ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್ – ಈ ತಿಂಗಳಾಂತ್ಯಕ್ಕೆ ‘ಶ್ಯಾನೆ ಟಾಪ್’ ಬೆಡಗಿಯ ಮದುವೆ…!!

ನ್ಯೂಸ್ ಆ್ಯರೋ : ಕನ್ನಡ ಚಿತ್ರರಂಗದಲ್ಲಿ ಸದ್ಯ ಮುಂಚೂಣಿಯಲ್ಲಿರುವ ನಾಯಕಿಯರ ಪೈಕಿ ಅದಿತಿ ಪ್ರಭುದೇವ ಕೂಡ ಒಬ್ಬರು. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಾಚಾರಿ’, ‘ಆನ’, ‘ತೋತಾಪುರಿ’, ‘ಗಜಾನನ ಅಂಡ್ ಗ್ಯಾಂಗ್’,‘ಓಲ್ಡ್ ಮಾಂಕ್’, ಮುಂತಾದ ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಸದ್ಯ ಅದಿತಿ ಪ್ರಭುದೇವ ಕೈಯಲ್ಲಿ ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಸಾಕಷ್ಟು ಚಿತ್ರಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವಾಗಲೇ ನಟಿ ಅದಿತಿ ಪ್ರಭುದೇವ ಸದ್ಯ ಹಸೆಮಣೆ ಏರಲು ಸಜ್ಜಾಗುತ್ತಿದ್ದು, ಅವರ ಮದುವೆ ಡೇಟ್ ಫಿಕ್ಸ್ ಆಗಿದೆ.
ಹೌದು.. ಇದೇ ಬರುವ ನವೆಂಬರ್ ರಂದು ಶ್ಯಾನೆ ಟಾಪ್’ ಹುಡುಗಿ ಅದಿತಿ ವಿವಾಹ ಸಮಾರಂಭ ನಡೆಯಲ್ಲಿದ್ದು, ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಯಶಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅದಿತಿ ವೆಡಿಂಗ್ ಕಾರ್ಡ್ ವೈರಲ್ ಆಗಿದ್ದು, ಕೊನೆಗೂ ಅದಿತಿ ಮದುವೆ ಯಾವಾಗ ಎಂಬ ಪ್ರಶ್ನೆಗೆ ತೆರೆಬಿದ್ದಿದೆ.
‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿ ಮೂಲಕ ಅದಿತಿ ಪ್ರಭುದೇವ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು. 2017ರಲ್ಲಿ ‘ಧೈರ್ಯಂ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದರು.
ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ನಟಿಸಿ ಅಭಿಮಾನಿಗಳ ಹೃದಯ ಕದ್ದ ಚೆಲುವೆ ಈ ನಮ್ಮ ಕನ್ನಡದ ಹುಡುಗಿ ಅದಿತಿ ಪ್ರಭುದೇವ. ಇದಾದ ಬಳಿಕ ತಮ್ಮ ಮನೋಹರ ನಟನೆಯಿಂದಲೇ ಸುನಿ ನಿರ್ದೇಶನದ ‘ಬಜಾರ್’ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.
ಅಲ್ಲದೇ ಚಂದನವನದ ಟಾಪ್ ನಟಿಯರ ಪೈಕಿ ಅದಿತಿ ಪ್ರಭುದೇವ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿಯೂ ಮುನ್ನಡೆ ಸಾಧಿಸಿದ್ದು, ಕೈ ತುಂಬಾ ಸಿನೆಮಾಗಳನ್ನಿಟ್ಟುಕೊಂಡು ಬ್ಯುಸಿಯಾಗಿರುವ ಈಕೆ ಸದ್ಯ ಶ್ರೀಮತಿಯಾಗಲು ಅಣಿಯಾಗುತ್ತಿದ್ದಾರೆ. ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾಂತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ವಿಯನ್ನು ಅದಿತಿ ವರಿಸಲಿದ್ದು, ಯಶಸ್ವಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕೃಷಿ ಕ್ಷೇತ್ರದ ಕಡೆಗೂ ಒಲವು ಹೊಂದಿದ್ದಾರೆ. ಗ್ರಾಮೀಣ ಭಾಗದ ಸೊಗಡಿನ ಬಗ್ಗೆ ಅತೀವ ಅಭಿಮಾನ ಹೊಂದಿರುವ ಮತ್ತು ಕೃಷಿಕ ಕುಟುಂಬದ ಬಗ್ಗೆ ಆಸಕ್ತಿಯಿದ್ದ ಅದಿತಿ ತಮ್ಮ ನಿರೀಕ್ಷೆಯ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.