ಕಡಿಮೆ ಬಜೆಟ್ ನಲ್ಲಿ ಉತ್ತಮ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ…? – 6 ಲಕ್ಷದೊಳಗೆ ಸಿಗುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ..!

ನ್ಯೂಸ್ ಆ್ಯರೋ : ಇದು ಹಬ್ಬಗಳ ಸೀಸನ್. ಭಾರತದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಹಲವರು ಹೊಸ ಕಾರು ಖರೀದಿಸುವ ಉತ್ಸಾಹದಲ್ಲಿದ್ದಾರೆ. ಹಲವು ಕಾರು ಕಂಪನಿಗಳು ಹಬ್ಬದ ಕೊಡುಗೆಯಾಗಿ ಅತ್ಯುತ್ತಮ ಆಫರ್‌ಗಳೊಂದಿಗೆ ಕಾರು ಮಾರಾಟಕ್ಕೆ ಮುಂದಾಗಿದೆ. ಅದರಲ್ಲೂ ಫೆಸ್ಟೀವ್ ಸೀಸನ್’ನಲ್ಲಿ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರಾಟವು ಗಗನಕ್ಕೇರುತ್ತದೆ. ನಿಮ್ಮ ಬಜೆಟ್’ಗೆ ಸರಿಹೊಂದುವ, ಅದ್ರಲ್ಲೂ ಕಡಿಮೆ ಬೆಲೆಯ ಉತ್ತಮ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ಕೈಗೆಟುಕುವ ದರದಲ್ಲಿ ಸಿಗುವ ಹೊಸ ಕಾರಾಗಿದೆ. ಆಗಸ್ಟ್ 2022ರಿಂದ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಆಲ್ಟೊ ಕೆ10 ನ ದೆಹಲಿ ಎಕ್ಸ್ ಶೋರೂಂ ಬೆಲೆ. 3.99 ಲಕ್ಷ ರೂ. ಆಗಿದ್ದು, ಇದನ್ನು 4.40 ಲಕ್ಷದ ಆನ್ ರೋಡ್ ಬೆಲೆಯಲ್ಲಿ ನೀವು ಖರೀದಿಸಬಹುದು. ಅಂದಹಾಗೆ ಹೊಸ ಆಲ್ಟೊವನ್ನು ಮೊದಲಿಗಿಂತ ಹೆಚ್ಚು ಸ್ಟೈಲಿಶ್ ಆಗಿ ಮಾಡಲಾಗಿದ್ದು, 1.0-ಲೀಟರ್ K10C ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ.
ಈ ಕಾರು 3 ಇಂಚಿನ ಉಕ್ಕಿನ ವೀಲ್‌ಗಳನ್ನು ಹೊಂದಿದ್ದು, ರಿಮೋಟ್-ಕೀ, ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‌ಪ್ಲೇ ಅನ್ನು ಹೊಂದಿದೆ. ಇನ್ನು, ಯುಎಸ್‌ಬಿ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಇಎಸ್‌ಪಿಯಂತಹ ವೈಶಿಷ್ಟ್ಯಗಳಿರುವ ಕಾರು ಇದಾಗಿದೆ.

ರೆನಾಲ್ಟ್ ಕ್ವಿಡ್ ಕಾರು ಬಜೆಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ರೆನಾಲ್ಟ್ ಕ್ವಿಡ್ RXL 0.8 ಕಾರಿನಲ್ಲಿ 799 ಸಿಸಿ ಪೆಟ್ರೋಲ್ ಎಂಜಿನ್ ಲಭ್ಯವಿದೆ. ರೆನಾಲ್ಟ್ ಕ್ವಿಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಎರಡು ಬಣ್ಣಗಳಲ್ಲಿ ಬರುತ್ತದೆ. ಈ ಕಾರು ದೆಹಲಿಯಲ್ಲಿ 4.65 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.
ನೀವು ಇದನ್ನು 5.30 ಲಕ್ಷ ರೂ.ಗಳ ಆನ್ ರೋಡ್ ಬೆಲೆಯಲ್ಲಿ ಸುಲಭವಾಗಿ ಖರೀದಿಸಬಹುದು. ಬಜೆಟ್ ಸ್ವಲ್ಪ ಹೆಚ್ಚಿದ್ದರೆ, ನೀವು ಅದರ 999cc ರೂಪಾಂತರವನ್ನು ಸಹ ಖರೀದಿಸಬಹುದು, ಇದು ನಿಮಗೆ ಹೆಚ್ಚಿನ ಪವರ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡಲಿದೆ.

