1. Home
  2. Business
  3. News
  4. ಇನ್ಮುಂದೆ ATM ನಲ್ಲಿ ಚಿನ್ನ ಕೂಡ ಸಿಗುತ್ತದೆ ಗೊತ್ತಾ…!? – ಚಿನ್ನ ಪಡೆಯುವ ಹೊಸ ತಂತ್ರಜ್ಞಾನದ ATM ವಿಡಿಯೋ ನೋಡಿ…

ಇನ್ಮುಂದೆ ATM ನಲ್ಲಿ ಚಿನ್ನ ಕೂಡ ಸಿಗುತ್ತದೆ ಗೊತ್ತಾ…!? – ಚಿನ್ನ ಪಡೆಯುವ ಹೊಸ ತಂತ್ರಜ್ಞಾನದ ATM ವಿಡಿಯೋ ನೋಡಿ…

ಇನ್ಮುಂದೆ ATM ನಲ್ಲಿ ಚಿನ್ನ ಕೂಡ ಸಿಗುತ್ತದೆ ಗೊತ್ತಾ…!? – ಚಿನ್ನ ಪಡೆಯುವ ಹೊಸ ತಂತ್ರಜ್ಞಾನದ ATM ವಿಡಿಯೋ ನೋಡಿ…
0

ನ್ಯೂಸ್ ಆ್ಯರೋ : ಇಲ್ಲಿಯವರೆಗೆ ನೀವು ಎಟಿಎಂನಿಂದ ಹಣ ವಿಥ್‌ಡ್ರಾ ಮಾಡುವುದನ್ನಷ್ಟೇ ನೋಡಿರುತ್ತೀರಿ. ಆದರೆ ಈಗ ಎಟಿಎಂನಿಂದ ಬಂಗಾರವೂ ಬರುತ್ತದೆ.

ಹೌದು, ಗೋಲ್ಡ್‌ಸಿಕ್ಕಾ ಹೈದರಾಬಾದ್‌ನಲ್ಲಿ ವಿಶ್ವದ ಮೊದಲ ಗೋಲ್ಡ್ ಎಟಿಎಂ ಅನ್ನು ಪ್ರಾರಂಭಿಸಿದೆ. ಇದು ವಿಶ್ವದ ಮೊದಲ ರಿಯಲ್-ಟೈಮ್ ಗೋಲ್ಡ್ ಎಟಿಎಂ ಆಗಿದೆ. ಈ ಮೂಲಕ ಗೋಲ್ಡ್‌ಸಿಕ್ಕಾ ಗ್ರಾಹಕರು ಆಭರಣ ಮಳಿಗೆಗೆ ಭೇಟಿ ನೀಡದೆ ಎಟಿಎಂಗಳಿಂದಲೇ ಚಿನ್ನ ಖರೀದಿಸಲು ಸಾಧ್ಯವಾಗಿದೆ.

ಬಜೆಟ್‌ಗೆ ಅನುಗುಣವಾಗಿ ಖರೀದಿ


ಚಿನ್ನದ ಎಟಿಎಂ ಬಳಸುವುದು, ಮಾಮೂಲಿ ಎಟಿಎಂ ಬಳಸಿದಷ್ಟೇ ಸುಲಭವಾಗಿದ್ದು, ಇದು 24×7 ಲಭ್ಯವಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಚಿನ್ನ ಖರೀದಿಸಬಹುದಾಗಿದ್ದು, ಗೋಲ್ಡ್ ಎಟಿಎಂ ಮೂಲಕ ಜನರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿನ್ನವನ್ನು ಒದಗಿಸುವಲ್ಲಿ ಈ ಯಂತ್ರ ಕಾರ್ಯಾಚರಿಸಲಿದ್ದು, ಚಿನ್ನದ ಎಟಿಎಂಗಳಲ್ಲಿ ಕಂಡುಬರುವ ಎಲ್ಲಾ ಚಿನ್ನದ ಕಾಯಿನ್‌ಗಳು 24 ಕ್ಯಾರೆಟ್ ಚಿನ್ನವಾಗಿದೆ.

