1. Home
  2. Bantwal
  3. ವಿಟ್ಲ ‌: ಅಕ್ರಮ ಗೋಸಾಗಾಟ ಪತ್ತೆ ಹಚ್ಚಿದ ಪೋಲಿಸರು -ಗೋವು ಸಹಿತ ವಾಹನ ವಶಕ್ಕೆ, ಇಬ್ಬರು ಆರೋಪಿಗಳ ಬಂಧನ

ವಿಟ್ಲ ‌: ಅಕ್ರಮ ಗೋಸಾಗಾಟ ಪತ್ತೆ ಹಚ್ಚಿದ ಪೋಲಿಸರು -ಗೋವು ಸಹಿತ ವಾಹನ ವಶಕ್ಕೆ, ಇಬ್ಬರು ಆರೋಪಿಗಳ ಬಂಧನ

ವಿಟ್ಲ ‌: ಅಕ್ರಮ ಗೋಸಾಗಾಟ ಪತ್ತೆ ಹಚ್ಚಿದ ಪೋಲಿಸರು -ಗೋವು ಸಹಿತ ವಾಹನ ವಶಕ್ಕೆ, ಇಬ್ಬರು ಆರೋಪಿಗಳ ಬಂಧನ
0

ನ್ಯೂಸ್ ಆ್ಯರೋ‌ : ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ಸಹಿತ‌ ಇಬ್ಬರು ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಮುಂಜಾನೆ ವೇಳೆ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರಿನಲ್ಲಿ ನಡೆದಿದೆ.

ಬಂಧಿತ‌ ಆರೋಪಿಗಳನ್ನು ಸಾಯಿಬು ಬ್ಯಾರಿ ನಗ್ರಿ ಹಾಗೂ ಪ್ರದೀಪ್ ಸಿಕ್ವೇರಾ ಎಂದು‌ ಗುರುತಿಸಲಾಗಿದೆ.

ಗಸ್ತು ನಿರತರಾಗಿದ್ದ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳು ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವೇಳೆ ವಾಹನದಲ್ಲಿ ನಾಲ್ಕು ಜಾನುವಾರುಗಳಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.