1. Home
  2. Belthangady
  3. ಬೆಳ್ತಂಗಡಿ ‌: ಕೆರೆಗೆ ಹಾರಿ ಅಟೋ ಚಾಲಕ ಆತ್ಮಹತ್ಯೆ ಪ್ರಕರಣ – ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾಯ್ತು ಮೃತದೇಹ

ಬೆಳ್ತಂಗಡಿ ‌: ಕೆರೆಗೆ ಹಾರಿ ಅಟೋ ಚಾಲಕ ಆತ್ಮಹತ್ಯೆ ಪ್ರಕರಣ – ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾಯ್ತು ಮೃತದೇಹ

ಬೆಳ್ತಂಗಡಿ ‌: ಕೆರೆಗೆ ಹಾರಿ ಅಟೋ ಚಾಲಕ ಆತ್ಮಹತ್ಯೆ ಪ್ರಕರಣ – ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾಯ್ತು ಮೃತದೇಹ
0

ನ್ಯೂಸ್ ಆ್ಯರೋ‌ : ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕೆರೆಗೆ ಹಾರಿ ಅಟೋ ರಿಕ್ಷಾ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಇದೀಗ ಆತನ‌ ಮೃತದೇಹ ಪತ್ತೆಯಾಗಿದೆ.

ಬೆಳ್ತಂಗಡಿಯ ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಪ್ರವೀಣ್ ಪಿಂಟೋ ಇಂದು ಬೆಳಿಗ್ಗೆ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದ. ಅಲ್ಲದೇ ಕೆರೆಯ ಬದಿಯಲ್ಲಿ ಈತನ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಲಭಿಸಿದ್ದು ಇದರಿಂದಾಗಿ ಈತ ಕೆರೆಗೆ ಹಾರಿರುವುದು ಸ್ಪಷ್ಟಗೊಂಡಿತ್ತು.

ಬೆಳಾಲಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಮತ್ತು ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ ಕೆರೆಯಲ್ಲಿ ಪ್ರವೀಣ್ ನ ಮೃತದೇಹ ಪತ್ತೆ ಹಚ್ಚಿದ್ದಾರೆ‌.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..