1. Home
  2. Belthangady
  3. ಬೆಳ್ತಂಗಡಿ : ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆಗೈದು ಕಾಲು ಮುರಿದ ಪತಿ‌ – ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆಗೈದು ಕಾಲು ಮುರಿದ ಪತಿ‌ – ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆಗೈದು ಕಾಲು ಮುರಿದ ಪತಿ‌ – ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲು
0

ನ್ಯೂಸ್ ಆ್ಯರೋ‌ : ಅಮಲು ಪದಾರ್ಥ ಸೇವಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ ಪತ್ನಿಯ ಕಾಲು ಮುರಿದ ಘಟನೆ ನಾವೂರಿನಲ್ಲಿ ಸಂಭವಿಸಿದೆ.

ಸೈನಾಜ್ (27) ಎಂಬಾಕೆಯೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಈಕೆಯ ಪತಿ ಅಬ್ದುಲ್ ಆರಿಫ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.

ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದು ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅಬ್ದುಲ್ ಆರಿಫ್ ಮದ್ಯ ಹಾಗೂ ಇತರ ಅಮಲು ಪದಾರ್ಥಗಳನ್ನು ಸೇವಿಸುವ ಚಟ ಹೊಂದಿದ್ದ ಎನ್ನಲಾಗಿದೆ.

ಕಳೆದ ಡಿಸೆಂಬರ್ 11ರಂದು ಪತಿ ಪತ್ನಿಯರು ಮಕ್ಕಳೊಂದಿಗೆ ಇಂದಬೆಟ್ಟುವಿಗೆ ಹೋಗುತ್ತಿದ್ದ ವೇಳೆ ನಾವೂರಿನಲ್ಲಿ ಬೈಕ್ ಕೆಟ್ಟು ಹೋಗಿದೆ. ಅಲ್ಲಿಯೇ ಸಮೀಪವಿರುವ ಸೈನಾಜ್ ನ ಅಣ್ಣನ ಮನೆಗೆ ಹೋಗುವ ಎಂದು ಕರೆದುಕೊಂಡು ಹೋಗಿದ್ದು ಅಲ್ಲಿ ಯಾರೂ ಇರಲಿಲ್ಲ.‌ಆ ಮನೆಗೆ ಪತ್ನಿಯನ್ನು ಕರೆದುಕೊಂಡು ಹೋದ ಆರಿಫ್ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಹಲ್ಲೆಯ ತೀವ್ರತೆಗೆ ಆಕೆಯ ಕಾಲು ಮುರಿದಿದ್ದು ಮೈಮೇಲೆ ಗಾಯಗಳಾಗಿದೆ. ಇದೀಗ ಆಕೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.