ಮತ್ತೊಂದು ವಿಶೇಷವೆಂದರೆ ಮಾರುಕಟ್ಟೆಯಲ್ಲಿನ ಬೆಲೆ ಬದಲಾವಣೆ ಕುರಿತು ಗ್ರಾಹಕರಿಗೆ ತಿಳಿಸಲು ಈ ಎಟಿಎಂ ಪ್ರಸ್ತುತ ಚಿನ್ನದ ಬೆಲೆಯನ್ನು ಪ್ರದರ್ಶಿಸಲಿದ್ದು, ಚಿನ್ನದ ನಾಣ್ಯಗಳು 0.5 ಗ್ರಾಂನಿಂದ 100 ಗ್ರಾಂ ವರೆಗಿನ ಮೌಲ್ಯಗಳಲ್ಲಿ ಲಭ್ಯವಿದೆ. ಒಬ್ಬರು 0.5 ಗ್ರಾಂಗಿಂತ ಕಡಿಮೆ ಅಥವಾ 100 ಗ್ರಾಂಗಿಂತ ಹೆಚ್ಚು ಖರೀದಿಸುವಂತಿಲ್ಲ.

ಅಪರಂಜಿ ಚಿನ್ನ ಲಭ್ಯಮತ್ತೂ 3 ಎಟಿಎಂ ಬರಲಿವೆ…!!

999 ಪರಿಶುದ್ಧತೆಯ ಚಿನ್ನದ ನಾಣ್ಯಗಳು ಎಟಿಎಂನಲ್ಲಿ ದೊರೆಯಲಿದ್ದು, ಯಂತ್ರದ ಸ್ಕ್ರೀನ್ ನಲ್ಲಿ ಚಿನ್ನದ ನಾಣ್ಯದ ವಿವರಗಳು ಕಾಣಿಸಲಿವೆ. ಕಾರ್ಡ್ ಮೂಲಕ ಪಾವತಿ ಮಾಡಿ ಚಿನ್ನದ ನಾಣ್ಯಗಳನ್ನು ವಿತ್ಡ್ರಾ ಮಾಡಬಹುದಾಗಿದ್ದು, ಟ್ಯಾಂಪರ್ ಪ್ರೂಫ್ ಪ್ಯಾಕೆಟ್ ಗಳಲ್ಲಿ ನಾಣ್ಯಗಳು ಯಂತ್ರದಿಂದ ಹೊರಬರಲಿವೆ.

ಉದ್ಯಮದ ಉದ್ದೇಶಕ್ಕಾಗಿ ವಾರಂಗಲ್, ಕರೀಮ್ ನಗರ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಇನ್ನೂ 3 ಚಿನ್ನದ ಎಟಿಎಂಗಳು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ 3,000 ಯಂತ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಗೋಲ್ಡ್‌ ಸಿಕ್ಕಾದ ಸಿಇಒ ತಿಳಿಸಿದ್ದಾರೆ. ಇದರಲ್ಲಿ ಶೇ.60-70ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲು ಚಿಂತಿಸಿದ್ದು, ಎಟಿಎಂಗಳು ಪ್ರಾಯೋಗಿಕವಾಗಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ನಗರದ ಗುಲ್ಜಾರ್‌ಹೌಸ್, ಸಿಕಂದರಾಬಾದ್, ಅಬಿಡ್ಸ್, ಪೆದ್ದಪಲ್ಲಿ, ವಾರಂಗಲ್ ಮತ್ತು ಕರೀಂನಗರದಲ್ಲಿ ಶೀಘ್ರದಲ್ಲೇ ಚಿನ್ನದ ಎಟಿಎಂಗಳನ್ನು ತೆರೆಯಲಾಗುವುದು ಎಂದು ತರುಜ್‌ ಮಾಹಿತಿ ನೀಡಿದ್ದಾರೆ.

24/7 ಸರ್ವೀಸ್

ದಿನದ 24 ಗಂಟೆಯೂ ಚಿನ್ನದ ಎಟಿಎಂ ಕಾರ್ಯಾಚರಿಸಲಿದ್ದು, ಸಿಕಂದರಾಬಾದ್ ನ ಗುಲ್ಜಾರ್ ಹೌಸ್ ಹಾಗೂ ಹೈದರಾಬಾದ್ ನ ಅಬ್ದಿಸ್ನಲ್ಲಿಯೂ ಚಿನ್ನ ಎಟಿಎಂಗಳನ್ನು ಸ್ಥಾಪಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಎಟಿಎಂನಿಂದ ಹಣವನ್ನು ವಿತ್ಡ್ರಾ ಮಾಡಿದಷ್ಟು ಸುಲಭವಾಗಿ ಇನ್ನು ಚಿನ್ನವನ್ನೂ ಪಡೆಯಬಹುದಾಗಿದ್ದು, ಈ ಮೂಲಕ ಈ ಎಟಿಎಂ ಖರೀದಿದಾರರನ್ನು ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಕರ್ಷಿಸಲಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..