1. Home
  2. Auto-News
  3. ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 – ಇದರ ಬೆಲೆ ಎಷ್ಟು? ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 – ಇದರ ಬೆಲೆ ಎಷ್ಟು? ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 – ಇದರ ಬೆಲೆ ಎಷ್ಟು? ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..
0

ನ್ಯೂಸ್ ಆ್ಯರೋ : ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 ಅನ್ನು EICMA 2022ರಲ್ಲಿ ಬಿಡುಗಡೆ ಮಾಡಿದ್ದು, ಇದು ವರ್ಷದ ಬಹು ನಿರೀಕ್ಷಿತ ಬೈಕ್ ಆಗಿದ್ದು, ಇತ್ತೀಚಿನ ಪೀಳಿಗೆಯ ರಾಯಲ್‌ ಎನ್‌ಫೀಲ್ಡ್‌ನ ಪ್ರಮುಖ ಕ್ರೂಸರ್ ಬೈಕ್ ಮತ್ತು ಇದು ಕಾಂಟಿನೆಂಟಲ್ GT 650ಗಿಂತ ಮೇಲಿರುವ ಸಾಧ್ಯತೆಯಿದೆ. ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಡೀಲರ್‌ಶಿಪ್ ತರಬೇತಿ ಪೂರ್ಣಗೊಂಡಿರುವಂತೆ ಸದ್ಯದಲ್ಲಿಯೇ ಭಾರತದಲ್ಲಿ ಬಿಡುಗಡೆ ಆಗಲಿದ್ದು, ಕ್ರೂಸರ್ ಸೂಪರ್ ಮೀಟಿಯರ್ 650 ಮತ್ತು ಸೂಪರ್ ಮೀಟಿಯರ್ 650 ಟೂರರ್ ಎಂಬ ಎರಡು ಮಾದರಿಗಳಲ್ಲಿ ಬರಲಿದೆ.



ಸೂಪರ್ ಮೀಟಿಯರ್ 650 ಸೋಲೋ ಟೂರರ್ ವೇರಿಯಂಟ್ ಆಗಿದೆ ಮತ್ತು ಇದು ಆಸ್ಟ್ರಲ್ ಗ್ರೀನ್, ಆಸ್ಟ್ರಲ್ ಬ್ಲ್ಯಾಕ್, ಆಸ್ಟ್ರಲ್ ಬ್ಲೂ, ಇಂಟರ್ ಸ್ಟೆಲ್ಲರ್ ಗ್ರೇ ಮತ್ತು ಇಂಟರ್ ಸ್ಟೆಲ್ಲರ್ ಗ್ರೀನ್ ಹೀಗೆ ಐದು ಬಣ್ಣಗಳಲ್ಲಿ ಲಭ್ಯವಿದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ. ಆದರೆ ಸೂಪರ್ ಮೀಟಿಯರ್ 650 ಟೂರರ್ ಗ್ರ್ಯಾಂಡ್ ಟೂರರ್ ವೇರಿಯಂಟ್ ಆಗಿದೆ ಮತ್ತು ಈ ಬೈಕ್ ಸೆಲೆಸ್ಟಿಯಲ್ ಬ್ಲೂ ಮತ್ತು ಸೆಲೆಸ್ಟಿಯಲ್ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.



ಎಂಜಿನ್ ಕುರಿತು ಹೇಳುವುದಾದರೆ, ಸೂಪರ್ ಮೀಟಿಯರ್ 650 ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650ನಂತಹ ಅದೇ ಎಂಜಿನ್ ಅನ್ನು ಹೊಂದಿದೆ. ಆದರೆ ಹೆಡ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಕೆಲವು ಬದಲಾವಣೆಗಳಿವೆ. ಅವುಗಳನ್ನು ಸ್ವಲ್ಪ ಮಟ್ಟಿಗೆ ಮರು ವಿನ್ಯಾಸಗೊಳಿಸಲಾಗಿದೆ ಹಾಗೂ ಮ್ಯಾಟ್ ಕಪ್ಪು ಬಣ್ಣದಲ್ಲಿದೆ. ಬೈಕ್ 7,250 rpmನಲ್ಲಿ 47 Ps ಗರಿಷ್ಠ ಶಕ್ತಿಯನ್ನು ಮತ್ತು 5,650 rpm ನಲ್ಲಿ 52 Nmನ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.



