ನ್ಯೂಸ್ ಆ್ಯರೋ : ಜಾನುವಾರನ್ನು ಕಳವುಗೈದು ಅಕ್ರಮ ಸಾಗಾಟಕ್ಕೆ ಯತ್ನಿಸುತ್ತಿರುವುದನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಮತ್ತವರ ಸಿಬ್ಬಂದಿಗಳು ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಪತ್ತೆಹಚ್ಚಿದ್ದು ಈ ಸಂಬಂಧ ಒರ್ವನನ್ನು ಬಂಧಿಸಲಾಗಿ, ಎರಡು ಜಾನುವಾರನ್ನು ರಕ್ಷಿಸಿದ್ದಾರೆ.
ಗೋಳ್ತಮಜಲು ಗ್ರಾಮದ ಮದಕ ನಿವಾಸಿ ಮಹಮ್ಮದ್ ಇಸ್ಮಾಯಿಲ್ ( 47) ಬಂಧಿತ ಆರೋಪಿ.
ಬಿಳಿಯೂರು ಗ್ರಾಮದ ಸತ್ತಿಕಲ್ಲು ನಿವಾಸಿ ಸತ್ತಾರ್ ಹಾಗೂ ರಿಫಾಝ್ ತಲೆಮರೆಸಿಕೊಂಡಿದ್ದಾರೆ.
ಗಸ್ತು ನಿರತರಾಗಿದ್ದ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..