1. Home
  2. Auto-News
  3. ಇದೆ ಮೊದಲ ಭಾರಿಗೆ ಇ-ಸ್ಕೂಟರ್ ಬಿಡುಗಡೆ ಮಾಡಿದ ಹೀರೋ ಮೋಟೋಕಾರ್ಪ್ – ಅಪ್ಪಟ ದೇಸಿ ಕಂಪನಿಯ ಈ ಸ್ಕೂಟರ್ ನ ಬೆಲೆಯೂ ಕಡಿಮೆ

ಇದೆ ಮೊದಲ ಭಾರಿಗೆ ಇ-ಸ್ಕೂಟರ್ ಬಿಡುಗಡೆ ಮಾಡಿದ ಹೀರೋ ಮೋಟೋಕಾರ್ಪ್ – ಅಪ್ಪಟ ದೇಸಿ ಕಂಪನಿಯ ಈ ಸ್ಕೂಟರ್ ನ ಬೆಲೆಯೂ ಕಡಿಮೆ

ಇದೆ ಮೊದಲ ಭಾರಿಗೆ ಇ-ಸ್ಕೂಟರ್ ಬಿಡುಗಡೆ ಮಾಡಿದ ಹೀರೋ ಮೋಟೋಕಾರ್ಪ್ – ಅಪ್ಪಟ ದೇಸಿ ಕಂಪನಿಯ ಈ ಸ್ಕೂಟರ್ ನ ಬೆಲೆಯೂ ಕಡಿಮೆ
0

ನ್ಯೂಸ್‌ ಆ್ಯರೋ‌ : ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಒಂದೆಡೆ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ಹೊಸ ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪೈಪೋಟಿ ಕೂಡ ಹೆಚ್ಚಾಗುತ್ತಿದೆ. ಸದ್ಯ ಹೀರೋ ಮೋಟೋಕಾರ್ಪ್ ತನ್ನ ಮೊದಲ ಇ-ಸ್ಕೂಟರ್ ಅನ್ನು ಕಂಪನಿಯು ತನ್ನ ಇ-ಮೊಬಿಲಿಟಿ ಬ್ರ್ಯಾಂಡ್ ವಿಡಾ ಅಡಿಯಲ್ಲಿ ಬಿಡುಗಡೆ ಮಾಡಲಿದೆ.

ಪ್ರಸ್ತುತ ಹೆಚ್ಚುತ್ತಿರುವ ತೈಲ, ಗ್ಯಾಸ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇನ್ನು ಅವುಗಳ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳತ್ತ ಜನರ ಮನ ವಾಲುತ್ತಿದೆ. ಇದನ್ನರಿತ ಹೀರೋ ಮೋಟೋಕಾರ್ಪ್ ತನ್ನ ಮೊದಲ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ.

ಕಂಪನಿಯು ತನ್ನ ಇ-ಮೊಬಿಲಿಟಿ ಬ್ರ್ಯಾಂಡ್ ವಿಡಾ ಅಡಿಯಲ್ಲಿ ಈ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಬಿಡುಗಡೆಗೂ ಮುನ್ನ ಈ ಸ್ಕೂಟರ್ ಅನ್ನು ಸುಮಾರು 2 ಲಕ್ಷ ಕಿ.ಮೀ ಓಡಿಸಿ ಪರೀಕ್ಷೆ ನಡೆಸಲಾಗಿದ್ದು, ಖರೀದಿಯ ನಂತರ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದೆ.  

ಇ-ಸ್ಕೂಟರ್‌ನ ವೈಶಿಷ್ಟ್ಯಗಳು ಇಂತಿವೆ : 

ಈ ನೂತನ ಇ-ಸ್ಕೂಟರ್‌ನ ವಿವರಗಳನ್ನು ಕಂಪನಿ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಸದ್ಯದ ಮಾಹಿತಿ ಪ್ರಕಾರ, ಸ್ಕೂಟರ್‌ನಲ್ಲಿನ ಎಲೆಕ್ಟ್ರಾನಿಕ್ ಮೋಟಾರ್ 3kW ನ ಗರಿಷ್ಠ ಶಕ್ತಿಯನ್ನು ಹೊಂದಿದೆ. ಇದರಲ್ಲಿ 115Nm ನ ಟಾರ್ಕ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಇ-ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 25 ಕಿ.ಮೀ ವರೆಗೆ ತಡೆರಹಿತವಾಗಿ ಓಡಿಸಬಹುದು ಎನ್ನಲಾಗಿದೆ. 

ಹೀರೋ ಕಂಪನಿಯ ಈ ಮೊದಲ ಇ-ಸ್ಕೂಟರ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲ್‌ಇಡಿ ಲ್ಯಾಂಪ್, ಸ್ಮಾರ್ಟ್ ಸೆನ್ಸಾರ್, ಫಿಕ್ಸೆಡ್ ಸೆಟಪ್ ಬಾರ್, ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಮ್, ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ಮೂಲಗಳ ಪ್ರಕಾರ, Hero MotoCorpನ ಇ-ಸ್ಕೂಟರ್ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನದೊಂದಿಗೆ ಬರಲಿದೆ. ಇದಕ್ಕಾಗಿ ಕಂಪನಿಯು ಬ್ಯಾಟರಿ ತಯಾರಿಕೆ ಮತ್ತು ವಿನಿಮಯ ತಂತ್ರಜ್ಞಾನದಲ್ಲಿ ಪರಿಣಿತ ಎನ್ನಲಾಗುವ ತೈವಾನ್ ಮೂಲದ ಗೊಗೊರೊ ಜತೆ ಪಾಲುದಾರಿಕೆ ಹೊಂದಿದೆ. ಈ ತಂತ್ರಜ್ಞಾನದ ಅಡಿ ಬಳಕೆದಾರರು ಸ್ಕೂಟರ್‌ನ ಬ್ಯಾಟರಿಯನ್ನು ಸ್ವತಃ ಬದಲಾಯಿಸುವ ಸೌಲಭ್ಯವಿದೆ.

ದೇಶದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೆಚ್ಚಿಸಲು ಹೀರೋ ಕಂಪನಿಯು ಬಿಪಿಸಿಎಲ್‌ನೊಂದಿಗೆ ಸಹಭಾಗಿತ್ವ ಹೊಂದಿದೆ. ಎರಡೂ ಕಂಪನಿಗಳು ಒಟ್ಟಾಗಿ ಬೆಂಗಳೂರು, ದೆಹಲಿ ಸೇರಿದಂತೆ ದೇಶದ 7 ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಮೂಲಸೌಕರ್ಯವನ್ನು ಸಿದ್ಧಪಡಿಸಲಿವೆ. 

ಸ್ಕೂಟರ್ ಬೆಲೆ ದುಬಾರಿಯೇನಲ್ಲ: 

ಇ-ಸ್ಕೂಟರ್‌ನ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಇದರ ಬೆಲೆ 80 ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಇದು ಬಜಾಜ್ ಚೇತಕ್, ಓಲಾ ಎಸ್ 1, ಓಕಿನಾವಾ ಮತ್ತು ಟಿವಿಎಸ್ ಐಕ್ಯೂಬ್‌ಗಳೊಂದಿಗೆ ಪೈಪೋಟಿ ಮಾಡಲಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..