1. Home
  2. Entertainment
  3. ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣ್ಬೀರ್ ಆಲಿಯಾ ಜೋಡಿ – ಸೀಮಂತ ಕಾರ್ಯಕ್ರಮದ ಫೋಟೋಸ್ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣ್ಬೀರ್ ಆಲಿಯಾ ಜೋಡಿ – ಸೀಮಂತ ಕಾರ್ಯಕ್ರಮದ ಫೋಟೋಸ್ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣ್ಬೀರ್ ಆಲಿಯಾ ಜೋಡಿ – ಸೀಮಂತ ಕಾರ್ಯಕ್ರಮದ ಫೋಟೋಸ್ ವೈರಲ್
0

ನ್ಯೂಸ್ ಆ್ಯರೋ : ಈ ವರ್ಷ ಏಪ್ರಿಲ್ 14ಕ್ಕೆ ಸಪ್ತಪದಿ ತುಳಿದಿದ್ದ ಬಾಲಿವುಡ್’ನ ಕ್ಯೂಟ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಆಪ್ತರ ಸಮ್ಮುಖದಲ್ಲಿ ಆಲಿಯಾ ಭಟ್ ಸೀಮಂತ ಶಾಸ್ತ್ರ ನಡೆದಿದೆ.

ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ನಡೆದಿದ್ದು, ಆ ಶುಭ ಸಮಾರಂಭದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮೊದಲಿಗೆ ನಟಿ ಅನುಷ್ಕಾ ರಂಜನ್ ಇಂದು ಇನ್​ಸ್ಟಾಗ್ರಾಮ್​ನಲ್ಲಿ ಆಲಿಯಾ ಭಟ್ ಅವರ ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ. ಆಲಿಯಾ ಹಳದಿ ಬಣ್ಣದ ಉಡುಪು ಧರಿಸಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಆಲಿಯಾರೊಂದಿಗೆ ಸ್ನೇಹಿತೆಯರಾದ ಅನುಷ್ಕಾ, ರಿಷಿಕಾ ಮೋಘೆ ಮತ್ತು ಅವರ ಸಹೋದರಿ ಶಾಹೀನ್ ಭಟ್ ನಿಂತಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಲಿಯಾ ಭಟ್ ಕೂಡ ತಮ್ಮ ಸೀಮಂತ ಕಾರ್ಯಕ್ರಮ ಫೋಟೋಗಳನ್ನು ಇನ್ ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದು, ಕುಟುಂಬದ ಜತೆ ಇರುವ ಫೋಟೋಕ್ಕೆ ‘ಪ್ರೀತಿ ಮಾತ್ರ’ ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಭಟ್ ಹಂಚಿಕೊಂಡಿರುವ ಹಲವು ಫೋಟೋಗಳ ಪೈಕಿ ಮಡಿಲಲ್ಲಿ ಕುಳಿತಿರುವ​ ಆಲಿಯಾ ಕೆನ್ನೆಗೆ ರಣಬೀರ್ ಕಪೂರ್ ಮುತ್ತಿಟ್ಟಿರುವ ಚಿತ್ರ ನೆಟ್ಟಿಗರ ಗಮನ ಸೆಳೆದಿದ್ದು, ಈ ಫೋಟೋ ಸಖತ್ ವೈರಲ್ ಆಗಿದೆ.

ಸೀಮಂತ ಶಾಸ್ತ್ರದಲ್ಲಿ ಅಲಿಯಾ ಅವರ ಅತ್ತೆ ನೀತು ಕಪೂರ್, ಪತಿ ರಣ್​ಬೀರ್​ ಕಪೂರ್​, ರಿದ್ಧಿಮಾ ಕಪೂರ್, ಆಲಿಯಾ ತಂದೆ ಮಹೇಶ್ ಭಟ್, ನಿರ್ದೇಶಕ ಅಯಾನ್ ಮುಖರ್ಜಿ, ಪೂಜಾ ಭಟ್, ಕರಿಷ್ಮಾ ಕಪೂರ್ ಸೇರಿದಂತೆ ಅನೇಕ ದೊಡ್ಡ ಬಿ-ಟೌನ್ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.

ಬಹು ದಿನಗಳಿಂದ ಡೇಟಿಂಗ್​ನಲ್ಲಿದ್ದ ರಾಲಿಯಾ ಜೋಡಿ ತಮ್ಮ ನಿವಾಸದಲ್ಲೇ ಈ ವರ್ಷ ಏಪ್ರಿಲ್​​ 14ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದರು. ಮದುವೆಯಾಗಿ ಸರಿ ಸುಮಾರು 57ನೇ ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ಆಲಿಯಾ ಭಟ್ ತಿಳಿಸುವ ಮೂಲಕ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದ್ದರು. ಶೀಘ್ರದಲ್ಲೇ ಚೋಟಾ ಆಲಿಯಾ ಅಥವಾ ಚೋಟಾ ರಣ್​ಬೀರ್​ ಆಗಮನವಾಗಲಿದ್ದು ಇಂದು ತಮ್ಮ ಕುಟುಂಬಸ್ಥರು, ಆತ್ಮೀಯರೊಂದಿಗೆ ಆಲಿಯಾ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..