1. Home
  2. Bantwal
  3. ಬಂಟ್ವಾಳ : ಅಪ್ರಾಪ್ತ ಬಾಲಕಿ ಚಲಾಯಿಸಿದ ಸ್ಕೂಟರ್ ಢಿಕ್ಕಿ ಪ್ರಕರಣ – ಬಾಲಕಿಯ ತಾಯಿಗೆ‌ 26 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!! ಮಕ್ಕಳ ಕೈಗೆ ವಾಹನ ನೀಡುವವರೇ ಎಚ್ಚರ…

ಬಂಟ್ವಾಳ : ಅಪ್ರಾಪ್ತ ಬಾಲಕಿ ಚಲಾಯಿಸಿದ ಸ್ಕೂಟರ್ ಢಿಕ್ಕಿ ಪ್ರಕರಣ – ಬಾಲಕಿಯ ತಾಯಿಗೆ‌ 26 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!! ಮಕ್ಕಳ ಕೈಗೆ ವಾಹನ ನೀಡುವವರೇ ಎಚ್ಚರ…

ಬಂಟ್ವಾಳ : ಅಪ್ರಾಪ್ತ ಬಾಲಕಿ ಚಲಾಯಿಸಿದ ಸ್ಕೂಟರ್ ಢಿಕ್ಕಿ ಪ್ರಕರಣ – ಬಾಲಕಿಯ ತಾಯಿಗೆ‌ 26 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!! ಮಕ್ಕಳ ಕೈಗೆ ವಾಹನ ನೀಡುವವರೇ ಎಚ್ಚರ…
0

ನ್ಯೂಸ್ ಆ್ಯರೋ‌ : ಬಾಲಕಿಯೊಬ್ಬಳು ಸ್ಕೂಟರ್ ಚಲಾಯಿಸಿ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಅಪಘಾತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿಗೆ ಕೋರ್ಟ್ 26 ಸಾವಿರ ರೂಪಾಯಿ ದಂಡ ವಿಧಿಸಿದ ಅಪರೂಪದ ಘಟನೆ ವರದಿಯಾಗಿದೆ.

ಅಲ್ಲದೇ ಅಪ್ರಾಪ್ತ ಪ್ರಾಯದ ಮಕ್ಕಳಿಗೆ ಚಲಾಯಿಸಲು ವಾಹನ ನೀಡುವ ಪೋಷಕರಿಗೆ ಇದೊಂದು ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಸಣ್ಣ ಪ್ರಾಯದ ಮಕ್ಕಳು ಮನೆಯವರಿಗೆ ಹೇಳದೇ ಕೇಳದೇ ವಾಹನ ಕೊಂಡೊಯ್ದು ಅಪಘಾತವಾಗುವ ಇಲ್ಲವೇ ವಾಹನ ಕಲಿಯಲೆಂದೇ ಖುದ್ದು ಪೋಷಕರೇ ಮಕ್ಕಳಿಗೆ ವಾಹನ ನೀಡುವ ಅನುಚಿತ ಘಟನೆಗಳಿಗೆ ಇದೊಂದು ದಂಡದ ತೀರ್ಪು ಉದಾಹರಣೆಯಾಗಬೇಕಿದೆ.

ಏನಿದು ಪ್ರಕರಣ?

ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಮತ್ತು ಕಾರಿನ ಮಧ್ಯೆ ಅಪಘಾತ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ, ಅಪಘಾತದ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶಿಸಿದೆ.