1. Home
  2. Auto-News
  3. ಹೊಸ ಮಾರುತಿ ಅಲ್ಟೊ ಕೆ10 ಕಾರ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ – ಹೊಸ ಅಲ್ಟೊ ಕಾರ್ ನ ಫೀಚರ್ಸ್ ಹೀಗಿದೆ ನೋಡಿ…

ಹೊಸ ಮಾರುತಿ ಅಲ್ಟೊ ಕೆ10 ಕಾರ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ – ಹೊಸ ಅಲ್ಟೊ ಕಾರ್ ನ ಫೀಚರ್ಸ್ ಹೀಗಿದೆ ನೋಡಿ…

ಹೊಸ ಮಾರುತಿ ಅಲ್ಟೊ ಕೆ10 ಕಾರ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ – ಹೊಸ ಅಲ್ಟೊ ಕಾರ್ ನ ಫೀಚರ್ಸ್ ಹೀಗಿದೆ ನೋಡಿ…
0

ನ್ಯೂಸ್ ಆ್ಯರೋ‌ : ಮಾರುತಿ ಸುಜುಕಿ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಮಾರುತಿ ಅಲ್ಟೋ ಕೆ10 ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಮತ್ತಷ್ಟು ಆಕರ್ಷಕ ವಿನ್ಯಾಸ ಹೊಂದಿರುವ ನೂತನ ಅಲ್ಟೋ ಕೆ10 ಕಾರು ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಎಲೆಕ್ಟ್ರಿಕ್ OVRM, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಈ ನೂತನ ಅಲ್ಟೋ ಕೆ10 ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, 1 ಲೀಟರ್ ಪೆಟ್ರೋಲ್‌ಗೆ 24.90 ಕಿ.ಮೀ ಮೈಲೇಜ್ ನೀಡಲಿದೆ.

ಮಾರುತಿ ಅಲ್ಟೋ ಕೆ10 ಕಾರು 6 ವೇರಿಯೆಂಟ್‌ನಲ್ಲಿ ಲಭ್ಯವಿದ್ದು, ಜೊತೆಗೆ 6 ಬಣ್ಣಗಳ ಆಯ್ಕೆಯನ್ನು ಹೊಂದಿದೆ. 1.0 ಲೀಟರ್ ಎಂಜಿನ್ ಹೊಂದಿರುವ ಅಲ್ಟೋ ಕೆ10 ಕಾರು 66bhp ಪವರ್ ಹಾಗೂ 89Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.

ನೂತನ ಕಾರು ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮುಂಭಾಗ ಹಾಗೂ ರೇರ್ ಬಂಪರ್ಸ್ ಹೊಸ ವಿನ್ಯಾಸದಲ್ಲಿದ್ದು, ಹ್ಯಾಲೋಜಿನ್ ಹೆಡ್‌ಲ್ಯಾಂಪ್ಸ್ , ಸಿಂಗಲ್ ಪೀಸ್ ಗ್ರಿಲ್, ಬ್ಲಾಕ್ ಸ್ಟೀಲ್ ವ್ಹೀಲ್, ಸ್ಕ್ವಾರ್ ಟೈಲ್ ಲೈಟ್ಸ್, ಇಂಟಿಗ್ರೇಟೆಡ್ ಸ್ಪಾಯ್ಲರ್, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್, ಫೆಂಡರ್ ಮೌಂಟೆಡ್ ಟರ್ನ್ ಇಂಡಿಕೇಟರ್ ಹೊಸ ವಿನ್ಯಾಸದಲ್ಲಿದೆ. ಹೀಗಾಗಿ ಅಲ್ಟೋ ಕೆ10 ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ.

