ನಾನು ಟ್ವಿಟರ್ ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೆ? – ಎಲಾನ್ ಮಸ್ಕ್ ಪ್ರಶ್ನೆಗೆ ನೆಟ್ಟಿಗರು ಕೊಟ್ಟ ಶಾಕ್ ಹೇಗಿತ್ತು ಗೊತ್ತಾ..!?

ನ್ಯೂಸ್ ಆ್ಯರೋ : ಟ್ವಿಟ್ಟರ್ ಖರೀದಿ ಬಳಿಕ ಒಂದಲ್ಲ ಒಂದು ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಒಂದು ಎಲ್ಲರಿಗೂ ಅಚ್ಚರಿಯುಂಟು ಮಾಡಿದ್ದು ಭಾರೀ ವೈರಲ್ ಆಗಿದೆ.
ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? ಎಂಬುದನ್ನು ತಿಳಿಯಲು ನಿಮ್ಮ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಈ ಮತಗಣನೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬರೆದುಕೊಂಡಿದ್ದರು.
ಅವರು ಟ್ವೀಟ್ ಮಾಡಿರುವ ಕೆಲವೇ ನಿಮಿಷಗಳಲ್ಲಿ ಅಗಾಧ ಸಂಖ್ಯೆಯಲ್ಲಿ ಮತಗಳು ಬಿದ್ದಿದ್ದವು. ಸಾಕಷ್ಟು ಜನರು ಈ ಟ್ವೀಟ್ ಅನ್ನು ಹಂಚಿಕೊಂಡಿದ್ದರು.
ಟ್ವಿಟ್ಟರ್‌ನ ನೂತನ ಮಾಲೀಕರಾದ ತಕ್ಷಣವೇ ಉನ್ನತ ಹುದ್ದೆಯಲ್ಲಿದ್ದ ಅನೇಕರನ್ನು ಮನೆಗೆ ಕಳುಹಿಸಿ ದೊಡ್ಡ ಸುದ್ದಿಯಾಗಿದ್ದರು. ಆನಂತರವೂ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು. ಇವರ ಕೆಲವೊಂದು ಕ್ರಮಗಳು ಸಾಕಷ್ಟು ವಿವಾದ, ಟೀಕೆಗಳಿಗೂ ಕಾರಣವಾಗಿತ್ತು.
ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಬೆಳಿಗ್ಗೆ 4.50ರ ಸುಮಾರಿಗೆ ಎಲಾನ್ ಮಸ್ಕ್ ಫೋಸ್ಟ್ ಮಾಡಿದ್ದಾರೆ. ತಕ್ಷಣವೇ 82 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದವು. ಇದುವರೆಗೆ ಶೇಕಡಾ 43ರಷ್ಟು ಜನರು ಮಸ್ಕ್ ಅವರನ್ನು ಬೆಂಬಲಿಸಿದರೆ, 57% ಜನರು ಮಸ್ಕ್ ಕೆಳಗಿಳಿಯಲು ಮತ ಚಲಾಯಿಸಿದ್ದಾರೆ.
ವಿಶೇಷವಾಗಿ ಅತ್ಯಧಿಕ ಜನರು ಎಲಾನ್ ಮಸ್ಕ್ ಅವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ. ಇದುವರೆಗೆ 425k ಬಾರಿ ಮರುಟ್ವೀಟ್ ಮಾಡಲಾಗಿದ್ದು, 17,502,391 ಒಟ್ಟು ಮತಗಳು ಬಿದ್ದಿವೆ. ಸದ್ಯ ಎಲಾನ್ ಮಸ್ಕ್ ವಿರುದ್ಧವೇ ಭಾರೀ ಅಂತರದ ಮತಗಳು ಬಿದ್ದಿದ್ದು, ಅವರ ಮುಂದಿನ ನಡೆ ಏನಿರಬಹುದು ಎಂದು ಕಾದುನೋಡಬೇಕಿದೆ.
ಎಲಾನ್ ಮಸ್ಕ್ ನೇತೃತ್ವದ ಟ್ವಿಟ್ಟರ್ ಕಂಪನಿಯು ಈಚೆಗೆ ಹೊಸ ಪ್ರೈವೆಸಿ ನಿಯಮಗಳನ್ನು ಪ್ರಕಟಿಸಿತ್ತು. ಇದರ ಪ್ರಕಾರ, ಯಾರೂ ಕೂಡ ಟ್ವಿಟ್ಟರ್ ಖಾತೆಯಲ್ಲಿ ಇನ್ನೊಬ್ಬರ ಲೈವ್ ಲೊಕೇಷನ್ (ಪ್ರದೇಶದ ಮ್ಯಾಪ್ ಮಾಹಿತಿ) ಹಂಚಿಕೊಳ್ಳುವಂತೆ ಇಲ್ಲ. ಈ ರೀತಿ ಲೈವ್ ಲೊಕೇಷನ್ ಡಾಕ್ಸಿಂಗ್ ಮಾಡಿದವರ ಖಾತೆ ಅಮಾನತುಗೊಳಿಸುವುದಾಗಿ ಹೇಳಿತ್ತು. ಎಲಾನ್ ಮಸ್ಕ್ ಅವರ ಖಾಸಗಿ ಜೆಟ್ ವಿಮಾನ ಹಾರಾಟದ ಕುರಿತು ಮಾಹಿತಿ ನೀಡಿದ್ದ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.