1. Home
  2. Auto-News
  3. ಮಾರುಕಟ್ಟೆಗೆ ಲಗ್ಗೆ ಇಟ್ಟ ಟಿವಿಎಸ್ ರೈಡರ್ 125 ಬೈಕ್ – ಸ್ಮಾರ್ಟ್ ಎಕ್ಸ್ ಕನೆಕ್ಟ್ ಜತೆಗೆ ಲಾಂಚ್ : ಇದರ ಬೆಲೆ ಎಷ್ಟು? ಪರ್ಫಾಮೆನ್ಸ್ ಹೇಗಿದೆ?

ಮಾರುಕಟ್ಟೆಗೆ ಲಗ್ಗೆ ಇಟ್ಟ ಟಿವಿಎಸ್ ರೈಡರ್ 125 ಬೈಕ್ – ಸ್ಮಾರ್ಟ್ ಎಕ್ಸ್ ಕನೆಕ್ಟ್ ಜತೆಗೆ ಲಾಂಚ್ : ಇದರ ಬೆಲೆ ಎಷ್ಟು? ಪರ್ಫಾಮೆನ್ಸ್ ಹೇಗಿದೆ?

ಮಾರುಕಟ್ಟೆಗೆ ಲಗ್ಗೆ ಇಟ್ಟ ಟಿವಿಎಸ್ ರೈಡರ್ 125 ಬೈಕ್ – ಸ್ಮಾರ್ಟ್ ಎಕ್ಸ್ ಕನೆಕ್ಟ್ ಜತೆಗೆ ಲಾಂಚ್ : ಇದರ ಬೆಲೆ ಎಷ್ಟು? ಪರ್ಫಾಮೆನ್ಸ್ ಹೇಗಿದೆ?
0

ನ್ಯೂಸ್ ಆ್ಯರೋ : ಟಿವಿಎಸ್ ರೈಡರ್ 125 ಹೊಸ ಆವೃತ್ತಿಯು ವಿಶೇಷವಾಗಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೌಲಭ್ಯದೊಂದಿಗೆ ಮಾರುಕಟ್ಟೆ ಲಗ್ಗೆ ಇಟ್ಟಿದೆ. ಹೊಸ ಬೈಕ್ ನಲ್ಲಿ ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಜೊತೆಗೆ ಹಲವಾರು ಹೊಸ ಫೀಚರ್ಸ್ ನೀಡಲಾಗಿದೆ. ಹೊಸ ಬೈಕ್ ನಲ್ಲಿ ಕಂಪನಿಯಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೇರಿದಂತೆ ಇಕೋ ಮತ್ತು ಪವರ್ ಎನ್ನುವ ಎರಡು ಹೊಸ ರೈಡಿಂಗ್ ಮೋಡ್ ಗಳನ್ನು ಸಹ ನೀಡಲಾಗಿದ್ದು, ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ನಲ್ಲಿ ಮುಖ್ಯವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಯ್ಸ್ ಕಮಾಂಡ್, ಕಾಲ್ ಅಲರ್ಟ್, ಮೇಸೆಜ್ ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್, ಲೋ ಬ್ಯಾಟರಿ ಅಲರ್ಟ್, ಸರ್ವಿಸ್ ರಿಮೆಂಡರ್, ಗೇರ್ ಪೋಷಿಷನ್ ಇಂಡಿಕೇಟರ್, ಐಡಿಯಲ್ ಗೇರ್ ಶಿಫ್ಟ್, ಡಿಸ್ಟೆನ್ಸ್ ಟು ಎಂಟಿ ಮತ್ತು ಇಂಧನ ದಕ್ಷತೆಯನ್ನು ನೀಡುತ್ತದೆ.

ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 11.2 ಬಿಎಚ್ ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ ಹೊಸ ಬೈಕ್ ನಲ್ಲಿ ಹೆಚ್ಚಿನ ಮಟ್ಟದ ಇಂಧನ ದಕ್ಷತೆಗಾಗಿ ಕಂಪನಿಯು ಇಂಟೆಲಿಗೋ ಸೈಲೆಂಟ್ ಎಂಜಿನ್ ಸ್ಮಾರ್ಟ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆ ವೇಳೆ ಹೆಚ್ಚಿನ ಮಟ್ಟದ ಇಂಧನ ಬಳಕೆಯನ್ನು ಕಡಿತಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಾಯ ನೀಡುತ್ತದೆ.

ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಕಂಪನಿಯು ಹಲವಾರು ಸುರಕ್ಷಾ ಫೀಚರ್ಸ್ ನೀಡುತ್ತಿದ್ದು, ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನಲ್ಲಿ 240 ಎಂಎಂ ಮುಂಭಾಗದ ಸಿಂಗಲ್ ಡಿಸ್ಕ್, 130 ಎಂಎಂ ಹಿಂಬದಿಯ ಡ್ರಮ್ ಬ್ರೇಕ್ ನೀಡುತ್ತದೆ. 125 ಸಿಸಿ ಬೈಕ್ ಮಾದರಿಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೈಡರ್ ಬೈಕ್ ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದ್ದು, ಗ್ರಾಹಕರ ಬೇಡಿಕೆಯಂತೆಯೇ ಹೊಸ ಬೈಕ್ ಮಾದರಿಯು ಬ್ಲ್ಯಾಕ್ ಮತ್ತು ಯೆಲ್ಲೊ ಬಣ್ಣಗಳಲ್ಲಿ ಸಿಗಲಿದೆ.

ಟಿವಿಎಸ್ ಮೋಟಾರ್ ಕಂಪನಿಯು ಸ್ಮಾರ್ಟ್ಎಕ್ಸ್ ಕನೆಕ್ಟ್ ಜತೆಗೆ ನೂತನ ರೈಡರ್ ಅನ್ನು ಲಾಂಚ್ ಮಾಡಿದೆ. ನೂತನ ಬೈಕ್ ಬುಕ್ಕಿಂಗ್ ಗೆ ಈಗಲೇ ಲಭ್ಯವಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 99,990 ರೂ. ಆಗಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..