1. Home
  2. Belthangady
  3. ಬೆಳ್ತಂಗಡಿ : ನಡ ಗ್ರಾಮದಲ್ಲಿ ಪತ್ತೆಯಾದ ಅರೆಸುಟ್ಟ ಶವ ಮಹಿಳೆಯದ್ದು, ಕೊಲೆ ಬಗ್ಗೆ ಸ್ಪಷ್ಟನೆ…!! – ಘಟನಾ ಸ್ಥಳದಲ್ಲಿ ಸಿಕ್ತು ಹಲವು ಅನುಮಾನಾಸ್ಪದ ಸೊತ್ತುಗಳು, ಕೊಲೆಯಾದ ಮಹಿಳೆ ಯಾರು..‌!?

ಬೆಳ್ತಂಗಡಿ : ನಡ ಗ್ರಾಮದಲ್ಲಿ ಪತ್ತೆಯಾದ ಅರೆಸುಟ್ಟ ಶವ ಮಹಿಳೆಯದ್ದು, ಕೊಲೆ ಬಗ್ಗೆ ಸ್ಪಷ್ಟನೆ…!! – ಘಟನಾ ಸ್ಥಳದಲ್ಲಿ ಸಿಕ್ತು ಹಲವು ಅನುಮಾನಾಸ್ಪದ ಸೊತ್ತುಗಳು, ಕೊಲೆಯಾದ ಮಹಿಳೆ ಯಾರು..‌!?

ಬೆಳ್ತಂಗಡಿ : ನಡ ಗ್ರಾಮದಲ್ಲಿ ಪತ್ತೆಯಾದ ಅರೆಸುಟ್ಟ ಶವ ಮಹಿಳೆಯದ್ದು, ಕೊಲೆ ಬಗ್ಗೆ ಸ್ಪಷ್ಟನೆ…!! – ಘಟನಾ ಸ್ಥಳದಲ್ಲಿ ಸಿಕ್ತು ಹಲವು ಅನುಮಾನಾಸ್ಪದ ಸೊತ್ತುಗಳು, ಕೊಲೆಯಾದ ಮಹಿಳೆ ಯಾರು..‌!?
0

ನ್ಯೂಸ್ ಆ್ಯರೋ‌ : ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೇಲ್ತಾಜೆ ಬಳಿ ಸುಟ್ಟ ರೀತಿಯಲ್ಲಿ ಪತ್ತೆಯಾದ ಮೃತದೇಹ ಮಹಿಳೆಯದೇ ಎಂಬುದು ಖಚಿತವಾಗಿದ್ದು ಇದೊಂದು ಕೊಲೆ ಪ್ರಕರಣ ಎಂಬುದು ಬಹುತೇಕ ಖಚಿತವಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಅಲ್ಲಿಯೇ ತಜ್ಞ ವೈದ್ಯರಿಂದ ನಡೆಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಕೈಬೆರಳಿನ ಉಂಗುರ, ಅರ್ಧ ಸುಟ್ಟ ಬಟ್ಟೆ, ತಲೆಗೆ ಹಾಕುವ ಕ್ಲಿಪ್ ಪತ್ತೆಯಾಗಿದೆ. 30ರಿಂದ 40ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಅಧಿಕಾರಿಗಳು ಪ್ರಾಥಮಿಕ ಅಂದಾಜು ಮಾಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಎಫ್.ಎಸ್. ಎಲ್.ನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಇದೊಂದು ಮಹಿಳೆಯ ಮೃತದೇಹ ಎಂಬುದು ದೃಢ ಪಟ್ಟಿರುವ ಹಿನ್ನಲೆಯಲ್ಲಿ ಕೊಲೆ ಪ್ರಕರಣದ ಬಗ್ಗೆ ವಿವಿಧ ರೀತಿಯ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಸ್ಥಳೀಯರ ಮೃತದೇಹ ಇದಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಆದರೆ ಸ್ಥಳೀಯರು ಇದರ ಹಿಂದೆ ಇದ್ದಾರೆ ಎಂಬ ಅನುಮಾನವೂ ಪೊಲೀಸರದ್ದಾಗಿದೆ.

ಸ್ಥಳಕ್ಕೆ ಅಡಿಷನಲ್ ಎಸ್.ಪಿ ಕುಮಾರ್ ಚಂದ್ರ ಅವರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..