಖನದಲ್ಲಿ ₹10ಲಕ್ಷ ಹಣದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರುಗಳ ಮಾಹಿತಿಯನ್ನು ನೀಡಲಾಗಿದೆ. 1. ಮಹೀಂದ್ರಾ ಎಕ್ಸ್ ಯುವಿ300: ದೆಹಲಿ ಎಕ್ಸ್ ಶೋರೂಂ ಪ್ರಕಾರ ₹8.41 ಲಕ್ಷ ಆರಂಭಿಕ ಬೆಲೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರಿನ […]

ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? : ಟ್ವಿಟ್ಟರ್‌ನಲ್ಲಿ ಮತ ಕೇಳಿದ ಎಲಾನ್ ಮಸ್ಕ್ ಅಚ್ಚರಿ ಮೂಡಿಸಿದ ಟ್ವಿಟ್ಟರ್‌ ಮಾಲೀಕನ ನಡೆ

ನ್ಯೂಸ್ ಆ್ಯರೋ : ಟ್ವಿಟ್ಟರ್ ಖರೀದಿ ಬಳಿಕ ಒಂದಲ್ಲ ಒಂದು ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಇದೀಗ ಇಂದು ಮಾಡಿರುವ ಟ್ವೀಟ್ ಎಲ್ಲರಿಗೂ ಅಚ್ಚರಿಯಾಗಿದೆ. ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? ಎಂಬುದನ್ನು ತಿಳಿಯಲು ನಿಮ್ಮ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಈ ಮತಗಣನೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದೀಗ ಎಲಾನ್ ಮಾಸ್ಕ್‌ ಅವರ ಹುದ್ದೆ ಟ್ವಿಟ್ಟರ್ ಸದಸ್ಯರ ಮೇಲೆ ನಿಂತಿದೆ. ಅವರು ಟ್ವೀಟ್‌ ಮಾಡಿರುವ ಕೆಲವೇ ನಿಮಿಷಗಳಲ್ಲಿ ಅಗಾಧ ಸಂಖ್ಯೆಯಲ್ಲಿ ಮತಗಳು ಬೀಳುತ್ತಿವೆ. ಸಾಕಷ್ಟು ಜನರು […]

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ಮಾಸಿಕ ₹ 50 ಸಾವಿರದಿಂದ ₹ 1.60 ಲಕ್ಷ ತನಕ ವೇತನ : ವಿವರ ಇಲ್ಲಿವೆ..

ನ್ಯೂಸ್‌ ಆ್ಯರೋ : ಮಂಗಳೂರಿನ ಬೈಕಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್‌) ಖಾಲಿ ಇರುವ 95 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯನ್ನು ಹುಡುಕುತ್ತಿರುವ ಕರಾವಳಿಯ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2023ರ ಜನವರಿ 15 ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಮಂಗಳೂರು ಉದ್ಯೋಗದ ಕಾರ್ಯ ಸ್ಥಾನವಾಗಿದ್ದು, ಮಾಸಿಕ ₹ 50,000 ರಿಂದ ₹ […]

ಬಜಪೆ : ಎರಡು ತಿಂಗಳ ಹಿಂದೆ ‌ಮನೆಬಿಟ್ಟಿದ್ದ ವ್ಯಕ್ತಿ ಶವವಾಗಿ ಪತ್ತೆ – ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ

ನ್ಯೂಸ್ ಆ್ಯರೋ : ಮಂಗಳೂರು ಕಮೀಷನರೇಟ್ ನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಗ್ರಾಮ ಪಂಚಾಯತ್ ನ ಸ್ತ್ರೀ ಶಕ್ತಿ ಭವನದ ಜಗಲಿಯಲ್ಲಿ ವ್ಯಕ್ತಿಯೊಬ್ಬರ ಶವವು ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಗಂಜಿಮಠ ಗಾಂಧಿನಗರ ನಿವಾಸಿ ಸುರೇಶ್ ಗೌಡ(35) ಎಂದು ಗುರುತಿಸಲಾಗಿದೆ. ತಲೆಯಿಂದ ವಿಪರೀತ ರಕ್ತಸ್ರಾವವಾಗಿದ್ದು ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸುರೇಶ್ ಗೌಡ ಅವರು ಕಳೆದ ಎರಡು ತಿಂಗಳ ಹಿಂದೆಯೇ ಮನೆ ಬಿಟ್ಟಿದ್ದು, ವಿಪರೀತ ಕುಡಿದ […]

ಶಿವಮೊಗ್ಗ ‌: ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೋಲಿಸರ ಗುಂಡಿನ ದಾಳಿ – ಬಂಧನಕ್ಕೆ ತೆರಳಿದ್ದ ಪೋಲಿಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಅಂದರ್

ನ್ಯೂಸ್ ಆ್ಯರೋ‌ : ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿದ್ದಲ್ಲದೇ ಆಕೆಯ ಕಾರ್ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಾಸ್ ಪಡೆಯಲು ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೋಲಿಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ ರೌಡಿ ಶೀಟರ್ ಒಬ್ಬನ ಮೇಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೋಲಿಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ರೌಡಿಶೀಟರ್ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲ್ಲೆ ಮತ್ತು ಕಾರ್ ಸುಟ್ಟ ಪ್ರಕರಣವೊಂದರ ಬಂಧನಕ್ಕೆ ತೆರಳಿದ್ದ ವೇಳೆ ಗ್ರಾಮಾಂತರ ಠಾಣೆ […]

FIFA WORLD CUP FINAL : ಕಾಲ್ಚೆಂಡಿನ ಜಾತ್ರೆಯಲ್ಲಿ ಗೆದ್ದು ಬೀಗಿದ ಅರ್ಜೆಂಟೀನಾ – ಚಾಂಪಿಯನ್‌ ತಂಡ, ಉಳಿದ ತಂಡಗಳು ಬಾಚಿದ್ದೆಷ್ಟು ಕೋಟಿ ಗೊತ್ತಾ..‌!?

ನ್ಯೂಸ್‌ಆ್ಯರೋ : ಕತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ​ಹೊರಹೊಮ್ಮಿದೆ. ಕಾಲ್ಚೆಂಡಿನ ಜಾತ್ರೆಯಲ್ಲಿ 1986ರ ಬಳಿಕ ಜಗತ್ತಿನ ಮಾಂತ್ರಿಕ ಆಟಗಾರ ಲಿಯೋನಲ್ ಮೆಸ್ಸಿ ಅವರನ್ನು ಒಳಗೊಂಡ ಅರ್ಜೆಂಟೀನಾ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಫಿಫಾ ವಿಶ್ವಕಪ್ ಫುಟ್​​ಬಾಲ್​ ಟೂರ್ನಿಯ ಫೈನಲ್​​​​ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವ ಮೂಲಕ 3ನೇ ಬಾರಿಗೆ ಫಿಫಾ ಕಿರೀಟಕ್ಕೆ ಮುತ್ತಿಕ್ಕಿದೆ. ಕ್ರೀಡಾ ಲೋಕದ ಅತಿದೊಡ್ಡ ಹಬ್ಬದಲ್ಲಿ ಗೆದ್ದ ತಂಡಕ್ಕೆ ಸಿಕ್ಕ ಬಹುಮಾನ ಕೇಳಿ, ಕ್ರೀಡಾ ಪ್ರೇಮಿಗಳು ಶಾಕ್​ […]