1. Home
  2. Belthangady
  3. ಬೆಳ್ತಂಗಡಿ : ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ – ಪತ್ತೆಗೆ ಸಹಕರಿಸಲು ಪೋಲಿಸರ ಮನವಿ

ಬೆಳ್ತಂಗಡಿ : ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ – ಪತ್ತೆಗೆ ಸಹಕರಿಸಲು ಪೋಲಿಸರ ಮನವಿ

ಬೆಳ್ತಂಗಡಿ : ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ – ಪತ್ತೆಗೆ ಸಹಕರಿಸಲು ಪೋಲಿಸರ ಮನವಿ
0

ನ್ಯೂಸ್ ಆ್ಯರೋ : ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳು ಕೆಲಸಕ್ಕೆಂದು ಹೋದಾಕೆ ವಾಪಾಸ್ ಮನೆಗೆ ಬರದೇ ನಾಪತ್ತೆಯಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಕು.ಪ್ರಮೀಳಾ (18) ತಂದೆ ಶೀನ ನಾಪತ್ತೆಯಾದ ಯುವತಿ.

ಪ್ರಮೀಳಾ ಎಂದಿನಂತೆ ಉಜಿರೆ ಹೆಚ್ ಪಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕೆಂದು ದಿ 21.11.2022 ರಂದು ಬೆಳಿಗ್ಗೆ 07:00 ಗಂಟೆಗೆ ಮನೆಯಿಂದ ಹೊರ ಹೋಗಿದ್ದು, ಬಳಿಕ ಕೆಲಸಕ್ಕೂ, ಮನೆಗೂ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ ‌

ಕನ್ನಡ, ತುಳು ಮಾತನಾಡುವ ಈಕೆ ಮನೆಯಿಂದ ಹೊರಹೋದ ವೇಳೆ ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕೆಂಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದಳು ಎನ್ನಲಾಗಿದೆ.

ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ (08256232093) ತಿಳಿಸುವಂತೆ ಪೋಲಿಸರು ಪ್ರಕಟಣೆ ಹೊರಡಿಸಿದ್ದಾರೆ.