1. Home
  2. Auto-News
  3. ಮಾರುಕಟ್ಟೆಗೆ ಬಂತು ಮಾರುತಿ ಸುಜುಕಿ ಎಸ್‌ಯುವಿ ಕಾರು – 87,000 ಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ,ಈ ಕಾರಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮಾರುಕಟ್ಟೆಗೆ ಬಂತು ಮಾರುತಿ ಸುಜುಕಿ ಎಸ್‌ಯುವಿ ಕಾರು – 87,000 ಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ,ಈ ಕಾರಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮಾರುಕಟ್ಟೆಗೆ ಬಂತು ಮಾರುತಿ ಸುಜುಕಿ ಎಸ್‌ಯುವಿ ಕಾರು – 87,000 ಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ,ಈ ಕಾರಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ
0

ನ್ಯೂಸ್ ಆ್ಯರೋ : ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.45 ಲಕ್ಷವಾಗಿದೆ.

ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಒಟ್ಟು 87,953 ಮುಂಗಡ ಬುಕ್ಕಿಂಗ್ ಆಗಿದ್ದು, ಖರೀದಿಸಲು ಬಯಸುವ ಗ್ರಾಹಕರು ರೂ.11,000/- ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.

ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಇನ್ನು ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ವಿತರಣೆಯನ್ನು ಇತ್ತೀಚೆಗೆ ಪ್ರಾರಂಭಿಸಿತು.

ಆಕರ್ಷಕ ವಿನ್ಯಾಸ:

ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಎಸ್‍ಯುವಿಯನ್ನು ಆರು ವಿಭಿನ್ನ ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ. ಈ ಹೊಸ ಎಸ್‍ಯುವಿ ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ಆಗಿದೆ. ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ರೂಪಾಂತರಗಳನ್ನು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಸಹ ಲಭ್ಯವಿದೆ.

ಎರಡು ಪವರ್‌ಟ್ರೇನ್ ಆಯ್ಕೆ:

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್:

ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ಜೋಡಿಸಲಾಗಿದೆ. ಇನ್ನು ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಎಸ್‍ಯುವಿ ಮಾದರಿಯು ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್‌ ಮಾದರಿಗೆ ಹೋಲುತ್ತಿದೆ.

ಮಾರುತಿ ಎಸ್‍ಯುವಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ. ಈ ಎಸ್‍ಯುವಿಯ ಸಿ-ಪಿಲ್ಲರ್‌ನಲ್ಲಿ ಕ್ರೋಮ್ ಅಪ್ಲಿಕ್, ಅಲಾಯ್ ವ್ಹೀಲ್ ನೊಂದಿಗೆ ವಿಭಿನ್ನ ವಿನ್ಯಾಸ ಮತ್ತು ಟೈಲ್‌ಗೇಟ್‌ನಲ್ಲಿ ಪೂರ್ಣ-ಅಗಲದ ಎಲ್‌ಇಡಿ ಲೈಟ್ ಬಾರ್ ಕೂಡ ವಿಶಿಷ್ಟವಾಗಿದೆ, ಈ ಹೊಸ ಮಾರುತಿ ಎಸ್‍ಯುವಿ ಮಾದರಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ.

ಈ ಎಸ್‍ಯುವಿಯ ಸಿ-ಪಿಲ್ಲರ್‌ನಲ್ಲಿ ಕ್ರೋಮ್ ಅಪ್ಲಿಕ್, ಅಲಾಯ್ ವ್ಹೀಲ್ ನೊಂದಿಗೆ ವಿಭಿನ್ನ ವಿನ್ಯಾಸ ಮತ್ತು ಟೈಲ್‌ಗೇಟ್‌ನಲ್ಲಿ ಪೂರ್ಣ-ಅಗಲದ ಎಲ್‌ಇಡಿ ಲೈಟ್ ಬಾರ್ ಕೂಡ ವಿಶಿಷ್ಟವಾಗಿದೆ. ಈ ಎಸ್‍ಯುವಿಯ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಟಾಪ್-ಸ್ಪೆಕ್ ರೂಪಾಂತರಗಳು ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಕನೆಕ್ಟ್ ಕಾರ್ ಟೆಕ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ.

ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ತಯಾರಾದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಅತ್ಯಕರ್ಷಕ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.