1. Home
  2. Crime
  3. News
  4. ವಿಟ್ಲ‌ : ವೀರಕಂಬ ಕೆಲಿಂಜ ಉಳ್ಳಾಲ್ತಿ ದೇಗುಲದ ಕಾಣಿಕೆ ಡಬ್ಬ ದೋಚಿದ ಕಳ್ಳರು – ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ

ವಿಟ್ಲ‌ : ವೀರಕಂಬ ಕೆಲಿಂಜ ಉಳ್ಳಾಲ್ತಿ ದೇಗುಲದ ಕಾಣಿಕೆ ಡಬ್ಬ ದೋಚಿದ ಕಳ್ಳರು – ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ

ವಿಟ್ಲ‌ : ವೀರಕಂಬ ಕೆಲಿಂಜ ಉಳ್ಳಾಲ್ತಿ ದೇಗುಲದ ಕಾಣಿಕೆ ಡಬ್ಬ ದೋಚಿದ ಕಳ್ಳರು – ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ
0

ನ್ಯೂಸ್ ಆ್ಯರೋ : ವಿಟ್ಲ ಸಮೀಪದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಒಡೆದು ಕಳ್ಳರು ಹಣ ಎಗರಿಸಿದ ಘಟನೆ ಕಳೆದ ತಡರಾತ್ರಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳ ಪೈಕಿ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರವೂ ಒಂದು. ಕ್ಷೇತ್ರದ ಪಕ್ಕದ ಹೆದ್ದಾರಿ ಬದಿಯಲ್ಲಿ ಕ್ಷೇತ್ರದ ಕಾಣಿಕೆಹುಂಡಿಯನ್ನು ಇಡಲಾಗಿತ್ತು. ಈ ರಸ್ತೆಯಲ್ಲಿ ತೆರಳುವ ಹಲವಾರು ವಾಹನ ಸವಾರರು ಪ್ರತಿನಿತ್ಯ ಕಾಣಿಕೆ ಹಾಕಿ ತೆರಳುತ್ತಿದ್ದರು.

ಕಳೆದ ತಡರಾತ್ರಿ ಯಾರೋ ಕಿಡಿಗೇಡಿಗಳು ಈ ಕಾಣಿಕೆಹುಂಡಿಯನ್ನು ಒಡೆದು ಹಣವನ್ನು ಕಳವುಗೈದಿದ್ದಾರೆ. ಕಾಣಿಕೆ ಹುಂಡಿಯನ್ನು ಒಡೆದಿರುವುದನ್ನು ಕಂಡ ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ವಿಟ್ಲ ಪೋಲಿಸ್ ಠಾಣೆಯಲ್ಲಿ‌ ಕಳವು ಪ್ರಕರಣ ದಾಖಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..