1. Home
  2. Entertainment
  3. ದಸರಾ ಹಬ್ಬಕ್ಕೆ ನಟಿ ಕೀರ್ತಿ ಸುರೇಶ್ ಮನೆಗೆ ಹೊಸ ಸದಸ್ಯನ‌ ಆಗಮನ – ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್…!!

ದಸರಾ ಹಬ್ಬಕ್ಕೆ ನಟಿ ಕೀರ್ತಿ ಸುರೇಶ್ ಮನೆಗೆ ಹೊಸ ಸದಸ್ಯನ‌ ಆಗಮನ – ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್…!!

ದಸರಾ ಹಬ್ಬಕ್ಕೆ ನಟಿ ಕೀರ್ತಿ ಸುರೇಶ್ ಮನೆಗೆ ಹೊಸ ಸದಸ್ಯನ‌ ಆಗಮನ – ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್…!!
0

ನ್ಯೂಸ್ ಆ್ಯರೋ : ದಕ್ಷಿಣ ಭಾರತದಲ್ಲಿ ನಟಿ ಕೀರ್ತಿ ಸುರೇಶ್​ ಅವರು ತುಂಬ ಫೇಮಸ್​ ಆಗಿದ್ದು, ಬಗೆಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. ನಟನೆ ಮತ್ತು ಗ್ಲಾಮರ್​ನಿಂದ ಅವರು ಅಭಿಮಾನಿಗಳ ಮನ ಗೆದ್ದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ, ‘ಮಹಾನಟಿ’ ಕೀರ್ತಿ ಸುರೇಶ್ ಅವರನ್ನು ಕಂಡ್ರೆ ಹಲವರಿಗೆ ಇಷ್ಟ. ಮುದ್ದಾದ ಮುಖವಿರುವ ಈ ಚೆಲುವೆ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಈಗಾಗಲೇ ಹಲವು ಹಿಟ್ ಸಿನಿಮಾ ನೀಡಿರುವ ಕೀರ್ತಿ ಕೈತುಂಬ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. 27ರ ಹರೆಯದ ಕೀರ್ತಿ ತಾಯಿ ನಟಿ ಮೇನಕಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಾಯಿಯಿಂದ ನಟನೆ ವಂಶಪಾರಂಪರ್ಯವಾಗಿ ಕೀರ್ತಿಗೆ ಬಂದಿರಬಹುದು.

ಮಲಯಾಳಂ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕ ಸುರೇಶ್ ಕುಮಾರ್ ಹಾಗೂ ತಮಿಳು ನಟಿ ಮೇನಕಾ ಅವರ ದ್ವಿತೀಯ ಪುತ್ರಿ ಕೀರ್ತಿ. ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಗ್ರಿ ಮುಗಿಸಿದ ಕೀರ್ತಿ 2000ರಲ್ಲಿ ತಂದೆಯ ಕೆಲ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡರು, ಕಿರುತೆರೆಯಲ್ಲೂ ಕಾಲಿಟ್ಟರು. ಮಲಯಾಳಂ ನಟ ದಿಲೀಪ್ ಜೊತೆ ‘ರಿಂಗ್ ಮಾಸ್ಟರ್’ ಸಿನಿಮಾದಲ್ಲಿ ಅಂಧ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಕೀರ್ತಿ, ಜನರ ಮೆಚ್ಚುಗೆ ಗೆಳಿಸಿದರು.

ಬೇರೆ ಬೇರೆ ಭಾಷೆಯ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಆರಂಭಿಸಿದ ಕೀರ್ತಿ ಎ.ಎಲ್.ವಿಜಯ್ ಜೊತೆ ‘ಇದು ಎನ್ನ ಮಾಯಂ’ ಸಿನಿಮಾದಲ್ಲಿ ನಟಿಸಿದ್ದರು. ಹೀಗೆ ತೆಲುಗು, ತಮಿಳು, ಮಲಯಾಳಂನಲ್ಲಿ ನಿರಂತರವಾಗಿ ಒಂದಾದಮೇಲೊಂದು ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿದ್ದಾರೆ ಇವರು. ಅಷ್ಟೇ ಅಲ್ಲದೆ ‘ಸಾಮಿ ಸ್ಕ್ವೇರ್’ ಸಿನಿಮಾದಲ್ಲಿ ‘ಪುದು ಮೆಟ್ರೋ ರೇಲ್’ ಹಾಡಿಗೆ ದನಿಯಾಗಿದ್ದರು ಇವರು.

ನಟನೆಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಕೀರ್ತಿ ಸದ್ಯ ವೈಯಕ್ತಿಕವಾಗಿಯೂ ಇಂಡಿಪೆಂಡೆಂಟ್ ವುಮೆನ್ ಆಗಿ ಗುರುತಿಸಿಕೊಳ್ಳುತ್ತಿದ್ದು, 1.78 ರೂ. ಕೋಟಿ ಮೌಲ್ಯದ ಕಾರನ್ನು ಖರೀದಿಸಿದ್ದಾರೆ.

ಸರ್ಕಾರು ವಾರಿ ಪಾಟ್ ಸಿನೆಮಾದ ಬಳಿಕ ‘ಮಹಾ ನಟಿ’ಯ ಅದೃಷ್ಟ ಖುಲಾಯಿಸಿದ್ದು, ಸಿನಿಮಾದ ಸಕ್ಸಸ್ ಅನ್ನು ಕೀರ್ತಿ ಸುರೇಶ್ ದುಬಾರಿ ಕಾರು ಖರೀದಿಸುವ ಮೂಲಕ ಸಂಭ್ರಮಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಐಷಾರಾಮಿ ಕಾರನ್ನು ಖರೀದಿಸಿದ್ದು, ಬಿಎಂಡಬ್ಲ್ಯು- 7 ಶ್ರೇಣಿಯ ಕಾರನ್ನು ಕೀರ್ತಿ ತಮ್ಮ ಮನೆಗೆ ಬರ ಮಾಡಿ ಕೊಂಡಿದ್ದಾರೆ. ಆಯುಧ ಪೂಜೆಯಂದು ಹೊಸ ವಾಹನಕ್ಕೆ ಪೂಜೆ ಮಾಡಿದ್ದು, ಮುದ್ದಿನ ಶ್ವಾನದ ಜತೆ ಕಾರಿನಲ್ಲಿ ಜಾಲಿ ರೈಡ್ ಕೂಡ ಮಾಡಿದ್ದಾರೆ. ಕಾರಿನ ಪೂಜೆಯ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ತೆಲುಗಿನ ಯಂಗ್ ಟೈಗರ್ ಎನ್ ಟಿಆರ್ ನಾಯಕನಾಗಿ ನಟಿಸುತ್ತಿರುವ ಅದ್ಧೂರಿ ಪ್ರಾಜೆಕ್ಟ್‌ನಲ್ಲಿ ಕೀರ್ತಿ ಸುರೇಶ್ ಗೆ ಅವಕಾಶ ದೊರೆತಿದ್ದು, ಈ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು, ಪ್ರಸ್ತುತ ಸ್ಕ್ರಿಪ್ಟ್ ಕೆಲಸದಲ್ಲಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..