1. Home
  2. Entertainment
  3. ಆತ್ಮಹತ್ಯೆಗೆ ಯತ್ನಿಸಿದ್ದ ನಟಿ, ನಿರೂಪಕಿ ಅನುಪಮಾ ಗೌಡ – ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಯ ಕಾರಣ ರಿವೀಲ್..!!

ಆತ್ಮಹತ್ಯೆಗೆ ಯತ್ನಿಸಿದ್ದ ನಟಿ, ನಿರೂಪಕಿ ಅನುಪಮಾ ಗೌಡ – ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಯ ಕಾರಣ ರಿವೀಲ್..!!

ಆತ್ಮಹತ್ಯೆಗೆ ಯತ್ನಿಸಿದ್ದ ನಟಿ, ನಿರೂಪಕಿ ಅನುಪಮಾ ಗೌಡ – ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಯ ಕಾರಣ ರಿವೀಲ್..!!
0

ನ್ಯೂಸ್ ಆ್ಯರೋ‌ : ಬಿಗ್ ಬಾಸ್ ಸೀಸನ್ 9ಕ್ಕೆ ಹಳೆ ಸ್ಪರ್ಧಿ ಅನುಪಮಾ ಗೌಡ ಬಂದಿದ್ದಾರೆ. ಕಳೆದ ಬಾರಿಗಿಂತ ಅನುಪಮಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ 5’ ಕಾರ್ಯಕ್ರಮದಲ್ಲಿ ನಟಿ ಅನುಪಮಾ ಗೌಡ ಸ್ಪರ್ಧಿಸಿದ್ದರು. ‘ಬಿಗ್ ಬಾಸ್ ಕನ್ನಡ 5’ ಕಾರ್ಯಕ್ರಮದಲ್ಲಿ ಟಾಪ್ 7 ಹಂತದವರೆಗೂ ಬಂದಿದ್ದರು.

ಅಂದು ‘ಬಿಗ್ ಬಾಸ್’ ಮನೆಯಲ್ಲಿ ತಮ್ಮ ಲವ್ ಸ್ಟೋರಿ, ಬ್ರೇಕಪ್ ಕಹಾನಿಯನ್ನ ಬಿಚ್ಚಿಟ್ಟಿದ್ದರು. ಟಾಸ್ಕ್‌ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟು ಎರಡು ಬಾರಿ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದರು. ಈಗ ಮತ್ತೊಮ್ಮೆ ಅನುಪಮಾ ಗೌಡ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದು, ತಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ದೊಡ್ಮನೆಯಲ್ಲಿ ವಿಭಿನ್ನವಾಗಿ ಆಡುವ ಮೂಲಕ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಳ್ಳುತ್ತಿರುವ ಅನುಪಮಾ ತಮ್ಮ ಜೀವನದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದು, ವೈಯಕ್ತಿಕ ವಿಚಾರಕ್ಕೆ ನಾನು ಹತಾಶಳಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ಅನುಪಮಾ ಗೌಡ ಅವರಿಗೆ ನಟಿ ನೇಹಾ ಗೌಡ ಮನಸ್ಥೈರ್ಯ ತುಂಬಿದ್ದು, ನನಗೆ ಎರಡನೇ ಲೈಫ್ ಸಿಗಲು ನೇಹಾ ಕಾರಣ ಎಂದು ಅನುಪಮಾ ಹೇಳಿದ್ದಾರೆ. ಈಗ ಬಿಗ್ ಬಾಸ್ ಸೀಸನ್ 9 ರಲ್ಲಿ ಇಬ್ಬರು ಸ್ಪರ್ಧಿಗಳಾಗಿದ್ದು, ಅನುಪಮಾ ಗೌಡ ಹಾಗೂ ನೇಹಾ ಗೌಡ ಇಬ್ಬರು ಆತ್ಮೀಯ ಗೆಳತಿಯರು.

ಇನ್ನೂ 5ನೇ ಸೀಸನ್ ಅಲ್ಲಿ ಇದೇ ‘ಬಿಗ್ ಬಾಸ್’ ಮನೆಯಲ್ಲಿ ತಮ್ಮ ಲವ್ ಹಾಗೂ ಬ್ರೇಕಪ್ ಕಹಾನಿಯನ್ನ ಬಹಿರಂಗಗೊಳಿಸಿ, ಅನುಪಮಾ ಕಣ್ಣೀರು ಹಾಕಿದ್ದರು.

ಅನುಪಮಾ ಗೌಡ ಬೆಂಗಳೂರು ಹುಡುಗಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು ಇವರು. ಇವರಿಗೆ ಓರ್ವ ತಂಗಿ ಇದ್ದಾಳೆ. ಅನುಪಮಾ ಅವರದ್ದು ಬಡ ಕುಟುಂಬವಾಗಿತ್ತು. ಇವರ ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಸಿನಿಮಾಗಳಿಗೆ ಅಸೋಸಿಯೇಟ್ ಆಗಿದ್ದರು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಇವರಿಗೆ ಇತ್ತು.

‘ಲಂಕೇಶ್ ಪತ್ರಿಕೆ’ ಎಂಬ ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಅನುಪಮಾ ಗೌಡ ದಿನಕ್ಕೆ 100 ರೂಪಾಯಿ ಸಂಭಾವನೆಯನ್ನ ಪಡೆದಿದ್ದರು. ‘ಹಳ್ಳಿ ದುನಿಯಾ’ ಎಂಬ ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ಸ್ಪರ್ಧಿಸಿದ್ದರು. ಆನಂತರ ‘ಅಕ್ಕ’ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಅವರಿಗೆ ಸಿಕ್ಕಿತು.

‘ನಗಾರಿ’, ‘ಆ ಕರಾಳ ರಾತ್ರಿ’, ‘ತ್ರಯಂಬಕಂ’, ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರಗಳಲ್ಲಿ ಅನುಪಮಾ ಗೌಡ ಅಭಿನಯಿಸಿದ್ದಾರೆ. ‘ಚಿ ಸೌ ಸಾವಿತ್ರಿ’ ಸೀರಿಯಲ್‌ನಲ್ಲೂ ನಟಿಸಿದ್ದ ಅನುಪಮಾ ಗೌಡ, ‘ಮಜಾ ಭಾರತ’, ‘ರಾಜಾ ರಾಣಿ’, ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..