1. Home
  2. Belthangady
  3. ಬೆಳ್ತಂಗಡಿ ‌: ಪುದುವೆಟ್ಟು ಗ್ರಾಮದಲ್ಲಿ ಆ್ಯಸಿಡ್ ಸೇವಿಸಿ ಮಹಿಳೆ ಅಸ್ವಸ್ಥ – ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ ‌: ಪುದುವೆಟ್ಟು ಗ್ರಾಮದಲ್ಲಿ ಆ್ಯಸಿಡ್ ಸೇವಿಸಿ ಮಹಿಳೆ ಅಸ್ವಸ್ಥ – ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ ‌: ಪುದುವೆಟ್ಟು ಗ್ರಾಮದಲ್ಲಿ ಆ್ಯಸಿಡ್ ಸೇವಿಸಿ ಮಹಿಳೆ ಅಸ್ವಸ್ಥ – ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು
0

ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮೇರ್ಲ ಎಂಬಲ್ಲಿ ಮಹಿಳೆ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೃತ ಮಹಿಳೆ ಸ್ಥಳೀಯ ನಿವಾಸಿ ರವಿ ಎಂಬವರ ಪತ್ನಿ ಬಿಂದು(48)ಎಂಬಾಕೆಯಾಗಿದ್ದಾರೆ.

ಈಕೆ ನ.27ರಂದು ಮನೆಯಲ್ಲಿ ರಬ್ಬರಿಗೆ ಉಪಯೋಗಿಸುವ ಆ್ಯಸಿಡ್ ಸೇವಿಸಿದ್ದಾರೆ. ಮನೆಯವರು ಈಕೆಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..