1. Home
  2. Bantwal
  3. ವಿಟ್ಲ : ಕರೆಂಟ್ ಶಾಕ್ ತಗುಲಿ ಬಾಲಕ ಸಾವು – ಹಂದಿ ಹಿಡಿಯಲು ಗದ್ದೆಯಲ್ಲಿ ಕರೆಂಟ್ ಅಳವಡಿಸಿರುವ ಆರೋಪ‌..!!

ವಿಟ್ಲ : ಕರೆಂಟ್ ಶಾಕ್ ತಗುಲಿ ಬಾಲಕ ಸಾವು – ಹಂದಿ ಹಿಡಿಯಲು ಗದ್ದೆಯಲ್ಲಿ ಕರೆಂಟ್ ಅಳವಡಿಸಿರುವ ಆರೋಪ‌..!!

ವಿಟ್ಲ : ಕರೆಂಟ್ ಶಾಕ್ ತಗುಲಿ ಬಾಲಕ ಸಾವು – ಹಂದಿ ಹಿಡಿಯಲು ಗದ್ದೆಯಲ್ಲಿ ಕರೆಂಟ್ ಅಳವಡಿಸಿರುವ ಆರೋಪ‌..!!
0

ನ್ಯೂಸ್ ಆ್ಯರೋ : ವಿದ್ಯುತ್ ಶಾಕ್ ತಗುಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕದ ಸಾಯ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ‌‌.

ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕ ಸಮೀಪದ ಒಂದನೇ ವಾರ್ಡ್ ಸಾಯ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರ ಜಿತೇಶ್ (17 ವ.) ಮೃತ ದುರ್ದೈವಿ. ಬಾಲಕ ಕಳೆದ ರಾತ್ರಿ ನಡೆದ ವಿದ್ಯುತ್ ಅವಘಡ ಸಂಭವಿಸಿ ಬಲಿಯಾಗಿದ್ದಾನೆ.

ವ್ಯಕ್ತಿಯೋರ್ವರು ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್‌ ಅಳವಡಿಸಿರುವುದೇ ಘಟನೆಗೆ ಕಾರಣವೆಂದು ಆರೋಪಿಸಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಶವಗಾರದಲ್ಲಿ ಇಡಲಾಗಿದ್ದು, ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..