1. Home
  2. Auto-News
  3. ಸಿಎನ್‌ಜಿ ವರ್ಷನ್‌ನಲ್ಲಿ ಬಲೆನೊ, ಎಕ್ಸ್‌ಎಲ್‌6 ಮಾರುಕಟ್ಟೆಗೆ ಲಗ್ಗೆ – ಈ ಕಾರಿನಲ್ಲಿ ಏನೇನು ಸೌಲಭ್ಯಗಳಿವೆ ಗೊತ್ತಾ?

ಸಿಎನ್‌ಜಿ ವರ್ಷನ್‌ನಲ್ಲಿ ಬಲೆನೊ, ಎಕ್ಸ್‌ಎಲ್‌6 ಮಾರುಕಟ್ಟೆಗೆ ಲಗ್ಗೆ – ಈ ಕಾರಿನಲ್ಲಿ ಏನೇನು ಸೌಲಭ್ಯಗಳಿವೆ ಗೊತ್ತಾ?

ಸಿಎನ್‌ಜಿ ವರ್ಷನ್‌ನಲ್ಲಿ ಬಲೆನೊ, ಎಕ್ಸ್‌ಎಲ್‌6 ಮಾರುಕಟ್ಟೆಗೆ ಲಗ್ಗೆ – ಈ ಕಾರಿನಲ್ಲಿ ಏನೇನು ಸೌಲಭ್ಯಗಳಿವೆ ಗೊತ್ತಾ?
0

ನ್ಯೂಸ್‌ ಆ್ಯರೋ : ಪೆಟ್ರೋಲ್‌/ ಡಿಸೇಲ್‌ ಬೆಲೆ ಗಗನಕ್ಕೇರುತ್ತಿದ್ದಂತೆ ವಾಹನ ಮಾಲೀಕರು ತುಸು ಅಗ್ಗವಾಗಿರುವ ಸಿಎನ್‌ಜಿ ಚಾಲಿತ ವಾಹನ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರು ತಯಾರಕ ಕಂಪನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿಎನ್‌ಜಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಗೆ ಹೊಸ ಸಿಎನ್‌ಜಿ ಮಾದರಿಯ ವಾಹನಗಳನ್ನು ಪರಿಚಯಿಸುವುದನ್ನು ಮುಂದುವರಿಸಿದೆ. ಈಗಾಗಲೇ ಸಾಕಷ್ಟು ಸಿಎನ್‌ಜಿ ಚಾಲಿತ ವಾಹನಗಳನ್ನು ಮಾರುಕಟ್ಟಗೆ ತಂದಿರುವ ಈ ಕಂಪನಿ ಇದೀಗ ಸಿಎನ್‌ಜಿ ಚಾಲಿತ ಬಲೆನೊ, ಎಕ್ಸ್‌ಎಲ್‌6 ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸಿಎನ್‌ಜಿ ಚಾಲಿತ ಬಲೆನೊಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ₹8.28 ಲಕ್ಷದಿಂದ ₹ 9.21 ಲಕ್ಷದವರೆ ಬೆಲೆಯನ್ನು ಹೊಂದಿದೆ. ಮಾರುತಿ ಬಲೆನೊ ತನ್ನ ವರ್ಗದ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಫ್ಯಾಕ್ಟರಿಯಲ್ಲಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್ ಅನ್ನು ನೀಡಲಾಗುತ್ತದೆ. ಎಕ್ಸ್‌ಎಲ್‌ 6 ಎಸ್‌–ಸಿಎಲ್‌ಜಿ ಆವೃತ್ತಿಯು ₹ 12.24 ಲಕ್ಷ ಬೆಲೆಗೆ (ಎಕ್ಸ್ ಶೋರೂಂ) ಬಿಡುಗಡೆಯಾಗಿದೆ. ಈ ಕಾರು ಅದರ ಸಮಾನವಾದ ಪೆಟ್ರೋಲ್ ರೂಪಾಂತರಕ್ಕಿಂತ ಸುಮಾರು ₹ 95,000ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.

ಎಕ್ಸ್‌ಎಲ್ 6 ಸಿಎನ್‌ಜಿ ಮತ್ತು ಬಲೆನೊ ಸಿಎನ್‌ಜಿ ನೆಕ್ಸಾ ಲೈನ್-ಅಪ್‌ನಿಂದ ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ನೀಡಲಾಗುವ ಮೊದಲ ಎರಡು ಮಾದರಿಗಳಾಗಿವೆ. ಸದ್ಯಕ್ಕೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳತ್ತ ಹೋಗುವ ಯಾವುದೇ ಯೋಜನೆಯನ್ನು ಹೊಂದಿಲ್ಲದ ಮಾರುತಿ ಸುಜುಕಿ, ಹೆಚ್ಚಾಗಿ ಹೈಬ್ರಿಡ್ ಮತ್ತು ಸಿಎನ್‌ಜಿ ವಾಹನಗಳ ಮೇಲೆ ಕೇಂದ್ರೀಕರಿಸಿದೆ. ಇದರ ಭಾಗವಾಗಿಯೇ ಬಲೆನೊ ಮತ್ತು XL6ಯ CNG ರೂಪಾಂತರಗಳು ಇದೀಗ ಬಿಡುಗಡೆಯಾಗಿವೆ.

ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್ ಮಾದರಿಯ 2022ರ ಆವೃತ್ತಿಯಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಂಡಿದೆ. ಇದೀಗ ಬಲೆನೊ ಪ್ರೀಮಿಯಂ ಕಾರು ಸಿಎನ್‌ಜಿ ಆವೃತ್ತಿಯೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ನಿರೀಕ್ಷೆ ಹೊಂದಿದೆ. ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ.

ಪೆಟ್ರೋಲ್‌ ಚಾಲಿತ ಬಲೆನೊ ಕಾರಿಗೆ ಹೋಲಿಸಿದರೆ ಸಿಎನ್‌ಜಿ ಚಾಲಿತ ಕಾರು ತುಸು ದುಬಾರಿ. ಬಲೆನೊ ಸಿಎನ್‌ಜಿ ಕಾರಿನಲ್ಲಿ ಅದೇ 1.2-ಲೀಟರ್, ನಾಲ್ಕು-ಸಿಲಿಂಡರ್, K12N ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನಂತೆ ಬಳಸುತ್ತದೆ. ಇದು 77.5 ಬಿಎಚ್‍ಪಿ ಪವರ್ ಮತ್ತು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ನವೀಕರಿಸಿದ ಎರ್ಟಿಗಾ CNGಯಂತೆಯೇ, XL6 CNG 1.5-ಲೀಟರ್ K15C ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 100hp ಮತ್ತು CNG ನಲ್ಲಿ 88hp ಪವರ್ ಅನ್ನು ಹೊರಹಾಕುತ್ತದೆ.

ಸಿಎನ್‌ಜಿ ಚಾಲಿತ ಬಲೆನೊದಲ್ಲಿ ಬೂಟ್‌ನಲ್ಲಿ 55-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಪಡೆಯುತ್ತದೆ. ಇದರರ್ಥ ಅದರ ಪೆಟ್ರೋಲ್-ಕೌಂಟರ್‌ಪಾರ್ಟ್‌ಗೆ ಹೋಲಿಸಿದರೆ ಬೂಟ್ ಸಾಮರ್ಥ್ಯವು ಕಡಿಮೆಯಾಗಿದೆ. ಹೆಚ್ಚಿನ ಸಿಎನ್‌ಜಿ ಮಾದರಿಗಳಂತೆಯೇ, ಬಲೆನೊ ಸಿಎನ್‌ಜಿಯು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ. ಬಲೆನೊ ಸಿಎನ್‌ಜಿ 30.61 km/kgಮೈಲೇಜ್ ಅನ್ನು ನೀಡುತ್ತದೆ. XL6 CNG 26.32km/kg ನಷ್ಟು ಮೈಲೇಜ್ ನೀಡುತ್ತದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಮಾರುತಿ ಸುಜುಕಿ ಕಂಪನಿಯು ಬಲೆನೊ ಸಿಎನ್‌ಜಿ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್ ಸೌಲಭ್ಯದ ಜೊತೆಗೆ ಹೊಸ ಬಲೆನೊದಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಎಕ್ಸ್‌ಎಲ್‌6 ಸಿಎನ್‌ಜಿ ಮಾದರಿ ವಾಹನದ ರಚನೆಯ ಉದ್ದಕ್ಕೂ ತುಕ್ಕು ಮತ್ತು ಸೋರಿಕೆಯನ್ನು ತಪ್ಪಿಸಲು S-CNG ಸಿಸ್ಟಮ್ ಸ್ಟೇನ್‌ಲೆಸ್ ಸ್ಟೀಲ್ ಪೈಪ್‌ಗಳು ಮತ್ತು ಜಾಯಿಂಟ್‌ಗಳೊಂದಿಗೆ ಬರುತ್ತದೆ. ಇತರ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡಿದರೆ, XL6 CNG 4 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ. ESP ಜೊತೆಗೆ ಹಿಲ್ ಹೋಲ್ಡ್, LED ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು Isofix ಚೈಲ್ಡ್ ಸೀಟ್ ಆಂಕರೇಜ್‌ಗಳನ್ನು ಪಡೆದಿದೆ ಎಂದು ಮಾರುತಿ ಹೇಳಿಕೊಂಡಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..