1. Home
  2. Bantwal
  3. ಬಂಟ್ವಾಳ : ರಿಕ್ಷಾಕ್ಕೆ ಢಿಕ್ಕಿ ಹೊಡೆದು ಹಿಟ್ ಆ್ಯಂಡ್ ರನ್ ಪ್ರಕರಣ – ಚಾಲಕ ಅರೆಸ್ಟ್, ಕಾರು ವಶಕ್ಕೆ

ಬಂಟ್ವಾಳ : ರಿಕ್ಷಾಕ್ಕೆ ಢಿಕ್ಕಿ ಹೊಡೆದು ಹಿಟ್ ಆ್ಯಂಡ್ ರನ್ ಪ್ರಕರಣ – ಚಾಲಕ ಅರೆಸ್ಟ್, ಕಾರು ವಶಕ್ಕೆ

ಬಂಟ್ವಾಳ : ರಿಕ್ಷಾಕ್ಕೆ ಢಿಕ್ಕಿ ಹೊಡೆದು ಹಿಟ್ ಆ್ಯಂಡ್ ರನ್ ಪ್ರಕರಣ – ಚಾಲಕ ಅರೆಸ್ಟ್, ಕಾರು ವಶಕ್ಕೆ
0

ನ್ಯೂಸ್ ಆ್ಯರೋ : ರಿಕ್ಷಾವೊಂದಕ್ಕೆ ಢಿಕ್ಕಿಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಮೆಲ್ಕಾರ್ ಟ್ರಾಫಿಕ್ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ಶೇಕ್ ಫೈಝಿಲ್ ಎಂಬಾತ ಆರೋಪಿಯಾಗಿದ್ದು, ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಡಿ. 5ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಲಪಾಡಿ ಎಂಬಲ್ಲಿ ಬಿಸಿರೋಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಪ್ರಯಾಣಿಕ ಹೃತಿಕ ಎಂಬರಿಗೆ ಗಾಯವಾಗಿತ್ತು.

ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾ ಪಲ್ಟಿಯಾದ ಆರಂಭದಲ್ಲಿ ಘಟನೆಗೆ ಕಾರಣವೇನು ಎಂಬುದು ಅಸ್ಪಷ್ಟವಾಗಿತ್ತು. ಬಳಿಕ ಗಾಯಳುಗಳು ನೀಡಿದ ಮಾಹಿತಿಯಂತೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಟ್ರಾಫಿಕ್ ಪೋಲೀಸರು ಸ್ಥಳೀಯ ಸಿ.ಸಿ.ಕ್ಯಾಮರಾ ಗಳನ್ನು ಪರಿಶೀಲನೆ ನಡೆಸಿದಾಗ ಕಾರಿನ ನಂಬರ್ ಲಭ್ಯವಾಯಿತು. ಕಾರು ಅಪಘಾತಗೊಳಿಸಿದ ಬಳಿಕ ತಪ್ಪಿಸುವ ಸಲುವಾಗಿ ಬೇರೆ ಬೇರೆ ರಸ್ತೆಗಳ ಮೂಲಕ ಸಂಚಾರ ಮಾಡಿದ ಬಗ್ಗೆ ಪೋಲೀಸರಿಗೆ ಸಾಕ್ಷಿ ಲಭ್ಯವಾಗಿತ್ತು.

ನಿಖರ ಸಾಕ್ಷಿ ಆಧರಿಸಿ ಮಾಹಿತಿ ಪಡೆದು ಆರೋಪಿ ಹಾಗೂ ಕಾರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖಾಧಿಕಾರಿ ರಾಜು ಹಾಗೂ ತನಿಖಾ ಸಹಾಯಕರಾದ ನಾಗೇಸ್ ಕೆ.ಸಿ. ಆರೋಪಿ ಹಾಗೂ ಕಾರನ್ನು ಪತ್ತೆಹಚ್ಚಿದ್ದಾರೆ.