1. Home
  2. Bantwal
  3. ವಿಟ್ಲ : ಹಳೇ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ – ಹಾಸನದಿಂದ ಎತ್ತಾಕಿಕೊಂಡು ಬಂದ ಪೋಲಿಸರು

ವಿಟ್ಲ : ಹಳೇ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ – ಹಾಸನದಿಂದ ಎತ್ತಾಕಿಕೊಂಡು ಬಂದ ಪೋಲಿಸರು

ವಿಟ್ಲ : ಹಳೇ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ – ಹಾಸನದಿಂದ ಎತ್ತಾಕಿಕೊಂಡು ಬಂದ ಪೋಲಿಸರು
0

ನ್ಯೂಸ್ ಆ್ಯರೋ : ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರ ತಂಡ ವಶಕ್ಕೆ ಪಡೆದಿದೆ.

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ದಂಡಿಗನ ಹೋಬಳಿ ದೊಡ್ಡಕೆರೆ ದೇರುಹಳ್ಳಿ ನಿವಾಸಿ ಹನುಮೆ ಗೌಡರವರ ಪುತ್ರ ವಸಂತ ಡಿ.ಹೆಚ್. ಬಂಧಿತ ಆರೋಪಿ.

ಆರೋಪಿ ವಸಂತನ ವಿರುದ್ದ 2005ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು. ಬಳಿಕದ ದಿನಗಳಲ್ಲಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ಪತ್ತೆಗೆ ವಾರಂಟ್ ಜಾರಿ ಮಾಡಿತ್ತು.

ಆರೋಪಿಯ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರ ನೇತೃತ್ವದಲ್ಲಿ ಎ.ಎಸ್.ಐ.ಜಯರಾಮ, ಸಿಬ್ಬಂದಿ ಪುನೀತ್ ರವರು ಹಾಸನ‌ ಜಿಲ್ಲೆಯ ವಿದ್ಯಾನಗರದಿಂದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..