1. Home
  2. Belthangady
  3. ಬೆಳ್ತಂಗಡಿ : ಸೇತುವೆ ಬದಿಗೆ ಡಿಕ್ಕಿ ಹೊಡೆದು ಅಂಬ್ಯುಲೆನ್ಸ್ ಪಲ್ಟಿ – ಇಬ್ಬರಿಗೆ ಗಾಯ

ಬೆಳ್ತಂಗಡಿ : ಸೇತುವೆ ಬದಿಗೆ ಡಿಕ್ಕಿ ಹೊಡೆದು ಅಂಬ್ಯುಲೆನ್ಸ್ ಪಲ್ಟಿ – ಇಬ್ಬರಿಗೆ ಗಾಯ

ಬೆಳ್ತಂಗಡಿ : ಸೇತುವೆ ಬದಿಗೆ ಡಿಕ್ಕಿ ಹೊಡೆದು ಅಂಬ್ಯುಲೆನ್ಸ್ ಪಲ್ಟಿ – ಇಬ್ಬರಿಗೆ ಗಾಯ
0

ನ್ಯೂಸ್ ಆ್ಯರೋ‌ : ಬೆಳ್ತಂಗಡಿಯ ಸೇತುವೆ ಬಳಿ ಕಳೆದ ರಾತ್ರಿ ಆ್ಯಂಬುಲೆನ್ಸ್ ಒಂದು ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಬೆಳ್ತಂಗಡಿಯ ಆಸ್ಪತ್ರೆಯೊಂದರ ಆ್ಯಂಬುಲೆನ್ಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಕರೆತರಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್, ಬೆಳ್ತಂಗಡಿ ಸೇತುವೆ ಬದಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ‌ ವಾಹನದಲ್ಲಿ ಮೂರು ಮಂದಿ ಇದ್ದರು. ಗಾಯಾಳುಗಳನ್ನು ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅದರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..