ವಿಟ್ಲ : ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ – ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು

ನ್ಯೂಸ್ ಆ್ಯರೋ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ವಿಟ್ಲ ಸಮೀಪದ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ನಡೆದಿದೆ.
ಅಳಿಕೆ ನೆಗಳಗುಳಿ ನಿವಾಸಿ ಕೃಷ್ಣ ಕುಮಾರ್ ಮತ್ತು ಆತನ ತಾಯಿ ವಾರಿಜ ಹಲ್ಲೆಗೊಳಗಾಗಿದ್ದು, ಕೃಷ್ಣ ಕುಮಾರ್ ಅವರ ಸಹೋದರ ಹರೀಶ್ ಎಂಬವರು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಕುಡಿತ ಮತ್ತಿನಲ್ಲಿ ಹರೀಶ್ ಈ ಗಲಾಟೆ ನಡೆಸಿದ್ದಾನೆ ಎನ್ನಲಾಗುತ್ತಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…
ಇದನ್ನೂ ಓದಿ...
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಹಿಂದೆ ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲ್ ಕರಿನೆರಳು - ಅಧಿಕೃತವಾಗಿ ಬೀಗ ಜಡಿದ ಎನ್ಐಎ ಅಧಿಕಾರಿಗಳು ಬಂಟ್ವಾಳ : ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದ ವೇಳೆ ಕಳ್ಳರ ಕೈಚಳಕ - ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ನಗ ನಗದು ಮತ್ತು ಅಡಿಕೆ ದರೋಡೆ ವಿಟ್ಲ : ಪುಣಚ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ಮೃತದೇಹ ಪತ್ತೆ ಪ್ರಕರಣ - ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ..!! ವಿಟ್ಲ : ಪುಣಚ ಗ್ರಾಮದ ಗುಡ್ಡಪ್ರದೇಶದಲ್ಲಿ ವ್ಯಕ್ತಿಯ ಮೃತದೇಹ, ಮೊಬೈಲ್ ಪತ್ತೆ - ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ ಶಿವಮೊಗ್ಗ : ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೋಲಿಸರ ಗುಂಡಿನ ದಾಳಿ - ಬಂಧನಕ್ಕೆ ತೆರಳಿದ್ದ ಪೋಲಿಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಅಂದರ್ ಬಂಟ್ವಾಳ : ಮಂಗ್ಳೂರ್ ನ ಹಿಂದೂ ಹುಡುಗಿ ಭಟ್ಕಳದ ಮುಸ್ಲಿಂ ವಕೀಲನೊಂದಿಗೆ ಬಸ್ ನಲ್ಲಿ ಬೆಂಗಳೂರು ಟ್ರಿಪ್ - ಬಸ್ ತಡೆದು ತರಾಟೆಗೆ ತೆಗೆದುಕೊಂಡ ಸಂಘ ಪರಿವಾರದ ಕಾರ್ಯಕರ್ತರು…!!
News Arrow
ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..