1. Home
  2. Bantwal
  3. ಬಂಟ್ವಾಳ : ಮನೆಯವರು ಮಲಗಿದ್ದಾಗಲೇ ಮನೆಗೆ ನುಗ್ಗಿ ಕಳವುಗೈದ ಪ್ರಕರಣ – ಕಣ್ಣೂರು ಮೂಲದ ಖತರ್ನಾಕ್ ಕಳ್ಳನ ಬಂಧನ

ಬಂಟ್ವಾಳ : ಮನೆಯವರು ಮಲಗಿದ್ದಾಗಲೇ ಮನೆಗೆ ನುಗ್ಗಿ ಕಳವುಗೈದ ಪ್ರಕರಣ – ಕಣ್ಣೂರು ಮೂಲದ ಖತರ್ನಾಕ್ ಕಳ್ಳನ ಬಂಧನ

ಬಂಟ್ವಾಳ : ಮನೆಯವರು ಮಲಗಿದ್ದಾಗಲೇ ಮನೆಗೆ ನುಗ್ಗಿ ಕಳವುಗೈದ ಪ್ರಕರಣ – ಕಣ್ಣೂರು ಮೂಲದ ಖತರ್ನಾಕ್ ಕಳ್ಳನ ಬಂಧನ
0

ನ್ಯೂಸ್ ಆ್ಯರೋ‌ : ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ 107 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಖತರ್ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತನನ್ನು ಕಣ್ಣೂರಿನ ಮಹಮ್ಮದ್ ಕೆ ಯು(42) ಎಂದು ಗುರುತಿಸಲಾಗಿದೆ.



ಇನ್ನು ಆರೋಪಿಯನ್ನು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಕಳವು ಮಾಲನ್ನು ಕಾಸರಗೋಡಿನ ಜ್ಯುವೆಲ್ಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 3,71,600/-ರೂಪಾಯಿ ಆಗಬಹುದು.



ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


ಪ್ರಕರಣದ ವಿವರ ‌:



ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಉಮ್ಮರ್ ಎಂಬವರ ಮನೆಯಲ್ಲಿ ಸಂಬಂಧಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾರ್ಚ್ 9ರಂದು ರಾತ್ರಿ ಸಮಯ 11.0 ಗಂಟೆಯಿಂದ ಬೆಳಗ್ಗಿನ ಜಾವ 04ಗಂಟೆಯ ಸಮಯ ಮದ್ಯೆ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದು ಕಳವಾಗಿದ್ದ ಅಂದಾಜು ಮೌಲ್ಯ 4,28,000 ರೂಪಾಯಿ ಎಂಬಿತ್ಯಾದಿಯಾಗಿ ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ಈ ಪ್ರಕರಣದಲ್ಲಿ ವಿಟ್ಲದ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಇ ಇವರ ನೇತೃತ್ವದಲ್ಲಿ ಠಾಣಾ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾ ಮತ್ತು ಸು), ರುಕ್ಮ ನಾಯ್ಕ ಪಿಎಸ್‌ಐ (ತನಿಖೆ-1) ಹಾಗೂ ಸಿಬ್ಬಂದಿಗಳು ಪತ್ತೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..