1. Home
  2. Business
  3. News
  4. ಹಣಕಾಸು
  5. ಸುದ್ದಿ
  6. ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…
0

ನ್ಯೂಸ್ ಆ್ಯರೋ : ಹಲವು ಬಾರಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕ್ರೆಡಿಟ್ ಸ್ಕೋರ್ ಹೇಗೆ ನಿರ್ಧರಿಸಲ್ಪಡುತ್ತದೆ? ನಾವು ಸಾಲದ ಕಂತುಗಳನ್ನು ಪಾವತಿಸುವುದು ಸಿಬಿಲ್ ಅಥವಾ ಸಿಆರ್​ಐಎಫ್​ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಮುಂದೆ ಸಾಲ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗಬಹುದು.

ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್​ಗಳು ಮೊದಲು ಪರಿಶೀಲಿಸುವುದೇ ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿದೆ ಎಂಬುದನ್ನು. ಕ್ರೆಡಿಟ್ ಸ್ಕೋರ್ ಕಳಪೆ ಅಥವಾ ಕಡಿಮೆಯಾಗಿದ್ದರೆ ಸಾಲ ದೊರೆಯುವುದು ಕಷ್ಟಸಾಧ್ಯ.

ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಬಗ್ಗೆ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರು ಹಲವು ಸಂದರ್ಭಗಳಲ್ಲಿ ನೀಡಿರುವ ಮಾಹಿತಿ ಮತ್ತು ವಿಶ್ಲೇಷಣೆಗಳ ಆಧಾರದಲ್ಲಿ ಕೆಲವು ಸಲಹೆ​ಗಳನ್ನು ಇಲ್ಲಿ ನೀಡಲಾಗಿದೆ.

ಏನಿದು ಕ್ರೆಡಿಟ್ ಸ್ಕೋರ್?

ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ಪಡೆಯುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆ. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಸಾಲ ಪಡೆಯುವುದು ಸಲೀಸಾಗಲಿದೆ. 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ.

ಇದು ವ್ಯಕ್ತಿಯ ಸಾಲಪಡೆಯಬಹುದಾದ ಅರ್ಹತೆಯನ್ನೂ ನಿರ್ಧರಿಸುತ್ತದೆ. 700 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಶಿಸ್ತುಬದ್ಧ ಮರುಪಾವತಿಯತ್ತ ಗಮನ ಹರಿಸಬೇಕು:

ಸಾಲದ ಮರುಪಾವತಿಯನ್ನು ಹೆಚ್ಚು ಶಿಸ್ತುಬದ್ಧವಾಗಿಸುವ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ನಿಗದಿತ ಸಮಯದ ಒಳಗೆ ಪೂರ್ಣ ಮೊತ್ತವನ್ನು ಮರು ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳಲಿದೆ. ಹೀಗಾಗಿ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು. ನಿಗದಿತ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಬಗ್ಗೆ ಅನುಮಾನವಿದ್ದಲ್ಲಿ ಸಾಲ ಪಡೆಯುವಿಕೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಸಾಲಗಳನ್ನು ಪಡೆಯುವಾಗ ಎಚ್ಚರವಿರಲಿ:

ಸಾಲಗಳನ್ನು ಪಡೆಯುವಾಗ ಎಚ್ಚರ ವಹಿಸಿಕೊಳ್ಳಬೇಕು. ಒಂದೇ ರೀತಿಯ ಹಲವು ಸಾಲಗಳನ್ನು ಪಡೆಯುವುದು ಒಳ್ಳೆಯದಲ್ಲ. ವೈಯಕ್ತಿಕ ಸಾಲಗಳನ್ನು ಪಡೆಯುವ ಬದಲು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದುವುದು ಉತ್ತಮ. ಕೈಯಲ್ಲಿ ದುಡ್ಡಿದೆ ಎಂದು ಪೂರ್ತಿ ಮೊತ್ತವನ್ನು ಪಾವತಿ ಮಾಡುವ ಬದಲು ವಾಹನ ಸಾಲ ಅಥವಾ ಅಡಮಾನ ಸಾಲಗಳನ್ನು ಪಡೆಯುವುದು ಉತ್ತಮ. ಹೀಗೆ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ. ಅದೇ ರೀತಿ ನಮ್ಮ ಬಳಿ ಇರುವ ಹಣವನ್ನು ಸ್ಮಾರ್ಟ್ ಹೂಡಿಕೆಗಳಲ್ಲಿ ಬಳಸುವ ಮೂಲಕ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು ಎನ್ನುತ್ತಾರೆ ತಜ್ಞರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..