ಬಟ್ಟೆ ಬಿಚ್ಚಿ ಹೊಡೀತಿನಿ ಎಂದು ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದ ಅಪ್ಪು ಪಪ್ಪು ಖ್ಯಾತಿಯ ನಟ – ಸ್ನೇಹಿತ್ ಪರ ನಿಂತ ರಿಯಲ್ ಸ್ಟಾರ್ ಉಪೇಂದ್ರ

ನ್ಯೂಸ್ ಆ್ಯರೋ : ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ ಇಲ್ಲಸಲ್ಲದ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಮಹಿಳೆಗೆ ನಿಂದಿಸಿ ಅವಾಜ್ ಹಾಕಿದ ಸ್ನೇಹಿತ್ ಮೇಲೆ ಕೇಸ್ ದಾಖಲಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಈ ಹಿಂದೆ ಎದುರು ಮನೆ ನಿವಾಸಿ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಅಂತ ಕೇಸ್ ದಾಖಲಾಗಿತ್ತು. ಬಳಿಕ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತು. ಇದೀಗ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.

ಸ್ನೇಹಿತ್ ಎದುರು ಮನೆಯ ಮಹಿಳೆ ಅನ್ನಪೂರ್ಣ ಎನ್ನುವವರಿಗೆ ನಿಂದಿಸಿದ್ದಾರೆ ಅಂತ ಎಫ್ಐಆರ್ ದಾಖಲಾಗಿದೆ. ಅನ್ನಪೂರ್ಣ ತನ್ನ ಪತಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಜಾಗ್ವಾರ್ ಕಾರಿನಲ್ಲಿ ಬಂದ ಸ್ನೇಹಿತ್ ಮಹಿಳೆಯ ಕಾರಿಗೆ ಡಿಕ್ಕಿ ಹೊಡೆಯುವಂತೆ ಚಮಕ್ ಕೊಟ್ಟಿದ್ದ. ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಲ್ಲಿಂದ ಹೋಗ್ತಾ ಇರು, ಸೀರೆ ಬಿಚ್ಚಿ ಹೊಡಿತೀನಿ ಅಂದಿದ್ದಾನೆ ಅಂತ ಮಹಿಳೆ ದೂರು ನೀಡಿದ್ದಾರೆ. ಅಲ್ಲದೆ, ಮಹಿಳೆಯ ಪತಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಹಿಂದೆಯೂ ಮನೆ ಬಳಿ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಸ್ನೇಹಿತ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಇನ್ನು ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಸೌಂದರ್ಯ ಜಗದೀಶ್ ಮತ್ತು ಪತ್ನಿ ರೇಖಾ, ಮಗನ ತಪ್ಪಿಲ್ಲ, ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಸ್ನೇಹಿತ್ ಬೆಂಬಲಕ್ಕೆ ನಿಂತಿದ್ದಾರೆ. ಸೌಂದರ್ಯ ಜಗದೀಶ್ ನನಗೆ 25 ವರ್ಷಗಳಿಂದ ಪರಿಚಯ. ಸ್ನೇಹಿತ್’ನನ್ನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆ ಆಯಿತು. ನಾನು ಕಂಡಂತೆ ಸ್ನೇಹಿತ್ ತುಂಬಾ ವಿನಯವಂತ. ಬೆಳೆಯುತ್ತಿರುವ ಹುಡುಗನ ಮೇಲೆ ಯಾಕೆ ಈ ರೀತಿ ಆರೋಪ ಮಾಡಿದ್ದಾರೆ. ಮನಸ್ತಾಪಗಳಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಉತ್ತಮ ಅಂತ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.