1. Home
  2. Auto-News
  3. ಟೊಯೊಟಾ ಕಾರ್ ಗಳ ಬೆಲೆ ದಿಢೀರ್ ಏರಿಕೆ‌ – ಇನೋವಾ, ಫಾರ್ಚುನರ್ ಕಾರ್ ಗಳ ಬೆಲೆ‌ ಏರಿಕೆಯಾಗಿದ್ದೆಷ್ಟು ಗೊತ್ತಾ..!?

ಟೊಯೊಟಾ ಕಾರ್ ಗಳ ಬೆಲೆ ದಿಢೀರ್ ಏರಿಕೆ‌ – ಇನೋವಾ, ಫಾರ್ಚುನರ್ ಕಾರ್ ಗಳ ಬೆಲೆ‌ ಏರಿಕೆಯಾಗಿದ್ದೆಷ್ಟು ಗೊತ್ತಾ..!?

ಟೊಯೊಟಾ ಕಾರ್ ಗಳ ಬೆಲೆ ದಿಢೀರ್ ಏರಿಕೆ‌ – ಇನೋವಾ, ಫಾರ್ಚುನರ್ ಕಾರ್ ಗಳ ಬೆಲೆ‌ ಏರಿಕೆಯಾಗಿದ್ದೆಷ್ಟು ಗೊತ್ತಾ..!?
0

ನ್ಯೂಸ್ ಆ್ಯರೋ‌ : ದಸರಾ ಹಬ್ಬಕ್ಕೆ ವಾಹನ ಖರೀಸಲು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದ್ದು, ಹಬ್ಬದ ಸಂಭ್ರಮದ ನಡುವೆ ಸದ್ದಿಲ್ಲದಂತೆ ಕೆಲ ಕಾರುಗಳು ಏಕಾಏಕಿ ದುಬಾರಿ ಆಗಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಅನೇಕ ವಾಹನ ತಯಾರಕರು ತಮ್ಮ ವಾಹನಗಳ ಮೇಲಿನ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಟೊಯೊಟಾ ತನ್ನ ಕೆಲವು ಕಾರುಗಳ ಬೆಲೆಯನ್ನು ಏರಿಸಿದೆ. ಬೆಲೆಗಳು ಶೇಕಡಾ 2ರಿಂದ ಶೇ 3.5ರ ಮಧ್ಯೆ ಬದಲಾಗಿದ್ದು ಹೆಚ್ಚಿನ ಶುಲ್ಕ ವಿಧಿಸಲು ನಿರ್ಧರಿಸಿದ ಕಾರುಗಳ ವಿವರ ಇಲ್ಲಿದೆ.

ಟೊಯೋಟಾ ಫಾರ್ಚೂನರ್

ಟೊಯೊಟಾ ಪ್ಯಾಸೆಂಜರ್ ಕಾರುಗಳ ಬೆಲೆಯನ್ನು ಹೆಚ್ಚಿಸಿದ್ದು, ಪರಿಷ್ಕರಣೆಗೊಂಡ ದರ ಜಾರಿಗೆ ಬಂದಿವೆ. ಟೊಯೊಟಾದಿಂದ ವಾಹನ ಖರೀದಿಸಲು ಬಯಸುವ ಗ್ರಾಹಕರು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

ಇದೇ ಸಾಲಿಗೆ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಸೇರಿಕೊಂಡಿದ್ದು, ಈ ಎಸ್‌ಯುವಿಯ ಬೆಲೆ ಮೊದಲ ಬಾರಿಗೆ ಹೆಚ್ಚಾಗಿದೆ. ಟೊಯೊಟಾ ಫಾರ್ಚೂನರ್ ಲೆಜೆಂಡರ್ ಫೇಸ್ ಲಿಫ್ಟ್ ಮಾದರಿಯನ್ನು ಜನವರಿಯಲ್ಲಿ ಪರಿಚಯಿಸಲಾಯಿತು. ಆರಂಭದಲ್ಲಿ 37.58 ಲಕ್ಷ ರೂ.ಗೆ ಬಿಡುಗಡೆ ಮಾಡಲಾಗಿದ್ದು, ಇದೀಗ ಇದರ ಬೆಲೆ 38.30 ಲಕ್ಷ ರೂ. ತಲುಪಿದೆ.

