1. Home
  2. Entertainment
  3. ನೆಟ್ಟಿಗರಿಂದ ಟ್ರೋಲ್‌ ಆದ ಆದಿಪುರುಷ್ ಸಿನಿಮಾ – 700 ಕೋಟಿ ಬಜೆಟ್ ಚಿತ್ರ ಹಾಲಿವುಡ್ ನ ಗೇಮ್ ಆಫ್ ತ್ರೋನ್ ಕಾಪಿ ಅಂತೆ..!!

ನೆಟ್ಟಿಗರಿಂದ ಟ್ರೋಲ್‌ ಆದ ಆದಿಪುರುಷ್ ಸಿನಿಮಾ – 700 ಕೋಟಿ ಬಜೆಟ್ ಚಿತ್ರ ಹಾಲಿವುಡ್ ನ ಗೇಮ್ ಆಫ್ ತ್ರೋನ್ ಕಾಪಿ ಅಂತೆ..!!

ನೆಟ್ಟಿಗರಿಂದ ಟ್ರೋಲ್‌ ಆದ ಆದಿಪುರುಷ್ ಸಿನಿಮಾ – 700 ಕೋಟಿ ಬಜೆಟ್ ಚಿತ್ರ ಹಾಲಿವುಡ್ ನ ಗೇಮ್ ಆಫ್ ತ್ರೋನ್ ಕಾಪಿ ಅಂತೆ..!!
0

ನ್ಯೂಸ್ ಆ್ಯರೋ‌ : ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ಆದಿಪುರುಷ್ ಟೀಸರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಅಚ್ಚರಿ ಕಣ್ಣಿನಿಂದ ನೋಡಿದರೆ, ಇನ್ನು ಕೆಲವರು ಕಾರ್ಟೂನ್‌ಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ.

ಅಷ್ಟೇ ಅಲ್ಲ ಟೀಸರ್‌ನಲ್ಲಿ ಬಳಸಿರುವ ಅತಿಯಾದ ವಿಎಫ್‌ಎಕ್ಸ್‌ ಗ್ರಾಫಿಕ್ಸ್‌ ಕಂಡು ಬೇರೆ ಸಿನಿಮಾಗಳ ಜತೆ ಹೋಲಿಸಿ ಟ್ರೋಲ್ ‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಗೇಮ್ ಆಫ್ ಥ್ರೋನ್ಸ್ ಸಿನಿಮಾದ ಕಳಪೆ ಕಾಪಿ ಎಂದಿದ್ದಾರೆ. ಒಂದಷ್ಟು ಮಂದಿ ಕೊಂಚ ಏರು ಧ್ವನಿಯಲ್ಲಿಯೇ ಸಿನಿಮಾ ತಂಡಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. 700 ಕೋಟಿಯ ಟೆಂಪಲ್‌ ರನ್‌ ಎಂದು ಟ್ರೋಲ್‌ ಮಾಡಿದ್ದಾರೆ. ಹಾಗೇ ರಾವಣನ ಆರ್ಮಿ ಕಟಿಂಗ್‌ ಬಗ್ಗೆಯೂ ಹಾಸ್ಯ ಮಾಡಿದ್ದಾರೆ.

ಓಂ ರಾವತ್‌ ನಿರ್ದೇಶನದ ‘ಆದಿಪುರುಷ್‌’ ಸಿನಿಮಾದ ಮೊದಲ ಅರ್ಧ ಭಾಗದ ಟೀಸರ್‌ ಬಿಡುಗಡೆಯಾಗಿದೆ. ಪೌರಾಣಿಕ ಕಥಾನಕ ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ರಾಮನಾಗಿ‌ ಕಾಣಿಸಿಕೊಂಡಿದ್ದಾರೆ ಹಾಗೂ ರಾವಣನಾಗಿ ಬಾಲಿವುಡ್ ನಟ ಸೈಫ್‌ ಅಲಿಖಾನ್‌ ಅಬ್ಬರಿಸಿದ್ದಾರೆ. ಇನ್ನು ಬೆರಗಾಗುವ ವಿಚಾರ ಅಂದ್ರೆ ಈ ಸಿನಿಮಾ ನಿರ್ಮಾಣಕ್ಕೆ ನಿರ್ಮಾಣ ಸಂಸ್ಥೆ ಹೂಡಿರುವ ಬಂಡವಾಳ ಬರೋಬ್ಬರಿ 700 ಕೋಟಿ ರೂಪಾಯಿ ಎನ್ನಲಾಗಿದೆ.

ಟೀಸರ್’ ನ ಮೊದಲ ದೃಶ್ಯದಲ್ಲಿ ಆಳ ಸಮುದ್ರದಲ್ಲಿ ಧ್ಯಾನಸ್ಥನಾಗಿ ಕುಳಿತಂತೆ ಕಾಣಿಸಿಕೊಳ್ಳುವ ಪ್ರಭಾಸ್, ‘ನ್ಯಾಯದ ಕೈಯಿಂದ ಅನ್ಯಾಯದ ವಿನಾಶ’ ಎಂಬ ಡೈಲಾಗ್ ಹೇಳಿ ದುಷ್ಟ ಸಂಹಾರಕ್ಕೆ ಮುಂದಾಗುವ ದೃಶ್ಯಗಳನ್ನು ವಿಎಫ್ಎಕ್ಸ್, ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. ರಾವಣನಾಗಿ ಸೈಫ್, ಸೀತೆಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಕಾಣಿಸಿಕೊಂಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..