ಇದೀಗ ಮಾರುತಿ ಸುಜುಕಿ ಕಂಪನಿ ಹಬ್ಬದ ಸೀಸನ್‌ನಲ್ಲಿ ಹೊಸ ಕಾರು ಖರೀದಿ ಮೇಲೆ ಬಂಪರ್ ಆಫರ್ ಘೋಷಿಸಿದ್ದು, ಕಡಿಮೆ ಬಜೆಟ್ ವಾಹನಗಳ ಮೇಲೆ ಲಭ್ಯವಿರುವ ಬಂಪರ್ ರಿಯಾಯಿತಿಗಳ ಮಾಹಿತಿ ಇಲ್ಲಿದೆ.

ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಿರುವ ಕಂಪನಿ ಈ ಕಾರಿನ ಖರೀದಿ ಮೇಲೆ ಒಟ್ಟು 25,000 ರೂ,ಗಳ ವರೆಗೆ ರಿಯಾಯಿತಿ ನೀಡಿದೆ. ಜೊತೆಗೆ Alto 800 ಅನ್ನು ಖರೀದಿಸಿದರೆ ನೀವು 29,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಬೇಸ್ ಮಾಡೆಲ್‌ನಲ್ಲಿ 14,000 ರೂ.ಗಳ ರಿಯಾಯಿತಿ ಮತ್ತು ಟಾಪ್ ವೇರಿಯಂಟ್‌ನಲ್ಲಿ 29,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು.

ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಮೇಲೆ.40,000 ರೂ. ಗಳವರೆಗೆ ರಿಯಾಯಿತಿಯನ್ನು ನೀಡಿದ್ದು, ಮಾರುತಿ ಸುಜುಕಿ ಸೆಲೆರಿಯೊ ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರ್ ಗಳ ಖರೀದಿ ಮೇಲೆ 59,000 ರೂ, ವರೆಗಿನ ಆಫರ್ ನೀಡಿದೆ.

ಇನ್ನೂ ಮಾರುತಿ ಸುಜುಕಿ ಕಾರ್ ಗಳನ್ನು ಹೊರತುಪಡಿಸಿ ರೆನಾಲ್ಟ್ ಕ್ವಿಡ್ ಕಾರಿನ ಮೇಲೆಯೂ ಆಫರ್ ಲಭ್ಯವಿದ್ದು, ಈ ಹಬ್ಬದ ಸೀಜನ್ ಅಲ್ಲಿ ಕಾರನ್ನು ಖರೀದಿಸಿದರೆ 35,000 ರೂ. ವರೆಗೆ ಉಳಿತಾಯ ಮಾಡ ಬಹುದಾಗಿದೆ. 1 ಲೀಟರ್ ಮಾದರಿಯಲ್ಲಿ 15,000 ರೂ. ಮತ್ತು 0.8 ಲೀಟರ್ ಮಾದರಿಯಲ್ಲಿ 10,000 ರೂ. ಮತ್ತು 10,000 ರೂ. ಕಾರ್ಪೊರೇಟ್ ರಿಯಾಯಿತಿ ಜೊತೆಗೆ 10,000 ರೂ. ನಗದು ಲಾಭ ಪಡೆಯಬಹುದು.

ಟಾಟಾ ಮೋಟಾರ್ಸ್‌ನ ಈ ಕಾರಿನ ಮೇಲೆ 10,000 ರೂ. ವರೆಗಿನ ವಿನಿಮಯ ಪ್ರಯೋಜನವನ್ನು ಹೊರತುಪಡಿಸಿ ಟಿಯಾಗೊದ ಪ್ರತಿಯೊಂದು ಮಾದರಿಯ ಮೇಲೆ 10,000 ರೂ. ನಗದು ರಿಯಾಯಿತಿಯನ್ನು ಸಹ ಪಡೆಯುತ್ತೀರಿ. ಟಿಯಾಗೊದ ಪ್ರತಿಯೊಂದು ಮಾದರಿಯ ಮೇಲೆ 3,000 ರೂ.ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟಿಯಾಗೊ ಸಿಎನ್ ಜಿ ಮಾದರಿಯಲ್ಲಿ ಯಾವುದೇ ರಿಯಾಯಿತಿ ಇಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..