ಬಿಗ್ ಬಾಸ್ ಶೋ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕರಿಯ ನಟಿ ಅಭಿನಯಶ್ರೀ – ಬಿಗ್ ಬಾಸ್ ಶೋ ಬರೀ ಬೋಗಸ್, ನಿರ್ಮಾಪಕರ ನೆಚ್ಚಿನ ಸ್ಪರ್ಧಿಗಳಿಗಷ್ಟೇ ಅಲ್ಲಿ ಅವಕಾಶವಂತೆ…!!

ನ್ಯೂಸ್ ಆ್ಯರೋ : ಬಿಗ್ ಬಾಸ್ ಪ್ರಸ್ತುತ ಭಾರತದ ಕಿರುತೆರೆಯಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋ. ವಿದೇಶದಲ್ಲಿ ಬಿಗ್ ಬ್ರದರ್ ಹೆಸರಿನಲ್ಲಿ ಪ್ರಾರಂಭವಾದ ಈ ಶೋ ಭಾರತದಲ್ಲಿ ಬಿಗ್ ಬಾಸ್ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.
ಭಾರತದಲ್ಲಿ ಬಿಗ್ ಬಾಸ್ ನೋಡುವವರ ದೊಡ್ಡ ವರ್ಗವೇ ಇದೆ. ಇನ್ನೊಂದು ಕಡೆ ಇದೆಲ್ಲ ಬೋಗಸ್ ಸ್ಕ್ರಿಪ್ಟೆಡ್, ಎಲ್ಲ ಮೊದಲೇ ಪ್ಲಾನ್ ಆಗಿರುತ್ತದೆ ಅನ್ನೋವವರು ಇದ್ದಾರೆ. ಈ ಬಗ್ಗೆ ಬಿಗ್ ಬಾಸ್ ನಿಂದ ಹೊರ ಬಂದ ಸ್ಪರ್ದಿಗಳಲ್ಲಿ ಕೇಳಿದರೆ ಯಾರು ತುಟಿಬಿಚ್ಚಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಕೆಲ ಸ್ಪರ್ಧಿಗಳು ಬಿಗ್ ಬಾಸ್ ವಿರುದ್ಧವಾಗಿ ಮಾತಾಡಿದ್ದೂ ಉಂಟು. ಇದೀಗ ಬಿಗ್ ಬಾಸ್ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಫರ್ಧಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ದರ್ಶನ್ ಅಭಿನಯದ ಕನ್ನಡಬ್ಲಾಕ್’ಬಸ್ಟರ್ ಸಿನಿಮಾ ಕರಿಯ ಚಿತ್ರದ ನಾಯಕಿ ಅಭಿನಯಶ್ರೀ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆಡಿದ್ದಾರೆ.
ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ತೆಲುಗು ಬಿಗ್ ಬಾಸ್ ಸೀಸನ್ 6 ಸದ್ಯ ಪ್ರಸಾರಗೊಳ್ಳುತ್ತಿದ್ದು ಈ ಬಾರಿ ವಿವಿಧ ರೀತಿಯ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಬಿಡಲಾಗಿತ್ತು ಅದರಲ್ಲಿ ನಟಿ ಅಭಿನಯಶ್ರೀ ಕೂಡ ಒಬ್ಬರಾಗಿದ್ದರು.
ಆದರೆ ಬಿಗ್ ಬಾಸ್ ಸೀಸನ್ 6 ರಿಂದ ಅಭಿನಯಶ್ರೀ 14 ದಿನಗಳಲ್ಲಿಯೇ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಡೆದ ಸಂದರ್ಶವೊಂದರಲ್ಲಿ ನಟಿ ಬಿಗ್ ಬಾಸ್ ಬಗ್ಗೆ ಆರೋಪ ಒಂದನ್ನು ಮಾಡಿದ್ದಾರೆ.
ತೆಲುಗು ಬಿಗ್ ಬಾಸ್ ಸೀಸನ್ 6ರಲ್ಲಿ ನಾನು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಾನಿದ್ದ ಸನ್ನಿವೇಶಗಳನ್ನು ಕಟ್ ಮಾಡಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ನನ್ನ ತಾಯಿ ಮನವಿ ಮಾಡಿದರೂ ಸಹ ಅವರು ಕೇಳಲಿಲ್ಲ. ಬಿಗ್ ಬಾಸ್ ಆಯೋಜಕರು ನಿರ್ಮಾಪಕರ ಮೆಚ್ಚಿನ ಸ್ಫರ್ಧಿಗಳನ್ನು ಮಾತ್ರ ಉಳಿಸಿಕೊಂಡು ಇತರ ಸ್ಪರ್ಧಿಗಳನ್ನು ಅನ್ಯಾಯವಾಗಿ ಹೊರಹಾಕಲಾಗುತ್ತಿದೆ. ಬಿಗ್ ಬಾಸ್ ಆಯೋಜಕರು ತಮಗೆ ಬೇಕಾದವರನ್ನು ಉಳಿಸಿಕೊಂಡಾಗ, ಸ್ಪರ್ಧಿಗಳ ಆಟ ಮೆಚ್ಚಿ ಅಭಿಮಾನಿಗಳು ಮಾಡಿದ ವೋಟಿಂಗ್ ಬೋಗಸ್ ಆಗುತ್ತದೆ ಎಂದು ತೆಲುಗು ಬಿಗ್ ಬಾಸ್ ಸೀಸನ್ 6ರ ವಿರುದ್ಧ ಕಿಡಿಕಾರಿದ್ದಾರೆ.
ಸದ್ಯ ತೆಲುಗು ಬಿಗ್ ಬಾಸ್ ಬಗ್ಗೆ ಅಭಿನಯಶ್ರೀ ಆರೋಪ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಕೆಯ ಅಭಿಮಾನಿಗಳು ಕೂಡ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಕಿಡಿಕಾರಿದ್ದಾರೆ. ಬಿಗ್ ಬಾಸ್ ಒಂದು ಪೂರ್ವ ನಿರ್ಧಾರಿತ ಬೋಗಸ್ ಕಾರ್ಯಕ್ರಮ ಇಲ್ಲಿ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂಬ ಆರೋಪ ಮೊದಲಿಂದಲೇ ಇದ್ದು ಅದಕ್ಕೆ ನಟಿ ಅಭಿನಯಶ್ರೀ ಮಾಡಿರುವ ಆರೋಪ ಪುಷ್ಟಿ ನೀಡುವಂತಿದೆ.