ಜುಲೈ 2022ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಮದ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದಂತಿದೆ. ಮಾರುತಿ ಎಸ್-ಪ್ರೆಸ್ಸೊದ ದೆಹಲಿ ಎಕ್ಸ್ ಶೋರೂಂ ಬೆಲೆ 4.25 ಲಕ್ಷ ರೂ.ಗಳಾಗಿದ್ದರೂ, ನೀವು ಅದನ್ನು 4.75 ಲಕ್ಷ ರೂ. ಆನ್ ರೋಡ್ ಬೆಲೆಯಲ್ಲಿ ಪಡೆಯಬಹುದಾಗಿದೆ.
ಈ ಕಾರು 1.0-ಲೀಟರ್ K10 ಸರಣಿಯ ಎಂಜಿನ್‌ನಿಂದ ಪವರ್ ಅನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೂ ಲಭ್ಯವಿದೆ. ಅಂದಹಾಗೆ ಮಾರುತಿ ಎಸ್-ಪ್ರೆಸ್ಸೋ 25.30 kmplನಷ್ಟು ಮೈಲೇಜ್ ನೀಡುತ್ತದೆ. ಈ ಕಾರು ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಸೆಂಟ್ರಲ್-ಮೌಂಟೆಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಸೆಲೆರಿಯೊ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಸುಮಾರು 5.81 ಲಕ್ಷ ರೂ.ಗಳ ಆನ್ ರೋಡ್ ಬೆಲೆಯಲ್ಲಿ ಖರೀದಿಸಬಹುದಾದ ಈ ಕಾರು 26 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸೆಲೆರಿಯೊ ಸಿಎನ್‌ಜಿ ಮಾದರಿಯಲ್ಲಿಯೂ ಲಭ್ಯವಿದೆ.
ಸಿಎನ್‌ಜಿ ಮಾದರಿಯನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹಾಗೂ ಪೆಟ್ರೋಲ್ ಮಾದರಿಗಳನ್ನು ಮ್ಯಾನುವಲ್ ಮತ್ತು ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಸೆಲೆರಿಯೊ ಕಾರಿನಲ್ಲಿ 1.0-ಲೀಟರ್ K10C ಡ್ಯುಯಲ್ ಜೆಟ್ ಎಂಜಿನ್ ಅನ್ನು ಪರಿಚಯಿಸಲಾಗಿದೆ.

ಇನ್ನು, ಮಾರುತಿ ಸುಜುಕಿ ಇಗ್ನಿಸ್ ಕಾರು ತುಂಬಾ ಸ್ಟೈಲಿಷ್ ಕಾಣುವ ಹ್ಯಾಚ್‌ಬ್ಯಾಕ್ ಆಗಿದೆ. ಇಗ್ನಿಸ್‌ನ ಟಾಪ್ ರೂಪಾಂತರವು ರೂ. 8.77 ಲಕ್ಷ ರೂ. ಆಗಿದ್ದು, ಸಿಗ್ಮಾ 1.2 MT ರೂಪಾಂತರವನ್ನು ರೂ. 5.95 ಲಕ್ಷದ ಆನ್ ರೋಡ್ ಬೆಲೆಯಲ್ಲಿ ಖರೀದಿಸಬಹುದು. ಈ ಕಾರಿನಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಬರಲಿದೆ.