ನ್ಯೂಸ್ ಆ್ಯರೋ : ಮಡಂತ್ಯಾರು ಸನಿಹದ ನಡುಬೆಟ್ಟು ಎಂಬಲ್ಲಿ ಕಳೆದ ರಾತ್ರಿ ಅಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ವಸಂತ ನಾಯಕ್ ಎಂಬವರ ಪುತ್ರ ಶಿವಪ್ರಸಾದ್ (19 ವ) ಮೃತ ವಿದ್ಯಾರ್ಥಿಯಾಗಿದ್ದಾನೆ.
ಶಿವಪ್ರಸಾದ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡುಬೆಟ್ಟು ಬಳಿ ರಾತ್ರಿ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಮೃತ ಶಿವಪ್ರಸಾದ್ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿ ಪ್ರಥಮ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ.