1. Home
  2. Crime
  3. News
  4. ಇಬ್ಬರು ಮಹಿಳೆಯರನ್ನು ಕೊಂದು 56 ಪೀಸ್ ಮಾಡಿ ಬೇಯಿಸಿ ತಿಂದ ನರಭಕ್ಷಕರು‌ – ದೇವರನಾಡು ಕೇರಳದಲ್ಲಿ ನಡೆಯಿತು ದೇಶವನ್ನೇ ಬೆಚ್ಚಿಬೀಳಿಸುವ ಘಟನೆ..!!

ಇಬ್ಬರು ಮಹಿಳೆಯರನ್ನು ಕೊಂದು 56 ಪೀಸ್ ಮಾಡಿ ಬೇಯಿಸಿ ತಿಂದ ನರಭಕ್ಷಕರು‌ – ದೇವರನಾಡು ಕೇರಳದಲ್ಲಿ ನಡೆಯಿತು ದೇಶವನ್ನೇ ಬೆಚ್ಚಿಬೀಳಿಸುವ ಘಟನೆ..!!

ಇಬ್ಬರು ಮಹಿಳೆಯರನ್ನು ಕೊಂದು 56 ಪೀಸ್ ಮಾಡಿ ಬೇಯಿಸಿ ತಿಂದ ನರಭಕ್ಷಕರು‌ – ದೇವರನಾಡು ಕೇರಳದಲ್ಲಿ ನಡೆಯಿತು ದೇಶವನ್ನೇ ಬೆಚ್ಚಿಬೀಳಿಸುವ ಘಟನೆ..!!
0

ನ್ಯೂಸ್ ಆ್ಯರೋ : ಕೇರಳದಲ್ಲಿ ಇಬ್ಬರು ಮಹಿಳೆಯರ ನರಬಲಿ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳೆಯರನ್ನು ಕೊಂದ ಬಳಿಕ ಮೃತದೇಹಗಳನ್ನು 56 ಪೀಸ್ ಮಾಡಿ ಮಾಂಸ ಭಕ್ಷಣೆ ಮಾಡಿದ ವಿಕೃತ ಆರೋಪದಡಿ ದಂಪತಿಯನ್ನು ಬಂಧನ ಮಾಡಲಾಗಿದೆ.

ಕೇರಳದ ಪಟ್ಟಣತಿಟ್ಟಂ ಬಳಿಯ ಎಲಂತೂರಲ್ಲಿ ವಾಮಾಚಾರಕ್ಕೆ ಮಹಿಳೆಯರನ್ನ ಬಲಿ ಕೊಟ್ಟ ಪಾಪಿಗಳು ಮಹಿಳೆಯರನ್ನು ಕೊಂದ ಬಳಿಕ ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಬಳಿಕ ಮಾಂಸವನ್ನು ಬೇಯಿಸಿಕೊಂಡು ತಿಂದಿದ್ದಾರೆ. ಈ ಬಗ್ಗೆ ಪೊಲೀಸರು ಸ್ಪೋಟಕ ಮಾಹಿತಿ ನೀಡಿದ್ದಾರೆ. ಈ ಕೇಸ್ ನಲ್ಲಿ ಈಗಾಗಲೇ ಭಗವಾಲ್ ಸಿಂಗ್, ಲೈಲಾ ಹಾಗೂ ಶಫಿ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪದ್ಮಾ(52), ರೋಸ್ಲಿನ್(50) ಎಂಬ ಇಬ್ಬರು ಮಹಿಳೆಯರು ಹತ್ಯೆಗೀಡಾದವರು. ಎರ್ನಾಕುಲಂ ಜಿಲ್ಲೆಯ 2 ಸ್ಥಳಗಳಲ್ಲಿ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಮಾಂತ್ರಿಕ ಭಗವಲ್ ಸಿಂಗ್, ಪತ್ನಿ ಲೀಲಾ ಕೃತ್ಯ ಎಸಗಿದ್ದಾರೆ. ಮಾಂತ್ರಿಕನಿಗೆ ಶಫಿ ಎಂಬುವನಿಂದ ಸಹಕಾರ ದೊರೆತಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಕೊಲೆಯಾದವರು

ಸೆಪ್ಟೆಂಬರ್ 26ರಂದು ಕಡವಂತ್ರದಿಂದ ನಾಪತ್ತೆಯಾಗಿದ್ದ ಪದ್ಮ ಮತ್ತು ರೋಸ್ಲಿನ್ ಳನ್ನೂ ಅಪಹರಿಸಿದ್ದ ಹಂತಕರು ಇಬ್ಬರು ಮಹಿಳೆಯರ ಕತ್ತು ಸೀಳಿ ನರಬಲಿ ಕೊಟ್ಟು ತುಂಡು ತುಂಡುಗಳಾಗಿ ಕತ್ತರಿಸಿದ್ದರು. 56 ತುಂಡುಗಳಾಗಿ ಮಹಿಳೆಯರನ್ನು ತುಂಡು ಮಾಡಿದ್ದರು. ನರಬಲಿ ಬಳಿಕ ದೇಹವನ್ನು ಬೇಯಿಸಿ ತಿಂದಿದ್ದರು. ಪತ್ತಣಂತಿಟ್ಟ ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು.

ಕಾಲಡಿ ಗ್ರಾಮದ ನಿವಾಸಿ ರೋಸ್ಲಿನ್ ಅವರನ್ನು ಜೂನ್ ನಲ್ಲಿ ರೋಸ್ಲಿನ್ ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದರು. ಸೆಪ್ಟೆಂಬರ್ನಲ್ಲಿ ಇನ್ನೋರ್ವ ಮಹಿಳೆ ಪದ್ಮಾ ಅವರನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ. 15 ಸಾವಿರ ಕೊಡೋದಾಗಿ ಆಮಿಷವೊಡ್ಡಿ ಕಿಡ್ನ್ಯಾಪ್ ಮಾಡಲಾಗಿದೆ.

ಚಿರಯೌವ್ವನ ಇರಬೇಕೆಂದು ಆಸೆ ಪಟ್ಟ ಹಂತಕರು ವಾಮಾಚಾರ ನಡೆಸಿ ನರಬಲಿ ನೀಡಿದ್ದಾರೆ. ವಯಸ್ಸು ಆಗದಂತೆ ಇರುವ ಉದ್ದೇಶ ಹೊಂದಿದ್ದರು. ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ಬಲಿ ಕೊಟ್ಟರೆ ಸಮೃದ್ಧಿ ಸಿಗುತ್ತೆ ಎಂದು ನಂಬಿಕೆ ಇಟ್ಟುಕೊಂಡಿದ್ದರು. ಹೀಗಾಗಿ ವಾಮಾಚಾರ ನಡೆಸಿ ಇಬ್ಬರು ಮಹಿಳೆಯರ ಬಲಿ ನೀಡಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..