1. Home
  2. Education
  3. ಶಾಲೆಗೆ ಕೇಸರಿ ಬಣ್ಣ ಹಚ್ಚೇ ಹಚ್ಚುತ್ತೇವೆ ಎಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ – 8000 ಶಾಲೆಗಳಲ್ಲಿ ನಿರ್ಮಾಣವಾಗಲಿದೆ ವಿಶೇಷ ಕೊಠಡಿ

ಶಾಲೆಗೆ ಕೇಸರಿ ಬಣ್ಣ ಹಚ್ಚೇ ಹಚ್ಚುತ್ತೇವೆ ಎಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ – 8000 ಶಾಲೆಗಳಲ್ಲಿ ನಿರ್ಮಾಣವಾಗಲಿದೆ ವಿಶೇಷ ಕೊಠಡಿ

ಶಾಲೆಗೆ ಕೇಸರಿ ಬಣ್ಣ ಹಚ್ಚೇ ಹಚ್ಚುತ್ತೇವೆ ಎಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ – 8000 ಶಾಲೆಗಳಲ್ಲಿ ನಿರ್ಮಾಣವಾಗಲಿದೆ ವಿಶೇಷ ಕೊಠಡಿ
0

ನ್ಯೂಸ್ ಆ್ಯರೋ : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನಿರ್ಮಾಣವಾಗುತ್ತಿರುವ 8000 ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಡಲಾಗುತ್ತದೆ ಹಾಗೂ ಶಾಲೆಯ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿಕೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗೆ ಕೇಸರಿ ಬಣ್ಣ ಚೆನ್ನಾಗಿದೆ ಎಂದು ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಬಣ್ಣ ಹಾಕುತ್ತೇವೆ. ವಿವೇಕ ಶಾಲೆಯ ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ. ಆರ್ಕಿಟೆಕ್ಚರ್‌ ಆ ಜವಾಬ್ದಾರಿಯನ್ನು ಕೊಟ್ಟಿದ್ದೇವೆ. ಒಂದಿಷ್ಟು ಮಂದಿಗೆ ಕೇಸರಿ ಬಣ್ಣ ಅಲರ್ಜಿಯಾಗಿದೆ.ಅವರ ಪಕ್ಷದ ಧ್ವಜದಲ್ಲೂ ಕೇಸರಿ ಇದೆ. ಅದರ ಬದಲು ಕೇಸರಿ ಬಣ್ಣವನ್ನು ತೆಗೆದು ಪೂರ್ತಿ ಹಸಿರು ಬಣ್ಣ ಮಾಡಿಕೊಳ್ಳಲಿ ಎಂದು ಖಾರವಾಗಿ ಉತ್ತರಿಸಿದರು.

ಟಿಪ್ಪು ಬಯಸಿದ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ:

ತನ್ವೀರ್ ಸೇಠ್ ಅವರ ವೈಯಕ್ತಿಕ ವಿಚಾರ ಕಾಂಗ್ರೆಸ್‌ಗೆ ಸಂಬಂಧವಿಲ್ಲ ಎಂದು ಪಕ್ಷ ಹೇಳಿದೆ. ಅವರ ಹೇಳಿಕೆ ಅನುಸಾರ ಯಾವ ಮೂರ್ತಿಗಳನ್ನೂ ಮಾಡಲೇಬಾರದು. ಇದ್ದ ಮೂರ್ತಿಗಳನ್ನು ತೆಗೆಯಬೇಕಾ? ಈ ರೀತಿ ಹೇಳುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ಮೈಸೂರಲ್ಲಿ ಟಿಪ್ಪು ಮೂರ್ತಿ ನಿರ್ಮಾಣ ಮಾಡುವುದನ್ನು ಜನ ನಿರ್ಧಾರ ಮಾಡುತ್ತಾರೆ. ಜನಕ್ಕೆ ವಿರೋಧ ಮಾಡುವ ಹಕ್ಕಿದೆ. ಸತ್ಯ ಹೇಳುವುದಕ್ಕೆ ಕೆಲವರು ಸಹಿಸುವುದಿಲ್ಲ. ಇನ್ನೂ ಕೆಲ ಪಕ್ಷಗಳು ಸುಳ್ಳು ಹೇಳಿಕೊಂಡೇ ಬದುಕಿದೆ ಎಂದರು.

ದೇಶ ಕಂಡಂತಹ ಅತ್ಯಂತ ಶ್ರೇಷ್ಠ ಅಂತಾ ಟಿಪ್ಪು ಬಗ್ಗೆ ತಿಳಿದಿದ್ದೆವು. ಟಿಪ್ಪು ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನ ಒಡೆದು ಮಸೀದಿ ನಿರ್ಮಾಣ ಮಾಡಿದ್ದಾನೆ. ಪಹಣಿಯಲ್ಲಿ ಇರೋದು ಪರ್ಷಿಯನ್‌ ಪದ ಅಂತಾ ಗೊತ್ತಾಯಿತು. ಪಹಣಿ ಅಂದರೆ ಕನ್ನಡದ ಪದ ಅಂತ ಅಂದುಕೊಂಡಿದ್ದೆವು. ಶಿರಸ್ತೇದಾರ್‌ ಅಂದರೆ ಕನ್ನಡ ಅಂದುಕೊಂಡು ಬಿಟ್ಟಿದ್ವಿ. ಕನ್ನಡವನ್ನು ಕೊಂದಿದ್ದು ಟಿಪ್ಪು ಅಂತಾ ಈಗ ಗೊತ್ತಾಗ್ತಿದೆ ಎಂದರು.

ಟಿಪ್ಪು ಸುಲ್ತಾನ್ ಕೊಡಗು, ಕೇರಳದಲ್ಲಿ ಬಲವಂತವಾಗಿ ಮತಾಂತರವನ್ನು ನಡೆಸಿದ್ದು, ಆಗದವರನ್ನು ಕೊಲೆ ಮಾಡಿದ್ದಾನೆ. ದೇಶದಲ್ಲಿ ಟಿಪ್ಪುನನ್ನು ಕೆಂಪೇಗೌಡರಿಗೆ ಹೋಲಿಸಲಾಗುತ್ತಿದೆ. ಕೆಂಪೇಗೌಡರು ಎಲ್ಲರೂ ಚೆನ್ನಾಗಿದ್ದು, ದೇಶ ಇನ್ನೂ 100 ವರ್ಷದ ನಂತರ ಹೇಗಿರಬೇಕು ಎಂದು ಕನಸು ಕಂಡವರು. ನಮ್ಮ ದೇಶಕ್ಕೆ ಟಿಪ್ಪು ಸುಲ್ತಾನ್‌ ಏನು ಕೇಡು ಮಾಡಿದ್ದಾನೆ ಎಂದು ತಿಳಿದಿದ್ದರು ಟಿಪ್ಪು ಬಯಸಿದ ರಾಷ್ಟ್ರ ಆಗಬೇಕು ಅಂತಾ ಹೊರಟಿದ್ದಾರೆ ಎಂದರು.