ವಿಟ್ಲ : ಸಲಿಂಗಕಾಮಕ್ಕೆ ಯುವಕನೊಬ್ಬನ ಬಳಕೆ, ಬಳಿಕ ಕೊಲೆ ಮಾಡಿ ಸುಟ್ಟು ಹಾಕಿದ ಕಾಮುಕ – ಪಾಪಿಯ ಗೆಳೆಯನಿಂದಲೇ ಕೃತ್ಯ ಬಯಲು, ಪೈಶಾಚಿಕ ಕೃತ್ಯದ ಸಂಪೂರ್ಣ ವರದಿ ಇಲ್ಲಿದೆ…

ನ್ಯೂಸ್ ಆ್ಯರೋ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾದ ಯುವಕನನ್ನು ಅದೇ ಗ್ರಾಮದ ಯುವಕನೊಬ್ಬ ಅನೈತಿಕ ಚಟುವಟಿಕೆಗೆ ಬಳಸಿ ಕೊಲೆಗೈದಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೋಳಂತೂರು ಗ್ರಾಮ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಆತನನ್ನು ಅದೇ ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಪ್ರಪಾತಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಕೊಲೆಗೀಡಾದ ಯುವಕನ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಘಟನೆಯ ಹಿನ್ನೆಲೆ:
ಬೊಳಂತೂರು ನಿವಾಸಿ ಅಬ್ದುಲ್ ಸಮದ್ ಕಾಣೆಯಾಗಿರುವ ಕುರಿತು ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಸಮದ್ ನನ್ನು ಇರಾ ಸೈಟ್ ಪರಿಸರದ ಮುಳೂರುಪದವು ಗುಡ್ಡಕ್ಕೆ ಕರೆದೊಯ್ದ ರಹಿಮಾನ್ ಮೊದಲ ದಿನವೇ ಆತನನ್ನು ಕೊಲೆಗೈದಿದ್ದು, ಮಾರನೇ ದಿನ ಮತ್ತೊಬ್ಬ ಸ್ನೇಹಿತನನ್ನು ಆ ಸ್ಥಳಕ್ಕೆ ಕರೆದೊಯ್ದು ಕೊಲೆ ನಡೆಸಿರುವ ವಿಚಾರ ತಿಳಿಸಿದ್ದಾನೆ.


ವಿಚಾರ ತಿಳಿದು ಭಯಗೊಂಡ ಆತನಿಂದ ಆರೋಪಿ ಕೃತ್ಯ ಬಯಲಾಗಿದೆ. ಸುದ್ದಿ ಹರಡುತ್ತಿದ್ದಂತೆಯೇ ರಹಿಮಾನ್ ಸಮದ್ ಮೃತದೇಹವನ್ನು ಸುಟ್ಟು ಹಾಕಿ ಹೊಂಡಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ.
ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಪ್ರಕರಣ ತನಿಖೆ ಹಾಗೂ ಕಾರ್ಯಾಚರಣೆ ನಡೆಸಿ
ಪೊಲೀಸರು ಯುವಕನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.