ನ್ಯೂಸ್ ಆ್ಯರೋ : ದೇಶಕ್ಕಾಗಿ ಪ್ರಾಣತೆತ್ತ ಸೈನಿಕರು, ಹೋರಾಟದಲ್ಲಿ ಹುತಾತ್ಮರಾಗಿ ವೀರಸ್ವರ್ಗ ಅಪ್ಪಿರುವ ಯೋಧರ ಚರಣಕಮಲಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಸಂಘಟನೆಯು ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಿತು. ಕದ್ರಿಯಲ್ಲಿರುವ ಯುದ್ಧ ಸ್ಮಾರಕದಲ್ಲಿ ಇಂದು ಬೆಳಗ್ಗೆ ಕಾರ್ಗಿಲ್ ವಿಜಯ ದಿವಸ್ ಆಚರಿಸಿದ ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಇದರ ಕಾರ್ಯಕರ್ತರು ದೇಶಕ್ಕಾಗಿ ಮಡಿದ ಯೋಧರ ವೀರ ಬಲಿದಾನ ನೆನೆದರು. ಅಧ್ಯಕ್ಷರಾದ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಬರ್ಕೆ, ಸಂಘಟನಾ […]