ಕ್ರೂಸರ್‌ನ ಚಾಸಿಸ್ ಉಕ್ಕಿನ ಕೊಳವೆ ಆಕಾರದ ಬೆನ್ನೆಲುಬಿನ ಚೌಕಟ್ಟಾಗಿದ್ದು, ಮುಂಭಾಗದಲ್ಲಿ 43 ಎಂಎಂ ತಲೆಕೆಳಗಾದ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಅವಳಿ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‌ಗಳಿಂದ ಮಾಡಲಾಗಿದೆ. ಸೂಪರ್ ಮೀಟಿಯರ್‌ನ ಬ್ರೇಕಿಂಗ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 300 ಎಂಎಂ ಡಿಸ್ಕ್ ನಿರ್ವಹಿಸುತ್ತದೆ. ಇದಲ್ಲದೆ, ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.



ಮೀಟಿಯರ್ ತನ್ನ ಪ್ರವಾಸದ ಸಾಮರ್ಥ್ಯಗಳಿಗೆ ಪೂರಕ ಆಗಿರುವ ನಿಜವಾದ ಮೋಟಾರ್‌ಸೈಕಲ್ ಪರಿಕರಗಳ ವ್ಯಾಪಕ ಎಕೋ ಸಿಸ್ಟಮ್‌ನಿಂದ ಸಪೋರ್ಟ್ ಆಗಿದ್ದು, ಬಾರ್ ಎಂಡ್ ಮಿರರ್‌ಗಳು, ಡೀಲಕ್ಸ್ ಫುಟ್‌ಪೆಗ್, ಸೋಲೋ ಫಿನಿಷರ್, ಎಲ್‌ಇಡಿ ಇಂಡಿಕೇಟರ್‌ಗಳು ಮತ್ತು ಮೆಷಿನ್ಡ್ ವೀಲ್‌ಗಳು, ಡೀಲಕ್ಸ್ ಟೂರಿಂಗ್ ಡ್ಯುಯಲ್-ಸೀಟ್, ಟೂರಿಂಗ್ ವಿಂಡ್‌ಸ್ಕ್ರೀನ್, ಪ್ಯಾಸೆಂಜರ್ ಬ್ಯಾಕ್‌ರೆಸ್ಟ್, ಡೀಲಕ್ಸ್ ಫುಟ್‌ಪೆಗ್‌ಗಳು, ಲಾಂಗ್ ಹಾಲ್ ಪ್ಯಾನಿಯರ್‌ಗಳು, ಟೂರಿಂಗ್ ಹ್ಯಾಂಡಲ್‌ಬಾರ್ ಮತ್ತು ಎಲ್‌ಇಡಿ ಇಂಡಿಕೇಟರ್‌ಗಳು ಆಫರ್‌ನಲ್ಲಿರುವ ಕೆಲವು ಪರಿಕರಗಳಾಗಿವೆ.



ರಾಯಲ್‌ ಎನ್‌ಫೀಲ್ಡ್‌ನಿಂದ ಕ್ರೂಸರ್ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ನ ರೈಡರ್ ಮೇನಿಯಾದಲ್ಲಿ ನವೆಂಬರ್ 2022ರ ನಂತರ ಅನಾವರಣಗೊಳ್ಳಲಿದ್ದು, ಸದ್ಯಕ್ಕೆ ಬೆಲೆಗಳು ಏನೆಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬೈಕ್‌ನ ಬೆಲೆ ₹ 3.5 ಲಕ್ಷದಿಂದ ₹ 4 ಲಕ್ಷ (ಎಕ್ಸ್‌ ಶೋ ರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..