ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸರಳ ಜೀವಿ ರಶೀದ್ ಕುಂಡಡ್ಕ – ನೂರಾರು ಬಡಜನರಿಗೆ ರಂಜಾನ್ ಕಿಟ್ ಹಂಚಿದ ಹೃದಯವಂತ ಎಲ್ಲರಿಗೂ ಮಾದರಿ…

ನ್ಯೂಸ್ ಆ್ಯರೋ : ರಶೀದ್ ಕುಂಡಡ್ಕ ಈ ಹೆಸರು ಸಾಮಾಜಿಕ ವಲಯದಲ್ಲಿ ಚಿರಪರಿಚಿತ.
ಬೆಳ್ತಂಗಡಿ ತಾಲೂಕಿನ ಕುಂಡಡ್ಕದವರಾದ ಇವರು ತನ್ನ ಜೀವನವನ್ನೇ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಾಗಿಟ್ಟವರು.
ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲಿ ನೂರಾರು ಬಡ ಜನರಿಗೆ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಇವರು ಹಗಲು ರಾತ್ರಿಯೆನ್ನದೆ ತನ್ನಿಂದ ಏನಾದರೂ ಸಹಕಾರ ಅಪೇಕ್ಷಿಸಿದವರಿಗೆ ಸ್ಪಂದಿಸುವ ಆಪತ್ಬಾಂಧವ ಎಂದೆನಿಸಿಕೊಂಡಿದ್ದಾರೆ. ಈ ವರ್ಷದ ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬಡ ಜನರಿಗೆ ರಂಜಾನ್ ಕಿಟ್ ನೀಡಿ ಸಮಾಜಮುಖಿ ಕಾರ್ಯಗೈದಿದ್ದಾರೆ.
ತನ್ನ ಉದ್ಯಮ ಇದ್ದರೂ ಅದಕ್ಕಿಂತ ಮಿಗಿಲಾಗಿ ಸಮಾಜಕ್ಕಾಗಿ ಹೆಚ್ಚು ಸಮಯ ಮೀಸಲಿರಿಸಿ ಇವರು ತನ್ನ ನಿಜವಾದ ಕರ್ತವ್ಯ ಇದು ಎಂದು ಕಾರ್ಯಾಚರಣೆ ಮೂಲಕ ತೋರಿಸಿಕೊಟ್ಟಿದ್ದಾರೆ. ರಾಜಕೀಯ ಮುಖಂಡರ ಜೊತೆಗೆ ಸದಾ ಸಕ್ರಿಯರಾಗಿದ್ದರೂ ಜೊತೆ ಜೊತೆಗೆ ಸಾಮಾಜಿಕ ಕಳಕಳಿಗಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದ ಇವರು ಪಟ್ಟಣದೊಂದಿಗೆ ಬೆರೆತು ಅಲ್ಲಿನ ಪ್ರಮುಖರ ಜತೆ ಸಂಪರ್ಕ ಸಾಧಿಸಿ ಆ ಮೂಲಕ ತನ್ನ ಸಾಮಾಜಿಕ ಚಿಂತನೆಗಳಿಗೆ ಹೊಸ ರೂಪ ನೀಡಿದವರು.
ಆಸ್ಪತ್ರೆಗಳಿಗೆ ತೆರಳುವವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭಿಸುವಂತೆ ಮಾಡಲು ಆಸ್ಪತ್ರೆ ಅಧಿಕೃತರೊಂದಿಗೆ ಮಾತನಾಡಿ ನೆರವಾಗುವುದು, ಕಾನೂನು ಸಂಬಂಧ ವಿಷಯಗಳಲ್ಲಿ ಕಾನೂನು ತಜ್ಜರನ್ನು ಭೇಟಿಯಾಗುವುದು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ರಶೀದ್ ಕುಂಡಡ್ಕ ಸದಾ ಮುಂದು.
ರಕ್ತ ಅಗತ್ಯ ಇರುವವರಿಗೆ ತಕ್ಷಣ ರಕ್ತ ಪೂರೈಸಿ ಜೀವದಾನಕ್ಕೆ ನೆರವು ನೀಡುವ ಮೂಲಕ ಖ್ಯಾತಿ ಪಡೆದ ಇವರು ಜನರೊಂದಿಗಿನ ಅವಿನಾಭಾವ ಸಂಬಂಧ ವನ್ನು ತನ್ನ ಕಾಯಕವಾಗಿಸಿದ್ದಾರೆ. ಮದುವೆಗೆ ಯಾವುದೇ ದಾರಿಯಿಲ್ಲದೆ ದಿಕ್ಕು ತೋಚದವರಿಗೆ ಸೂಕ್ತ ವ್ಯವಸ್ಥೆ ಮಾಡಿ ಅವರ ಕಣ್ಣೀರೊರೆಸಿ ಅವರ ಸಂತೋಷದಲ್ಲಿ ನಿಜವಾದ ಸಂತೃಪ್ತಿ ಕಾಣುವ ರಶೀದ್ ಕುಂಡಡ್ಕ ಅವರ ಸಮಾಜಸೇವೆ ಗುರುತಿಸುವಂಥದ್ದು.
ಬೆಳ್ತಂಗಡಿ ತಾಲೂಕಿನ ಪುತ್ತಿಲ, ಬಾರ್ಯ, ಪಾಂಡವರಕಲ್ಲು, ಗುರುವಾಯನಕೆರೆ, ಬಂಟ್ವಾಳ ತಾಲೂಕಿನ ಕಕ್ಕೆಪದವು, ಫರಂಗಿಪೇಟೆ, ಮಂಗಳೂರು ಹೊರವಲಯದ ತೆಕ್ಕಾರು, ದೇರಳಕಟ್ಟೆ, ಉಳ್ಳಾಲ, ಪುತ್ತೂರು ತಾಲೂಕಿನ ಬನ್ನೂರು, ನೆಲ್ಯಾಡಿ, ಉಪ್ಪಿನಂಗಡಿ ಸಮೀಪದ ಸತ್ತಿಕಲ್ಲು ಮುಂತಾದೆಡೆ ರಂಜಾನ್ ಕಿಟ್ ಹಂಚಿರುವುದು ಇವರ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ತನ್ನ ಅಗತ್ಯಕ್ಕಿಂತ ಇತರರ ಅಗತ್ಯ ಮುಖ್ಯ ಎಂಬ ಉದಾರ ಮನೋಭಾವ ಇವರ ವಿಶೇಷತೆ. ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಅವರು ಮಾಡಿದ ಸಮಾಜಮುಖಿ ಕಾರ್ಯ ಮತ್ತಷ್ಟು ಮುಂದುವರೆಯಲೆಂಬ ಸದಾಶಯ ಎಲ್ಲರದು.