1. Home
  2. Bantwal
  3. ವಿಟ್ಲ‌ : ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ – ಪ್ರಕರಣ ದಾಖಲು, ಪತ್ತೆಗೆ ಸಹಕರಿಸಲು ಪೋಲಿಸರ ಮನವಿ

ವಿಟ್ಲ‌ : ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ – ಪ್ರಕರಣ ದಾಖಲು, ಪತ್ತೆಗೆ ಸಹಕರಿಸಲು ಪೋಲಿಸರ ಮನವಿ

ವಿಟ್ಲ‌ : ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆ ನಾಪತ್ತೆ – ಪ್ರಕರಣ ದಾಖಲು, ಪತ್ತೆಗೆ ಸಹಕರಿಸಲು ಪೋಲಿಸರ ಮನವಿ
0

ನ್ಯೂಸ್ ಆ್ಯರೋ‌ : ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಆಕೆಯ ಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಕಡಂಬು ನಿವಾಸಿ ನಾಗೇಶ್ ರವರ ಪತ್ನಿ ಕವಿತ(29 ವ.) ನಾಪತ್ತೆಯಾದವರಾಗಿದ್ದಾರೆ.



ವಿಟ್ಲದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕವಿತಾರವರು ಅ.29ರಂದು ಕೆಲಸ ಮುಗಿಸಿ ತನ್ನ ತಾಯಿ ಮನೆಗೆ ತೆರಳುವುದಾಗಿ ಗಂಡನಲ್ಲಿ ತಿಳಿಸಿ ತೆರಳಿದ್ದರು. ರಾತ್ರಿಯಾದರೂ ಕವಿತಾರವರು ತಾಯಿ ಮನೆಗೆ ತಲುಪದ ಹಿನ್ನೆಲೆಯಲ್ಲಿ ಅವರ ಸಹೋದರ ಗಿರೀಶ್ ರವರು ನಾಗೇಶ್ ರವರಿಗೆ ಕರೆ ಮಾಡಿ ಸಹೋದರಿ ಬಂದಿಲ್ಲ ಎಂದು ತಿಳಿಸಿದ್ದರು.



ಕೂಡಲೇ ನಾಗೇಶ್ ರವರು ಮನೆಗೆ ತೆರಳುವ ದಾರಿಯ ಸಹಿತ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರು ಕವಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಪತ್ನಿಯನ್ನು ಹುಡುಕಿ ಕೊಡುವಂತೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಈ ಭಾವಚಿತ್ರದಲ್ಲಿ ಕಾಣುವ ಮಹಿಳೆಯನ್ನು ಯಾರಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ‌ ಮಾಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..