1. Home
  2. Entertainment
  3. ಮದುವೆ ಬಗ್ಗೆ ಕೊನೆಗೂ ಡೆಡ್ ಲೈನ್ ಕೊಟ್ಟ ನಟ ಪ್ರಭಾಸ್ – ಬಾಹುಬಲಿ ನಟನ ಮದುವೆಗೂ ಸಲ್ಮಾನ್ ಖಾನ್ ಮದುವೆಗೂ ಇದೆಯಂತೆ ಲಿಂಕ್…!!

ಮದುವೆ ಬಗ್ಗೆ ಕೊನೆಗೂ ಡೆಡ್ ಲೈನ್ ಕೊಟ್ಟ ನಟ ಪ್ರಭಾಸ್ – ಬಾಹುಬಲಿ ನಟನ ಮದುವೆಗೂ ಸಲ್ಮಾನ್ ಖಾನ್ ಮದುವೆಗೂ ಇದೆಯಂತೆ ಲಿಂಕ್…!!

ಮದುವೆ ಬಗ್ಗೆ ಕೊನೆಗೂ ಡೆಡ್ ಲೈನ್ ಕೊಟ್ಟ ನಟ ಪ್ರಭಾಸ್ – ಬಾಹುಬಲಿ ನಟನ ಮದುವೆಗೂ ಸಲ್ಮಾನ್ ಖಾನ್ ಮದುವೆಗೂ ಇದೆಯಂತೆ ಲಿಂಕ್…!!
0

ನ್ಯೂಸ್ ಆ್ಯರೋ‌ : ಟಾಲಿವುಡ್ ನ ಬ್ಯಾಚುಲರ್ ಲಿಸ್ಟ್ ನಲ್ಲಿರೋ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮದುವೆ ಯಾವಾಗ ಅನ್ನೋದು ಇನ್ನೂ ಅವರ ಅಭಿಮಾನಿಗಳನ್ನು ಕಾಡುತ್ತಿರೋ ಪ್ರಶ್ನೆ. ಕೊನೆಗೂ ಇದೀಗ ಪ್ರಭಾಸ್ ತನ್ನ ಮದುವೆ ಬಗ್ಗೆ ಡೆಡ್ ಲೈನ್ ಘೋಷಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಬಾರಿ ಪ್ರಭಾಸ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಭಾಸ್‌ ತಮ್ಮ ಮದುವೆ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದು, ಕಾರ್ಯಕ್ರಮದ ಪ್ರೋಮೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಂದಮೂರಿ ಅವರು ಪ್ರಭಾಸ್‌ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಪ್ರಭಾಸ್‌ ಮಜವಾಗಿ ಉತ್ತರ ನೀಡಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರು ಪ್ರಭಾಸ್‌ ಅವರಿಗೆ ಮದುವೆ ಯಾವಾಗ ಎಂದು ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಪ್ರಭಾಸ್‌ ʻʻಸಲ್ಮಾನ್‌ ಖಾನ್‌ ಅವರು ಮದುವೆಯಾದ ನಂತರ ಮದುವೆ ಆಗುತ್ತೇನೆʼʼ ಎಂದು ಉತ್ತರ ನೀಡಿದ್ದಾರೆ. ನಟ ಗೋಪಿಚಂದ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆಗಾಗ ಪ್ರಭಾಸ್‌ ಅವರ ಕಾಲೆಳೆದಿದ್ದಾರೆ. ಇತ್ತೀಚೆಗೆ ನಿಧನರಾದ ಮಹೇಶ್ ಬಾಬು ಅವರ ತಂದೆ ಘಟ್ಟಮನೇನಿ ಶಿವರಾಮ ಕೃಷ್ಣ ಅವರ ಬಗ್ಗೆಯೂ ಕಾರ್ಯಕ್ರಮದಲ್ಲಿ ಪ್ರಭಾಸ್ ಪ್ರಸ್ತಾಪಿಸಿದ್ದಾರೆ. ಪ್ರಭಾಸ್ ಪಾಲ್ಗೊಂಡಿರುವ ಈ ಸಂಚಿಕೆ ಡಿಸೆಂಬರ್ 30ರಂದು ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಪ್ರಭಾಸ್ ಜತೆ ನಟ ಗೋಪಿಚಂದ್ ಕೂಡ ಸಾಥ್ ನೀಡಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ ಮೂಲಕ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಈ ಹಿಂದೆ ಅಷ್ಟೇ ನಟ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ಕೃತಿ ಸೆನೋನ್‌ ಪ್ರೀತಿಯ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಬಳಿಕ ನಟಿ ಈ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದರು. ಇನ್‌ಸ್ಟಾ ಪೋಸ್ಟ್‌ ಮೂಲಕ ಈ ಸುದ್ದಿಗಳ ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದರು.

ಕೃತಿ ಸೆನೋನ್‌ ಪೋಸ್ಟ್‌ನಲ್ಲಿ ʻʻಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ರೂಮರ್ಸ್‌ ಖಂಡಿವಾಗಿಯೂ ಬೇಸ್‌ಲೆಸ್‌ʼʼಎಂದು ಬರೆದುಕೊಂಡಿದ್ದರು. ಆದರೆ ಸಲ್ಮಾನ್ ಮದುವೆ ನಡೆಯೋದೇ ಡೌಟ್ ಇರೋವಾಗ ಇನ್ನೆಲ್ಲಿ ಪ್ರಭಾಸ್ ಮದುವೆ ಅಂತ ಅಭಿಮಾನಿಗಳು ನೊಂದು‌ ನುಡಯುತ್ತಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..