ನ್ಯೂಸ್ ಆ್ಯರೋ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಂದಿಗೆ ಇಮ್ರಾನ್ ಖಾನ್ ನಡೆಸಿದ್ದಾರೆ ಎಂದು ಹೇಳಲಾದ ಸೆಕ್ಸ್ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಲ್ಲಗಳೆದಿದೆ. ಇಮ್ರಾನ್ ಖಾನ್ ಮತ್ತು ಮಹಿಳೆಯೊಬ್ಬರು ಫೋನ್ನಲ್ಲಿ ತುಂಬ ಅಶ್ಲೀಲವಾಗಿ, ಲೈಂಗಿಕ ಪ್ರಚೋದಕವಾಗಿ ಮಾತಾಡಿಕೊಂಡ ಆಡಿಯೊಗಳು ಇವಾಗಿವೆ. ಆ ಮಹಿಳೆ ತನ್ನ ಖಾಸಗಿ ಅಂಗಗಳು, ತನ್ನ ಲೈಂಗಿಕ ಬದುಕಿನ ಬಗ್ಗೆ ಮಾತಾಡಿದ್ದೂ […]