ಜೀ ವಾಹಿನಿಯ ಜೋಡಿ ನಂ.1 ರಿಯಾಲಿಟಿ ಶೋ ಗೆದ್ದ ಅಭಿಜಿತ್ ರೋಹಿಣಿ ದಂಪತಿ – ಬಹುಮಾನವಾಗಿ ಸಿಕ್ಕಿದ್ದೆಷ್ಟು ಲಕ್ಷ ಗೊತ್ತಾ..!??

ನ್ಯೂಸ್ ಆ್ಯರೋ : ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು, ಒಂದು ಶೋ ಮುಗಿಯುತ್ತಿದ್ದಂತೆ ಮತ್ತೊಂದು ರಿಯಾಲಿಟಿ ಶೋ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುತ್ತವೆ. ಕಾಮಿಡಿ, ಸಿಂಗ್, ಡಾನ್ಸ್ ಸೇರಿದಂತೆ ಅನೇಕ ರೀತಿಯ ರಿಯಾಲಿಟಿ ಶೋಗಳು ಕನ್ನಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಇವುಗಳ ಜೊತೆಗೆ ಕನ್ನಡದಲ್ಲಿ ವಿಭಿನ್ನ ಕಾರ್ಯಕ್ರಮಗಳು ಸಹ ಪ್ರಸಾರವಾಗುತ್ತಿವೆ. ಅಂತಹ ಶೋಗಳಲ್ಲಿ ಕನ್ನಡಿಗರ ಗಮನ ಸೆಳೆದ ಕಾರ್ಯಕ್ರಮ ಜೋಡಿಗಳ ರಿಯಾಲಿಟಿ ಶೋ ಕೂಡ ಗುರುತಿಸಿಕೊಂಡಿದ್ದು, ಪ್ರೀತಿಸಿ ವಿವಾಹವಾದ ಪ್ರಣಯ ಹಕ್ಕಿಗಳ ಜೀವನವನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಶೋ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಕಲರ್ಸ್ ವಾಹಿನಿಯಲ್ಲಿ ಜೋಡಿಗಳ ರಿಯಾಲಿಟಿ ಶೋ ಹಿಟ್ ಆದ ಬೆನ್ನಲ್ಲೇ ಜೀ ವಾಹಿನಿ ಕೂಡ ಜೋಡಿ ನಂ.1 ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದು, ನಟ ಅಭಿಜಿತ್ ದಂಪತಿ ಈ ಶೋ ನ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಹೌದು.. ಜೀ ಕನ್ನಡ ವಾಹಿನಿಯೂ ಜನರನ್ನು ಮನರಂಜಿಸುವಲ್ಲಿ ಯಾವಾಗಲು ಮುಂದೆ ಇರುತ್ತದೆ. ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ, ಕಾಮಿಡಿ ಕಿಲಾಡಿಗಳು ಮುನ್ನುಗ್ಗುತ್ತಿದ್ದು, ವೀಕ್ಷಕರ ಮನ ಗೆದ್ದಿದ್ದ ಜೋಡಿ ನಂಬರ್ ಒನ್ ರಿಯಾಲಿಟಿ ಶೋನ ಫಿನಾಲೆ ಅದ್ದೂರಿಯಾಗಿ ನಡಿದಿದೆ.
ಮಾಳವಿಕಾ ಅವಿನಾಶ್, ‘ನೆನಪಿರಲಿ’ ಪ್ರೇಮ್ ಜಡ್ಜ್ ಆಗಿದ್ದ ಈ ಶೋ ಅಲ್ಲಿ ಬಹಳ ವರ್ಷಗಳ ಬಳಿಕ ಮತ್ತೆ ಶ್ವೇತಾ ಚೆಂಗಪ್ಪ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು, ಸಂತು-ಮಾನಸ, ಕಿರಿಕ್ ಕೀರ್ತಿ-ಅರ್ಪಿತಾ, ನೇಹಾ ಗೌಡ-ಪ್ರಣವ್, ಮಿತ್ರ-ಗೀತಾ, ಗೋವಿಂದೇ ಗೌಡ-ದಿವ್ಯಾ, ನಿನಾದ್-ರಮ್ಯಾ, ಪಂಕಜಾ ಶಿವಣ್ಣ-ಭವಾನಿ ಸಿಂಗ್, ಕೃಷ್ಣೇ ಗೌಡ ದಂಪತಿ, ಕಂಬದ ರಂಗಯ್ಯ ದಂಪತಿ ಈ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.
ಜೋಡಿ ನಂಬರ್ 01 ಕಾರ್ಯಕ್ರಮದ ಫಿನಾಲೆ ಹಂತದವರೆಗೂ 10 ಜೋಡಿಗಳು ಬಂದಿದ್ದು, ಆ ಪೈಕಿ ಅಭಿಜಿತ್ ಮತ್ತು ರೋಹಿಣಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ.
ಜೋಡಿ ನಂಬರ್ 1 ಗೆದ್ದ ನಟ ಅಭಿಜಿತ್ – ರೋಹಿಣಿ ಜೋಡಿಗೆ 5 ಲಕ್ಷ ರೂ. ಬಹುಮಾನ ಸಿಕ್ಕಿದ್ದು, “ನನಗೆ ಇಲ್ಲಿ ಸಿಕ್ಕ ನಗದು ಬಹುಮಾನಕ್ಕಿಂತ ಇಲ್ಲಿ ಸಿಕ್ಕಿರುವ ಗೆಲುವು ಬಹಳ ಖುಷಿ ಕೊಟ್ಟಿದೆ. ನಮಗೆ ಜಯ ಸಿಕ್ಕಿ ಬಹಳ ಸಮಯ ಆಗಿತ್ತು. ಇದಾದ ಮೇಲೆ ನನ್ನ ಪತಿ ವಿಜಯಪತಾಕೆ ಹಾರಿಸಬೇಕು” ಎಂದಿದ್ದಾರೆ ರೋಹಿಣಿ.
“ನಮಗೆ ಈ ಟ್ರೋಫಿ, ಈ ಬಹುಮಾನ ಎಲ್ಲವೂ ನಮಗೆ ಆಕ್ಸಿಜನ್ ಎಂದು ಭಾವಿಸುವೆ. ಎಲ್ಲರಿಗೂ ಧನ್ಯವಾದಗಳು” ಎಂದು ಅಭಿಜಿತ್ ಹೇಳಿದ್ದಾರೆ. ಇನ್ನೂ ಕಿರಿಕ್ ಕೀರ್ತಿ ಮತ್ತು ಅರ್ಪಿತ ಜೋಡಿ ನಂಬರ್ 1 ಕಾರ್ಯಕ್ರಮದ ಮೊದಲ ರನ್ನರ ಅಪ್ ಆಗಿದ್ದು, 3 ಲಕ್ಷ ರೂ. ಬಹುಮಾನ ನೀಡಲಾಗಿದೆ.
ಎರಡನೇ ರನ್ನರ್ ಅಪ್ ನ್ನು ಸಂತು ಮತ್ತು ಮಾನಸಗೆ ಒಲಿದಿದ್ದು,1 ಲಕ್ಷ ರೂ. ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.