
ನ್ಯೂಸ್ ಆ್ಯರೋ: ಹಬ್ಬವೆಂದರೆ ಸಂಭ್ರಮದ ಮಹಾಪೂರ. ದೊಡ್ಡ ದೊಡ್ಡ ಮಳಿಗೆಯಿಂದ ಹಿಡಿದು ಮಾರುಕಟ್ಟೆಯ ವ್ಯಾಪಾರಿಗಲಿಗೆ ವ್ಯಾಪಾರಕ್ಕೆ ಒಳ್ಳೆಯ ಸಮಯ. ಅದಲ್ಲದೆ ಗ್ರಾಹಕರಿಗೂ ಅಗತ್ಯ ವಸ್ತುಗಳನ್ನು ರಿಯಾಯಿರಿ ದರದಲ್ಲಿ ಪಡೆಯಬಹುದು. ಹೆಚ್ಚಾಗಿ ಈ ಹಬ್ಬದ ವಾತಾವರಣದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಹಾಗೂ ವಾಹನಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ವಾಹನಗಳ ಮಾರಾಟದ ಅಂಕಿ– ಅಂಶಗಳನ್ನು ಗಮನಿಸಿದರೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಜನರು ಹೆಚ್ಚಾಗಿ ಯಾವ ಸ್ಕೂಟರ್‌ನ್ನು ಮೆಚ್ಚಿ ತೆಗೆದುಕೊಂಡಿದ್ದಾರೆ ಎಂಬುದನ್ನು ನೋಡೋಣ.
1. ಹೋಂಡಾ ಆಕ್ಟಿವಾ:

ಸೆಪ್ಟೆಂಬರ್ ತಿಂಗಳ ಮಾರಾಟದ ಅನುಸಾರ ಮೊದಲನೇಯದಾಗಿ ಈ ಬಾರಿ ಹೋಂಡಾ ಆಕ್ಟಿವಾ ತನ್ನ ಮೊದಲೇ ಸ್ಥಾನವನ್ನು ಕಾಯ್ದಿರಿಸಿಕೊಂಡು ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಈ ಸ್ಕೂಟರ್‌ನ ಒಟ್ಟು 2,45,607 ಯುನಿಟ್ ಗಳ ಪ್ರಚಂಡ ಮಾರಾಟವನ್ನು ಈ ಬಾರಿ ಮಾಡಿದೆ.
2.ಟಿವಿಎಸ್ ಜುಪಿಟರ್:

ಟಿವಿಎಸ್ ಕಂಪನಿಯ ಜುಪಿಟರ್ ಸ್ಕೂಟರ್ ಸೆಪ್ಟೆಂಬರ್ ಅಂಕಿ-ಅಂಶಗಳ ಪ್ರಕಾರ ಎರಡನೇ ಸ್ಥಾನದಲ್ಲಿ ಮಾರಾಟವಾಗಿದೆ. ಟಿವಿಎಸ್ ಸ್ಕೂಟರ್ ಒಟ್ಟು 82,394 ಯುನಿಟ್ ಗಳ ಮಾರಾಟ ನಡೆಸಿದೆ.
3.ಸುಜುಕಿ ಅಕ್ಸೆಸ್ :

ದೀಪಾವಳಿ ಹಬ್ಬದಂದು ಮೂರನೇ ಸ್ಥಾನದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಕೂಟರ್ ಎಂದರೆ ಅದು ಸುಜುಕಿ ಕಂಪನಿಯ ಅಕ್ಸೆಸ್ ಸ್ಕೂಟರ್ ಆಗಿದೆ. ಕಂಪನಿ ಈ ಸ್ಕೂಟರ್ ನ ಒಟ್ಟು 46,851 ಯುನಿಟ್ ಗಳ ಮಾರಾಟ ನಡೆಸಿದೆ.
4.ಟಿವಿಎಸ್ ಎನ್‌ಟಾರ್ಕ್:

ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಕಂಪನಿಯ ಮತ್ತೊಂದು ಸ್ಕೂಟರ್ ಎನ್‌ಟಾರ್ಕ್ ಮಾರಾಟವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಎನ್ಟಾರ್ಕ್ ನ ಒಟ್ಟು 31,497 ಯುನಿಟ್ ಗಳು ಮಾರಾಟಗೊಂಡಿವೆ.
5.ಹೊಂಡಾ ಡಿಯೋ:

ಸೆಪ್ಟೆಂಬರ್ ತಿಂಗಳಿನಲ್ಲಿ ಹೊಂಡಾ ಕಂಪನಿಯ ಮತ್ತೊಂದು ಸ್ಕೂಟರ್ ಆಗಿರುವ ಹೊಂಡಾ ಡಿಯೋ ಐದನೇ ಸ್ಥಾನದಲ್ಲಿದೆ. ಕಂಪನಿ ಈ ಸ್ಕೂಟರ್ ನ ಒಟ್ಟು 29,994 ಯುನಿಟ್ ಗಳ ಮಾರಾಟ ನಡೆಸಿದೆ.