ನ್ಯೂಸ್ ಆ್ಯರೋ : ಹಿಂದೂ ಧರ್ಮದಲ್ಲಿ ಭಗವಾನ್ ಶ್ರೀ ರಾಮನಿಗೆ ತನ್ನದೇ ಆದ ಮಹತ್ವವಿದೆ. ರಾಮಾಯಣ ಕಾಲದಿಂದ ಇಂದಿನವರೆಗೂ ಶ್ರೀರಾಮನಿಗೆ ಭಾರತೀಯ ನೆಲ ಇನ್ನಿಲ್ಲದಂತೆ ಭಕ್ತಿ, ಗೌರವ ಸಮರ್ಪಿತವಾಗುತ್ತಿದೆ. ಅದೆಷ್ಟೋ ಭಕ್ತಿಗೀತೆಗಳು ಶ್ರೀರಾಮನ ಜನ್ಮ, ಆತನ ಸಾಧನೆ, ಆತನ ಜೀವನದ ನೈತಿಕ ಜೀವನವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿವೆ. ಇದೀಗ ಸದ್ದಿಲ್ಲದೇ ಕರಾವಳಿಯ ಯುವಕರ ಹೊಸ ತಂಡವೊಂದು ಜೈ ಜೈ ಶ್ರೀ ರಾಮ್ ಹೆಸರಿನ ಭಕ್ತಿಗೀತೆಯೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದ್ದು, ವೈರಲ್ ಆಗುವತ್ತ ದಾಪುಗಾಲಿಟ್ಟಿದೆ. ಭಾರತ್ ಕಾ […]