1. Home
  2. Auto-News
  3. ಐಷಾರಾಮಿ ಕಾರು ಮಾರಾಟಕ್ಕಿಟ್ಟ ಕಿಂಗ್ ಕೊಹ್ಲಿ – ಬೆಲೆ ಎಷ್ಟು ಗೊತ್ತಾ..!?

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಕಿಂಗ್ ಕೊಹ್ಲಿ – ಬೆಲೆ ಎಷ್ಟು ಗೊತ್ತಾ..!?

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಕಿಂಗ್ ಕೊಹ್ಲಿ – ಬೆಲೆ ಎಷ್ಟು ಗೊತ್ತಾ..!?
0

ನ್ಯೂಸ್ ಆ್ಯರೋ‌ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಲವಾರು ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಅದರಲ್ಲಿನ Mercedes-Benz GLS 450 SUV ಕಾರು ಮಾರಾಟಕ್ಕಿದೆ.

ವಿರಾಟ್ ವಿರಾಟ್ ಕೊಹ್ಲಿ ಆಡಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಹಲವಾರು ಉನ್ನತ ಮಟ್ಟದ ಆಡಿ ಕಾರುಗಳನ್ನು ಹೊಂದಿದ್ದಾರೆ. ಅದಲ್ಲದೆ ಇತರ ಬ್ರಾಂಡ್‌ಗಳ ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ. ಆಗಾಗ್ಗೆ ಕೆಲವು ಕಾರುಗಳನ್ನು ಮಾರಾಟ ಮಾಡುತ್ತಿದ್ದ ಕೊಹ್ಲಿ, ಈ ಬಾರಿ Mercedes-Benz GLS 450 SUV ಕಾರು ಮಾರಾಟಕ್ಕಿಟ್ಟಿದ್ದಾರೆ.

Wow Autos by NITIN ಎಂಬ ಯೂಟ್ಯೂಬ್ ಚಾನೆಲ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಹಲವು ಸೆಲೆಬ್ರೆಟಿಗಳ ಕಾರು ಮಾರಾಟಕ್ಕಿರುವುದನ್ನು ತಿಳಿಸಿದೆ. ಆ ಪೈಕಿ ವಿರಾಟ್ ಕೊಹ್ಲಿ ಸಂಗ್ರಹದಲ್ಲಿದ್ದ Mercedes-Benz GLS 450 ಐಷಾರಾಮಿ SUV ಕೂಡ ಒಂದಾಗಿದೆ.

ಈ ಕಾರು ಕೇವಲ 5 ತಿಂಗಳ ಹಳೆಯದಾಗಿದ್ದು, ಸಾಮಾನ್ಯ GLS 450 SUV ಅಲ್ಲ ಎಂದು ತಿಳಿಸಿದ್ದಾರೆ. ಕ್ಯಾವನ್‌ಸೈಟ್ ಬ್ಲೂ ಶೇಡ್ ಕಾರು ಇದಾಗಿದ್ದು, ಕೊಹ್ಲಿ ಈ SUV ಯಲ್ಲಿ AMG ಲೈನ್ ಕಿಟ್ ಅನ್ನು ಅಳವಡಿಸಿದ್ದಾರೆ. AMG ಬಾಡಿ ಕಿಟ್, 22 ಇಂಚಿನ AMG alloy ಚಕ್ರಗಳು, ಕಾರಿನ ಬಣ್ಣ ಮಾಸದಂತೆ PPF ರಕ್ಷಣೆ ಕೂಡ ಇದೆ. ಬರಿ ಹೊರ ಭಾಗ ಮಾತ್ರವಲ್ಲ ಕಾರಿ ಒಳ ಭಾಗವನ್ನು ಸಹ ಕಸ್ಟಮೈಸ್ ಮಾಡಲಾಗಿದೆ.

ಕಾರಿನ ಕಂಡೀಷನ್ ಉತ್ತಮವಾಗಿದ್ದು, AMG ಮಾರ್ಪಾಡುಗಳಿಗೆ ಸುಮಾರು 25-30 ಲಕ್ಷ ರೂ. ಖರ್ಚಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದು 2022 ಮಾಡೆಲ್ ಪೆಟ್ರೋಲ್ Mercedes-Benz GLS 450 SUV ಆಗಿದೆ. 3.0 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು 367 Bhp ಮತ್ತು 500 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಲ್ಲಿಯವರೆಗೂ ಸುಮಾರು 10,000 ಕಿ.ಮೀ ಓಡಿದೆ. ಕಾರನ್ನು ದೆಹಲಿಯಲ್ಲಿ ನೋಂದಾಯಿಸಲಾಗಿದ್ದು, ಈ ಸುಸಜ್ಜಿತ ಐಷಾರಾಮಿ ಕಾರಿನ ಬೆಲೆ 1.60 ಕೋಟಿ ರೂ. ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..