1. Home
  2. Bantwal
  3. ಬಜ್ಪೆ‌ : ಶೌಚಾಲಯಕ್ಕೆ ಗುಂಡಿ ತೋಡುವಾಗ ಮಣ್ಣು ಕುಸಿತ – ಓರ್ವ ಕೂಲಿ ಸಾವು, ಇಬ್ಬರಿಗೆ ಗಾಯ

ಬಜ್ಪೆ‌ : ಶೌಚಾಲಯಕ್ಕೆ ಗುಂಡಿ ತೋಡುವಾಗ ಮಣ್ಣು ಕುಸಿತ – ಓರ್ವ ಕೂಲಿ ಸಾವು, ಇಬ್ಬರಿಗೆ ಗಾಯ

ಬಜ್ಪೆ‌ : ಶೌಚಾಲಯಕ್ಕೆ ಗುಂಡಿ ತೋಡುವಾಗ ಮಣ್ಣು ಕುಸಿತ – ಓರ್ವ ಕೂಲಿ ಸಾವು, ಇಬ್ಬರಿಗೆ ಗಾಯ
0

ನ್ಯೂಸ್ ಆ್ಯರೋ‌ : ಮನೆಯೊಂದರ ಶೌಚಾಲಯಕ್ಕೆ ಗುಂಡಿ ತೋಡುವ ವೇಳೆ ಮಣ್ಣು ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರಿನ ಅಳಕೆ ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು 63 ವರ್ಷದ ಆದಂ ಎಂದು ಗುರುತಿಸಲಾಗಿದೆ. ಇಬ್ರಾಹಿಂ ಮತ್ತು ಇಮ್ತಿಯಾಝ್ ಎಂಬವರು ಗಾಯಗೊಂಡಿದ್ದಾರೆ.

ಕಳೆದ ಸಂಜೆ ಆರಿಫ್ ಎಂಬವರಿಗೆ ಸೇರಿದ ಮನೆಯಲ್ಲಿ ಶೌಚಾಲಯಕ್ಕೆ ಮೂವರು ಕಾರ್ಮಿಕರು ಗುಂಡಿ ತೋಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿದು ಬಿದ್ದಿದ್ದು, ಆದಂ ಎಂಬವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಇತರ ಇಬ್ಬರು ಕಾರ್ಮಿಕರಾದ ಇಬ್ರಾಹಿಂ ಮತ್ತು ಇಮ್ತಿಯಾಝ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಬಜ್ಪೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.