ಟೊಯೊಟಾ ಇನೋವಾ

ಟೊಯೊಟಾ ಜನಪ್ರಿಯ ಕಂಪನಿಯಾಗಿ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಕಂಪನಿಯ ವಾಹನಗಳಿಗೆ ವಿಶೇಷ ಬೇಡಿಕೆಯಿದೆ. ಅದರಲ್ಲೂ ಟೊಯೊಟಾ ಇನೋವಾ ಕಾರು ದುಬಾರಿ ಬೆಲೆಯದ್ದಾಗಿದ್ದು, ಬೆಲೆಗೆ ತಕ್ಕಂತೆ ಬೇಡಿಕೆಯನ್ನು ಸಹ ಹೊಂದಿದೆ. ಅಷ್ಟೇ ಅಲ್ಲದೆ ಬಹುತೇಕ ಕಾರು ಪ್ರಿಯರು ಟೊಯೋಟಾ ಕಂಪನಿಯ ಕಾರನ್ನು ಇಷ್ಟಪಡುತ್ತಿದ್ದಾರೆ.

ಆದರೆ ಸದ್ಯ ಕಂಪನಿ ಕಾರುಗಳ ಬೆಲೆಯನ್ನು ಏರಿಕೆ ಮಾಡಿದ್ದು, ಇದೀಗ ಇನ್ನೋವಾ ಎಲ್ಲಾ ಡೀಸೆಲ್ ಮಾದರಿಗಳ ಬೆಲೆ 23,000 ರೂ ಏರಿಕೆ ಮಾಡಿದೆ. ಇದಲ್ಲದೇ 2 ಪೆಟ್ರೋಲ್ ವೇರಿಯಂಟ್‌ಗಳಲ್ಲಿಯೂ 23,000 ರೂ.ಗಳಷ್ಟುಏರಿಕೆ ಮಾಡಿದೆ. ಈಗ ಇನೊವಾದ ಪ್ರವೇಶ ಮಟ್ಟದ GX MT 7 ಸೀಟರ್ ಬೆಲೆ 17.45 ಲಕ್ಷ ರೂ.ಗಳಾಗಿದ್ದು, ಟಾಪ್ ಲೈನ್ XZ AT 7 ಸೀಟರ್ ಇನ್ನೋವಾ ಡೀಸೆಲ್ ಬೆಲೆ 26.77 ಲಕ್ಷ ರೂ. ಆಗಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಮತ್ತು ಟೊಯೊಟಾ ವೆಲ್ಫೈರ್ ಹೈಬ್ರಿಡ್ ಬೆಲೆಗಳನ್ನು ಹೆಚ್ಚಿಸಿದ್ದು, ಕ್ಯಾಮ್ರಿ ಹೈಬ್ರಿಡ್ ಬೆಲೆ 90 ಸಾವಿರ ರೂ. ಹೆಚ್ಚಳವಾಗುವ ಮೂಲಕ ಕಾರಿನ ಬೆಲೆ 45.25 ಲಕ್ಷಕ್ಕೆ ಏರಿಕೆಯಾಗಿದೆ. ಅದೇ ರೀತಿ ವೆಲ್‌ಫೈರ್ ಹೈಬ್ರಿಡ್ ಬೆಲೆ 1.85 ಲಕ್ಷ ರೂ. ಗಳಷ್ಟು ಹೆಚ್ಚಳವಾಗಿದ್ದು, ಸದ್ಯ ಅದರ ಬೆಲೆ 94.45 ಲಕ್ಷಕ್ಕೆ ಏರಿಕೆಯಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..